ಬೆಂಗಳೂರು:ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಫೈನಲ್ ಆಗಿದ್ದು, ಯಾರಿಗೆ ಯಾವ ಖಾತೆ ಎಂಬುದು ಪಟ್ಟಿ ನಾಳೆ ಪ್ರಕಟವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜ.13ರಂದು ನಡೆದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟ ವಿಸ್ತರಣೆಯಲ್ಲಿ ‘ಸಪ್ತ’ ಶಾಸಕರು ಮಂತ್ರಿಗಿರಿ ಅಲಂಕರಿಸಿದ್ದಾರೆ. ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ. ಉನ್ನತ ಮೂಲಗಳ ಪ್ರಕಾರ ನಾಳೆ(ಬುಧವಾರ) ಯಾರಿಗೆ, ಯಾವ ಖಾತೆ ಸಿಗಲಿದೆ ಎಂಬುದರ ಪಟ್ಟಿ ಇಲ್ಲಿದೆ.ಉಮೇಶ್ ಕತ್ತಿ– ಅಬಕಾರಿ ಇಲಾಖೆಎಂಟಿಬಿ ನಾಗರಾಜ್​– ಇಂಧನ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಅರವಿಂದ ಲಿಂಬಾವಳಿ– ಉನ್ನತ ಶಿಕ್ಷಣ ಅಥವಾ ಬೆಂಗಳೂರು ಅಭಿವೃದ್ಧಿಮರುಗೇಶ ನಿರಾಣಿ– ಸಣ್ಣ ಕೈಗಾರಿಕೆ ಇಲಾಖೆಆರ್. ಶಂಕರ್– ಪ್ರವಾಸೋದ್ಯಮ ಇಲಾಖೆಎಸ್. ಅಂಗಾರ– ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಬಂದರು ಮತ್ತು ಒಳನಾಡುಸಿ.ಪಿ.ಯೋಗೇಶ್ವರ್– ಯುವಜನಾ ಸೇವೆ ಮತ್ತು ಕ್ರೀಡೆ, ರೇಷ್ಮೆ ಇಲಾಖೆ
ಬೆಂಗಳೂರು ಅಭಿವೃದ್ಧಿ ಜವಾಬ್ದಾರಿಗಾಗಿ ಅರವಿಂದ ಲಿಂಬಾವಳಿ ಪಟ್ಟು ಹಿಡಿದಿದ್ದಾರೆ. ಆದರೆ ಮೂಲಗಳ ಪ್ರಕಾರ ಬೆಂಗಳೂರು ಅಭಿವೃದ್ಧಿ ಯಾರಿಗೂ ನೀಡದೆ ಸಿಎಂ ಬಳಿ ಇಟ್ಟುಕೊಳ್ಳುವ ಸಾಧ್ಯತೆ ಇದೆ. ಎಂಟಿಬಿ ನಾಗರಾಜ್ ಅವರು ವಸತಿ ಖಾತೆ ಬೇಕೆಂದು ಕೇಳುತ್ತಿದ್ದಾರೆ. ಇಂಧನ ಖಾತೆಗೆ ಉಮೇಶ್ ಕತ್ತಿ ಬೇಡಿಕೆಯಿಟ್ಟಿದ್ದಾರೆ.
ಇನ್ನು ಖಾತೆ ಹಂಚಿಕೆ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಂತ್ರಿ ಮಾಡೋದು, ಖಾತೆ ಹಂಚುವುದು ಸಿಎಂ ಪರಮಾಧಿಕಾರ. ಇದರ ಬಗ್ಗೆ ಸಿಎಂ ಅವರೇ ಅಂತಿಮ ನಿರ್ಧಾರ ತಗೋಬೇಕು ಎಂದರು.(ದಿಗ್ವಿಜಯ ನ್ಯೂಸ್​)
ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 11 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + nine =
Remember me
