ಬೆಂಗಳೂರು:ಪಕ್ಷ ಅವನಿಗೇನು ಕಡಿಮೆ ಮಾಡಿದೆ. ಎಲ್ಲ ಕೊಟ್ಟ ಮೇಲೂ ರಾಜೀನಾಮೆ ಕೊಡುತ್ತೇನೆ ಅನ್ನೋದು ಈಸಿ. ಅವನಿಗೆ ಕರೆದು ಮಾತನಾಡುವೆ, ಸರಿಪಡಿಸುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗರಂ ಆಗಿ ಹೇಳಿದರು.
ಟಿಕೆಟ್ ವಂಚಿತ, ಅಸಮಾಧಾನಿತರನ್ನು ಕರೆಯಿಸಿಕೊಂಡು ಮಾತುಕತೆಯಾಡಿ ಮನವೊಲಿಕೆ ಕಾರ್ಯದಲ್ಲಿ ಬಿಎಸ್ ವೈ ತೊಡಗಿಕೊಂಡಿದ್ದು, ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಟಿಕೆಟ್ ಸಿಗದ ಕಾರಣ ಬೇಸರಗೊಂಡು ರಾಜೀನಾಮೆ ನಿರ್ಧರಿಸಿರುವ ಬಗ್ಗೆ ಸಿಡಿಮಿಡಿಗೊಂಡ ಅಸಮಾಧಾನಿತರ ಜತೆಗೆ ಚರ್ಚಿಸಿ ಮನವೊಲಿಸಲಾಗುತ್ತದೆ. ಪಕ್ಷದಿಂದ ಎಲ್ಲ ಪಡೆದ ಕುಮಾರಸ್ವಾಮಿಗೂ ಕರೆದು ಮಾತನಾಡುವೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೂ ಬರಲು ಹೇಳಿರುವೆ. ಮೂರ್ನಾಲ್ಕು ಜನರ ಜತೆಗೆ ಮಾತನಾಡಿರುವೆ. ಶೀಘ್ರವೇ ಸಹಜ ಸ್ಥಿತಿಗೆ ಬರಲಿದೆ. ಎಲ್ಲರೂ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ‘ಕಾವೇರಿ ನಿವಾಸದಲ್ಲಿ ಬಿಎಸ್ ವೈ ಅವರನ್ನು ಭೇಟಿಯಾದರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆರ್ ಎಸ್ ಎಸ್, ಬಿಜೆಪಿ ನನ್ನ ತಂದೆ ಮತ್ತು ನನಗೆ ಒಳ್ಳೆಯ ಸಂಸ್ಕಾರ ನೀಡಿದೆ. ನನ್ನ ತಂದೆ ಸಾವಿರಾರು ಕಾರ್ಯಕರ್ತರಿಗೆ ಮೇಲ್ಪಂಕ್ತಿಯಾಗಿದ್ದಾರೆ. ಪಕ ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದ್ದು, ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವೆಂದು ಕಾಂತೇಶ್ ಹೇಳಿದರು.
ಈ ಮಧ್ಯೆ ಬ್ಯಾಟರಾಯನಪುರದಲ್ಲಿ ಬಿಜೆಪಿ ಟಿಕೆಟ್ ವಂಚಿತರ ಪರವಾಗಿ ಪ್ರತಿಭಟನೆ ಗುರುವಾರವೂ ಮುಂದುವರಿದಿದ್ದು, ಪಕ್ಷ ಹಾಗೂ ನಾಯಕರ ವಿರುದ್ಧ ಧಿಕ್ಕಾರ ಮೊಳಗಿಸಿದರು. ಮುನೀಂದ್ರಕುಮಾರ್ ಅವರ ನೂರಾರು ಬೆಂಬಲಿಗರು ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
