ಬೆಂಗಳೂರು:ಯುದ್ಧಕಾಲೇ ಶಸ್ತ್ರಾಭ್ಯಾಸದ ಪರಿಪಾಠ ಬಿಟ್ಟು ಮುಂಬರುವ ವಿವಿಧ ಚುನಾವಣೆಗಳಿಗೆ ಈಗಿನಿಂದಲೇ ತಯಾರಿ ನಡೆಸಲು ಭಾರತೀಯ ಜನತಾಪಕ್ಷದ ವರಿಷ್ಠರು ಅಪೇಕ್ಷೆ ಹೊಂದಿ, ಮೇಜರ್ ಸರ್ಜರಿಗೆ ಕೈಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ದೆಹಲಿಯಿಂದ ಸ್ಪಷ್ಟ ಸಂದೇಶ ಹೊತ್ತುಕೊಂಡು ಬೆಂಗಳೂರಿಗೆ ಆಗಮಿಸಿದ್ದು, ವರಿಷ್ಠರ ಸೂಚನೆಯಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆಗೂಡಿ ಕಾರ್ಯತಂತ್ರ ಹೆಣೆಯಲು ಮುಂದಾಗಿದ್ದಾರೆ.
ವರಿಷ್ಠರ ನಿಗಾ:ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ದೃಷ್ಟಿಯಿಂದ ಬಿಎಸ್​ವೈ ಹಾಗೂ ಬಿಎಲ್​ಎಸ್ ಒಂದಾಗಬೇಕಿರುವುದು ಹೈಕಮಾಂಡ್​ಗೆ ಮುಖ್ಯವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯಕ್ಕೆ ಬಂದಾಗ ಒಂದಿಬ್ಬರು ಸಚಿವರನ್ನು ಭೇಟಿಯಾದ ಬಳಿಕ ಹುಟ್ಟಿಕೊಂಡ ಚರ್ಚೆಗಳು ಇನ್ನೂ ನಿಂತಿಲ್ಲ. ಇಷ್ಟು ಸಾಲದೆಂಬಂತೆ ಡಿಸಿಎಂ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ರಮೇಶ್ ಜಾರಕಿಹೊಳಿ ದೆಹಲಿ ಯಾತ್ರೆ ನಡೆಸಿದ್ದು, ಇನ್ನೂ ಕೆಲವರು ತುದಿಗಾಲ ಮೇಲೆ ನಿಂತಿದ್ದಾರೆ. ಇದು ತಪ್ಪು ಸಂದೇಶಕ್ಕೆ ಎಡೆಮಾಡಿಕೊಡಲಿದೆ ಎಂದರಿತ ವರಿಷ್ಠರು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ.
ದೆಹಲಿಯಲ್ಲಿ ಪರ್ಯಾಯ ಆಡಳಿತ ಕೇಂದ್ರವಿಲ್ಲ, ಏನಿದ್ದರೂ ರಾಜ್ಯ ನಾಯಕತ್ವದೊಂದಿಗೆ ರ್ಚಚಿಸಿ, ಬಗೆಹರಿಸಿಕೊಳ್ಳಿರಿ ಎಂಬ ಸಂದೇಶ ರವಾನಿಸುವುದು, ಬಿಎಸ್​ವೈ-ಬಿಎಲ್​ಎಸ್ ಪರಸ್ಪರ ಸ್ನೇಹಭಾವ ಬೆಸೆದುಕೊಂಡು ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ ಹೊಣೆ ನಿಭಾಯಿಸಬೇಕು ಎನ್ನುವುದು ವರಿಷ್ಠರ ಸ್ಪಷ್ಟ ನಿಲುವಾಗಿದೆ. ಹೀಗಾಗಿ ಜಂಟಿ ಸಮಾರಾಭ್ಯಾಸದ ಪ್ರತಿ ನಡೆ, ತೀರ್ವನಗಳೆಲ್ಲವೂ ಹೈಕಮಾಂಡ್ ನಿಗಾವಣೆ ಹಾಗೂ ಅಂತಿಮ ನಿರ್ಧಾರಕ್ಕೆ ಒಳಪಟ್ಟಿವೆ. ಬಿ.ಎಲ್. ಸಂತೋಷ್ ಮಂಗಳವಾರದ ತನಕ ಬಿಡಾರ ಹೂಡಿ, ಮೇಜರ್ ಸರ್ಜರಿ ನೀಲಿನಕ್ಷೆಯೊಂದಿಗೆ ದೆಹಲಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಧಾನಿಗೆ ಬರುತ್ತಿದ್ದಂತೆಯೇ ಪಕ್ಷದ ಕಚೇರಿಗೆ ಒಂದಿಬ್ಬರು ಸಚಿವರನ್ನು ಕರೆಸಿಕೊಂಡು ರ್ಚಚಿಸಿರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದ್ದರೆ, ಆಡಳಿತಾರೂಢ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸಚಿವ ಪದವಿ ಆಕಾಂಕ್ಷಿಗಳು ಮತ್ತೊಮ್ಮೆ ತಾಲೀಮು ನಡೆಸುವುದಕ್ಕೂ ಇಂಬು ನೀಡಿವೆ. ಉಪಾಹಾರದ ಚರ್ಚೆ, ಪ್ರಾಸಂಗಿಕ ಪ್ರಸ್ತಾಪ
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಗಣೇಶ ಚತುರ್ಥಿಯಂದು ಬಿಎಸ್​ವೈ ಹಾಗೂ ಬಿಎಲ್​ಎಸ್ ಬೆಳಗಿನ ಉಪಾಹಾರದ ಮಧ್ಯೆ ಅನೌಪಚಾರಿಕ ಚರ್ಚೆ ನಡೆಸಿದ್ದಾರೆ. ಈ ವೇಳೆ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್​ಕುಮಾರ್ ಹಾಜರಿದ್ದರು. ಕರೊನಾ ನಿಯಂತ್ರಣ, ಬೆಂಗಳೂರಿನ ಗಲಭೆ, ಮಳೆ ಹಾಗೂ ನೆರೆಹಾನಿ ಪ್ರದೇಶದಲ್ಲಿ ಕೈಗೊಂಡ ಕ್ರಮಗಳು, ಇತ್ತೀಚಿನ ರಾಜಕಿಯ ವಿದ್ಯಮಾನಗಳ ಬಗ್ಗೆಯೂ ವಿಚಾರ ವಿನಿಮಯವಾಗಿವೆ. ಅಲ್ಲದೆ, ಸಚಿವ ಸಂಪುಟದ ಕಾರ್ಯಶೈಲಿ, ಸಂಭವನೀಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಈ ವೇಳೆ ರ್ಚಚಿಸಿರುವ ಸಾಧ್ಯತೆಗಳಿವೆ. ಸಂತೋಷ್ ಬೆಂಗಳೂರಿಗೆ ಬಂದಾಗಲೆಲ್ಲ ಸಿಎಂ ನಿವಾಸಕ್ಕೆ ಬೆಳಗಿನ ಉಪಾಹಾರಕ್ಕೆ ಬರುವುದು ಸಾಮಾನ್ಯ. ಕರೊನಾ ಸೋಂಕುಮುಕ್ತ ಸಿಎಂ ಯೋಗಕ್ಷೇಮ ವಿಚಾರಿಸಿ, ಸರ್ಕಾರದ 1 ವರ್ಷದ ಸಾಧನೆ ಮತ್ತು ಗಣೇಶ ಚೌತಿ ಹಬ್ಬದ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ವಿದ್ಯಮಾನಗಳು ಪ್ರಾಸಂಗಿಕವಾಗಿ ಪ್ರಸ್ತಾಪವಾಗಿದ್ದರೆ ವಿಶೇಷ ಅರ್ಥ ಕಲ್ಪಿಸಿಕೊಳ್ಳಬೇಕಾದ್ದೇನಿಲ್ಲ ಎಂದು ಮೂಲಗಳು ತಿಳಿಸಿವೆ.
ದೆಹಲಿ ದಂಡಯಾತ್ರೆಗೆ ವರಿಷ್ಠರ ಬ್ರೇಕ್:ಸಚಿವ ಸ್ಥಾನಕ್ಕೆ ಲಾಬಿ ನಡೆಸಲು ದೆಹಲಿ ದಂಡಯಾತ್ರೆ ಕೈಗೊಳ್ಳಲು ಮುಂದಾಗಿರುವ ಶಾಸಕರ ದಂಡಿಗೆ ಬಿಜೆಪಿ ವರಿಷ್ಠರು ಬ್ರೇಕ್ ಹಾಕಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸುದ್ದಿ ಕಿವಿಗೆ ಬೀಳುತ್ತಲೇ ಕೆಲವು ಶಾಸಕರು ದೆಹಲಿಗೆ ಭೇಟಿ ನೀಡಿದ್ದರು. ಈ ಸುಳಿವು ಅರಿತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಸಚಿವ ಸ್ಥಾನಕ್ಕಾಗಿ
ಲಾಬಿ ಮಾಡಲು ಯಾರೂ ದೆಹಲಿಗೆ ಬಾರದಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಸಂಪುಟ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಪರಿಸ್ಥಿತಿಗನುಗುಣವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇಂತಹ ವಿಷಯದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಯಡಿಯೂರಪ್ಪ ನಾಯಕತ್ವ ಅಬಾಧಿತ ಎಂಬ ಸಂದೇಶವನ್ನೂ ವರಿಷ್ಠರು ಪರೋಕ್ಷವಾಗಿ ನೀಡಿದ್ದಾರೆ ಎನ್ನಲಾಗಿದೆ.
ಅಸ್ಸಾಂ ಸಿಎಂ ಅಭ್ಯರ್ಥಿಯಾಗ್ತಾರಾ ಸುಪ್ರೀಂಕೋರ್ಟ್​ ನಿವೃತ್ತ ಮುಖ್ಯ ನಾಯಮೂರ್ತಿ? ರಂಜನ್​ ಗೊಗೊಯ್​ ಹೇಳೋದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
