ಸಂಪುಟ ವಿಸ್ತರಣೆ ಕೇವಲ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಶುಭ ಸುದ್ದಿ ಮಾತ್ರ ಆಗಿರದೆ ರಾಜ್ಯ ರಾಜಕೀಯದಲ್ಲಿ ಅನೇಕ ರೀತಿಯ ಸಂದೇಶ ರವಾನಿಸಿರುವುದು ಯಡಿಯೂರಪ್ಪ ರಾಜಕೀಯ ಚಾಣಾಕ್ಷತನಕ್ಕೆ ಸಾಕ್ಷಿಯಾಗಿದೆ. ಜತೆಜತೆಗೆ ಊಹಾಪೋಹಗಳಿಗೂ ತೆರೆ ಎಳೆದಿದೆ. ಅಭಿವೃದ್ಧಿ ಕಾರ್ಯಗಳು ಚುರುಕಾಗಬಹುದೆಂಬ ನಂಬಿಕೆ ಉಂಟಾಗಿದೆ, ಪಕ್ಷದ ವರಿಷ್ಠರು ಯಡಿಯೂರಪ್ಪ ನಾಯಕತ್ವದಲ್ಲಿ ಅಚಲ ವಿಶ್ವಾಸ ಹೊಂದಿರುವುದು ಕಂಡುಬಂದಿದೆ, ಹೀಗೆ ಹಲವು ಸಂದೇಶಗಳನ್ನು ಏಕಕಾಲಕ್ಕೆ ಕಳುಹಿಸಲಾಗಿದೆ.
| ರುದ್ರಣ್ಣ ಹರ್ತಿಕೋಟೆಬೆಂಗಳೂರುಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ವಿಸ್ತರಣೆ ಸುಗಮವಾಗಿ ಆಗುವುದರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಹಾಗೂ ಸರ್ಕಾರದಲ್ಲಿ ಇನ್ನಷ್ಟು ‘ಗಟ್ಟಿ’ಯಾಗಿದ್ದಾರೆ. ಸಂಪುಟ ವಿಸ್ತರಣೆ ಕೇವಲ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಶುಭ ಸುದ್ದಿ ಮಾತ್ರ ಆಗಿರದೆ ರಾಜ್ಯ ರಾಜಕೀಯದಲ್ಲಿ ಅನೇಕ ರೀತಿಯ ಸಂದೇಶ ರವಾನಿಸಿರುವುದು ಯಡಿಯೂರಪ್ಪ ರಾಜಕೀಯ ಚಾಣಾಕ್ಷತನಕ್ಕೆ ಸಾಕ್ಷಿಯಾಗಿದೆ. ಜತೆಜತೆಗೆ ಊಹಾಪೋಹಗಳಿಗೂ ತೆರೆ ಎಳೆದಿದೆ.
ರಾಜಕೀಯದಲ್ಲಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆದುರುಳಿಸಿದರೆಂಬ ಮಾತಿದೆ. ಯಡಿಯೂರಪ್ಪ ಇಲ್ಲಿ ಒಂದಲ್ಲ ಹಲವು ಹಕ್ಕಿಗಳನ್ನು ಒಂದೇ ಕಲ್ಲಿಗೆ ಹೊಡೆದುರುಳಿಸಿದ್ದಾರೆ ಎಂದೇ ರಾಜ್ಯ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಸಂಪುಟ ವಿಸ್ತರಣೆಯೊಂದಿಗೆ ಯಡಿಯೂರಪ್ಪ ಹೈಕಮಾಂಡನ್ನು ಮಣಿಸಿದ್ದಾರೆಂಬ ಮಾತು ಕೇಳಿಬಂದಿದೆ, ನಾಯಕತ್ವ ಬದಲಾಗುತ್ತದೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಿದೆ. ಪೂರ್ಣಾವಧಿಗೂ ಇವರೇ ಅಧಿಕಾರ ನಡೆಸಲಿದ್ದಾರೆ ಎಂಬ ವಿಶ್ವಾಸ ಮೂಡಿದೆ. ಅಭಿವೃದ್ಧಿ ಕಾರ್ಯಗಳು ಚುರುಕಾಗಬಹುದೆಂಬ ನಂಬಿಕೆ ಉಂಟಾಗಿದೆ, ಪಕ್ಷದ ವರಿಷ್ಠರು ಯಡಿಯೂರಪ್ಪ ನಾಯಕತ್ವದಲ್ಲಿ ಅಚಲ ವಿಶ್ವಾಸ ಹೊಂದಿರುವುದು ಕಂಡುಬಂದಿದೆ, ಹೀಗೆ ಹಲವು ಸಂದೇಶಗಳನ್ನು ಏಕಕಾಲಕ್ಕೆ ಕಳುಹಿಸಲಾಗಿದೆ.
ಲಿಂಗಾಯತ ಸಮುದಾಯ ಇವತ್ತು ಬಿಜೆಪಿ ಜತೆಗೆ ಗಟ್ಟಿಯಾಗಿ ನಿಂತಿದೆ. ಈ ಸಮುದಾಯ ಒಂದು ಪಕ್ಷದ ಪರವಾಗಿ ಒಗ್ಗಟ್ಟಿನಿಂದ ನಿಲ್ಲುವಂತೆ ಮಾಡಿದ್ದು ಯಡಿಯೂರಪ್ಪ ಅವರೇ. ನಿಜಲಿಂಗಪ್ಪ ಅಥವಾ ವೀರೇಂದ್ರ ಪಾಟೀಲ್ ಅವರಿಗಿಂತ ಹೆಚ್ಚಾಗಿ ಸಮುದಾಯವನ್ನು ವಲಿಸಿಕೊಂಡಿದ್ದಾರೆ. ಅದರೊಂದಿಗೆ ಇತರೆ ಕೆಲ ಸಮುದಾಯಗಳನ್ನು ಬಿಜೆಪಿ ತೆಕ್ಕೆಗೆ ತಂದಿರುವುದು ಸಹ ಬಿಎಸ್​ವೈ. ಆದ್ದರಿಂದ ಯಡಿಯೂರಪ್ಪ ಒತ್ತಡಕ್ಕೆ ಮಣಿಯದೆ ಹೈಕಮಾಂಡ್​ಗೆ ಬೇರೆ ವಿಧಿಯೇ ಇರಲಿಲ್ಲ. ಅದೇ ಕಾರಣಕ್ಕೆ ಸಂಪುಟ ವಿಸ್ತರಣೆಗೆ ಅನುಮತಿ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಉಸ್ತುವಾರಿ ಅರುಣ್​ಸಿಂಗ್ ಕಳುಹಿಸಿಕೊಟ್ಟು ಹೈಕಮಾಂಡ್ ಸಂಪೂರ್ಣ ಸಿಎಂ ಬೆಂಬಲಕ್ಕೆ ನಿಂತಿದೆ ಎಂಬುದನ್ನು ಸಾಬೀತು ಮಾಡಿದೆ.
ಮಂಡಿಯೂರಿದ ಹೈಕಮಾಂಡ್ಯಡಿಯೂರಪ್ಪ ಬದಲಾವಣೆ ತನಕ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಗುವುದಿಲ್ಲವೆಂದೇ ಅವರ ವಿರೋಧಿ ಬಣ ಹೇಳುತ್ತಿತ್ತು. ರಾಜ್ಯದ ಮಟ್ಟಿಗೆ ಬಿಜೆಪಿ ಕಟ್ಟಿ ಅದಕ್ಕೊಂದು ಗಟ್ಟಿ ಮತಬ್ಯಾಂಕ್ ಸೃಷ್ಠಿಸಿರುವ ಯಡಿಯೂರಪ್ಪ ಎದುರು ಹಾಕಿಕೊಳ್ಳಲು ಬಿಜೆಪಿ ಹೈಕಮಾಂಡ್ ಸಹ ಆಲೋಚನೆ ಮಾಡುವಂತೆ ಮಾಡಿದೆ. ಆನೆ ಸಾಗಿದ್ದೆ ದಾರಿ ಎಂಬ ರೀತಿಯಲ್ಲಿ ರಾಜಕೀಯ ನಡೆಸುವ ಯಡಿಯೂರಪ್ಪರ ಎದುರು ಮಂಡಿಯೂರದೇ ವಿಧಿ ಇಲ್ಲ ಎಂಬುದನ್ನು ಅರಿತು ವರಿಷ್ಠರು ಮೌನವಾಗಿ ಸಮ್ಮತಿಸಿದ್ದಾರೆ.
ಎರಡು ವರ್ಷ ಸ್ಥಾನ ಭದ್ರರಾಜ್ಯದಲ್ಲಿ ಬಿಜೆಪಿ ಇದುವರೆಗೂ ಅಧಿಕಾರ ಮಾಡಿರುವುದು ಆಪರೇಷನ್ ಕಮಲ ಹಂಗಿನಲ್ಲಿಯೇ. ಆದರೆ ಸ್ವತಂತ್ರವಾಗಿ ಅಧಿಕಾರ ಮಾಡುವಷ್ಟು ಸ್ಥಾನಗಳನ್ನು ಪಡೆದಿಲ್ಲ. ಯಡಿಯೂರಪ್ಪ ಕನಸು ಅದೇ ಆಗಿರುವುದರಿಂದ ಮುಂದಿನ ಚುನಾವಣೆಗೆ ಇವರ ನೇತೃತ್ವದಲ್ಲಿಯೇ ಹೋಗುವ ಬಗ್ಗೆ ಹೈಕಮಾಂಡ್​ನ ಒಲವು ಈ ವಿಸ್ತರಣೆಯ ಮೂಲಕ ಕಂಡುಬಂದಿದೆ ಎಂದೇ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಸುಭದ್ರ ಮತಬ್ಯಾಂಕ್
ಮೋದಿ ಬೆಂಬಲಕ್ಕೆ….ಯಡಿಯೂರಪ್ಪ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲಿನಿಂದಲೂ ಒಂದು ರೀತಿಯ ಆತ್ಮೀಯ ವಿಶ್ವಾಸವಿದೆ. ಮೊದಲ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕಾರಕ್ಕೂ ಅವರು ಬಂದಿದ್ದರು. ವಾಜಪೇಯಿ ಅವರು ಗೋದ್ರಾ ಘಟನೆ ಹಿನ್ನೆಲೆಯಲ್ಲಿ ಮೋದಿ ಅವರನ್ನು ಬದಲಾವಣೆ ಮಾಡಲು ಮುಂದಾದಾಗ ಯಡಿಯೂರಪ್ಪ, ಮೋದಿ ಅವರನ್ನು ಬೆಂಬಲಿಸಿದ್ದರು ಎಂಬುದನ್ನು ಬಿಜೆಪಿಯ ಅನೇಕ ಮುಖಂಡರು ನೆನಪಿಸಿಕೊಳ್ಳುತ್ತಾರೆ. ಸಂಘಟನೆಯಲ್ಲಿ ಇವರ ದೈತ್ಯಶಕ್ತಿ ಸಹ ಅವರ ಅರಿವಿಗಿದೆ.
ವಿಶ್ವಾಸಕ್ಕೆ ಕಾರಣವೇನು?ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಬಗ್ಗೆ ಇಷ್ಟೊಂದು ವಿಶ್ವಾಸವಿಡಲು ಬಹುಮುಖ್ಯ ಕಾರಣವೆಂದರೆ ಚುನಾವಣೆಗಳ ಗೆಲುವು. ಲೋಕಸಭೆಯಲ್ಲಿ ಬಿಜೆಪಿ ವರಿಷ್ಠರು ನಿರೀಕ್ಷೆ ಮಾಡಿದ್ದು 21 ಸ್ಥಾನಗಳು, ಗೆದ್ದಿದ್ದು 26. ಜತೆಗೆ ಉಪಚುನಾವಣೆ, ಇತ್ತೀಚಿನ ಗ್ರಾಪಂ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಅಭಾದಿತವಾಗಿ ಮುಂದುವರಿಯಿತು. ಇದೆಲ್ಲವೂ ಯಡಿಯೂರಪ್ಪ ಮೇಲೆ ವಿಶ್ವಾಸ ಇಮ್ಮಡಿಯಾಗುವಂತೆ ಮಾಡಿತು.
ತಂಡ ಕಟ್ಟಿದ ಮುಖ್ಯಮಂತ್ರಿಸಂಪುಟದಲ್ಲಿ ತಮ್ಮದೇ ಆದ ತಂಡ ಕಟ್ಟಿಕೊಂಡಿ ದ್ದಾರೆ. ತಮ್ಮನ್ನು ವಿರೋಧಿಸುವ ಗುಂಪಿನ ಪ್ರಭಾವ ಹೆಚ್ಚಿಲ್ಲದಂತೆ ನೋಡಿಕೊಂಡಿದ್ದಾರೆ. ಅಂಗಾರ ಸಂಘದ ಕಡೆಯಿಂದ ಬಂದರೆ ಉಳಿದ 6 ಜನ ಯಡಿಯೂರಪ್ಪ ಆಯ್ಕೆಗಳೇ ಆಗಿವೆ.
ಯೋಗ ಇದ್ದವರಿಗೆ ಮಂತ್ರಿಗಿರಿ ಸಿಕ್ಕಿದೆ. ಆದರೆ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕೆ ಯೋಗ್ಯತೆ ಇದ್ದವರು ಬಹಳಷ್ಟು ಶಾಸಕರಿದ್ದಾರೆ. ಈಗಿನ ಸಂದರ್ಭಕ್ಕೆ ಅನುಗುಣವಾಗಿ ಸಚಿವ ಸ್ಥಾನ ನೀಡಲಾಗಿದೆ. ಅರ್ಹರಿಗೆ ಸಚಿವ ಸ್ಥಾನ ತಪ್ಪಿದ್ದರ ಬಗ್ಗೆ ಪ್ರಸ್ತಾಪಿಸಲು ಇಷ್ಟಪಡುವುದಿಲ್ಲ.| ಸಿ.ಟಿ. ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ನಾಯಕತ್ವ ಬದಲಾವಣೆಯೇ ಇಲ್ಲಯಾವುದೇ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಉಂಟಾಗುವುದು ಸಹಜವಾದ ಪ್ರಕ್ರಿಯೆ. ಅದೇ ರೀತಿ ಈಗಲೂ ಕಂಡುಬಂದಿದೆ. ಆದರೆ ಆ ಅಸಮಾಧಾನ ನಾಯಕತ್ವ ಬದಲಾವಣೆ ತನಕ ಭಿನ್ನಮತದ ಸ್ವರೂಪ ಪಡೆಯಲು ಸಾಧ್ಯವಿಲ್ಲವೆಂಬುದು ಈಗಿನ ಬೆಳವಣಿಗೆಗಳು ಸಾಬೀತು ಮಾಡಿವೆ.
ಅಬಕಾರಿ ಸಚಿವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ಕೊಟ್ಟಿದ್ದಕ್ಕೆ ಸ್ವಕ್ಷೇತ್ರದಲ್ಲೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
