ಹಾವೇರಿ:ಯೂಕ್ರೇನ್​ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾಗಿರುವ ನವೀನ್​ ಶೇಖರಪ್ಪ ಗ್ಯಾನಗೌಡರ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಭೇಟಿ ನೀಡಿದ್ದಲ್ಲದೆ, ನವೀನ್​ ತಂದೆ-ತಾಯಿ ಸಾಂತ್ವನ ಹೇಳಿದ್ದಾರೆ.
ಇಂದು ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಬಿಎಸ್​ವೈ ಮತ್ತು ವಿಜಯೇಂದ್ರ, ನವೀನ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ನವೀನ್​ ಪಾರ್ಥೀವ ಶರೀರದ ಮುಖ ನೋಡಬೇಕು ಎನ್ನುವುದು ತಂದೆ-ತಾಯಿಯ ಬಯಕೆ. ಅದಕ್ಕಾಗಿ ನಾನು ಪ್ರಧಾನಿ ಹಾಗೂ ಮುಖ್ಯಮಂತ್ರಿಯವರ ಜತೆ ಮಾತನಾಡಿದ್ದೇನೆ. ಆದಷ್ಟು ಬೇಗ ಪಾರ್ಥಿವ ಶರೀರವನ್ನು ತರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರ್ತವ್ಯ ಎಂದು ಬಿಎಸ್​ವೈ ಹೇಳಿದರು.
ಯೂಕ್ರೇನ್​ನಲ್ಲಿ ಯುದ್ಧದ ಗಂಭೀರತೆ ಜಾಸ್ತಿ ಇದೆ. ತಕ್ಷಣ ಪಾರ್ಥಿವ ಶರೀರ ತರಲು ಸಮಸ್ಯೆ ಆಗುತ್ತಿದೆ. ಪ್ರಧಾನಿ ಮೋದಿಜಿಯವರೇ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರ ತರಿಸಲು ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು. ರಾಜ್ಯ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರಕ್ಕೆ ತೀರ್ಮಾನಿಸಲಾಗಿದೆ. ನಾಳೆ ಮುಖ್ಯಮಂತ್ರಿಯವರು ಬಂದಾಗ ಚೆಕ್ ಕೊಡಬಹುದು ಎಂದೂ ತಿಳಿಸಿದರು.
ಒಂದು ಸ್ಫೋಟ, ಒಂಬತ್ತು ಸಾವು: ಶುಭ ಸಮಾರಂಭದ ಮನೆಯಲ್ಲಿ ಸೂತಕದ ಕಾವು..

ರೈಲ್ವೇ ಹಳಿಯಲ್ಲಿ ಸಾವಿನಲ್ಲಿ ಒಂದಾದ ಪ್ರೇಮಿಗಳು; ಮದುವೆಗೆ ವಿರೋಧಿಸಿದ್ದಕ್ಕೆ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 9 =
Remember me
