ಬೆಂಗಳೂರು: ರಾಜ್ಯದಲ್ಲಿ ಬಿಎಸ್​ವೈ ಸಚಿವ ಸಂಪುಟದ ವಿಸ್ತರಣೆಯಾಗಿದ್ದು ಹೊಸದಾಗಿ 10 ಸಚಿವರು ಸಂಪುಟ ಸೇರ್ಪಡೆಗೊಂಡು ಕೆಲವು ದಿನಗಳಾಯಿತು. ಖಾತೆ ಹಂಚಿಕೆ ಇನ್ನೂ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಊಹಾ ಪೋಹಗಳು, ಹೊಸ ಸಚಿವರ ಅನುಭವಗಳ ಆಧಾರದ ಮೇಲೆ ಯಾವ ಖಾತೆ ಹಂಚಿಕೆ ಆಗಬಹುದು ಎಂಬ ಊಹೆಗಳ ಲೆಕ್ಕಾಚಾರ ಜೋರಾಗಿತ್ತು.
ಇದೀಗ ಸಿಎಂ ಕಚೇರಿ ಮೂಲಗಳೇ ಹೇಳಿರುವ ಪ್ರಕಾರ, ನೂತನ ಸಚಿವರಿಗೆ ಖಾತೆ ಹಂಚಿಕೆ ಪೂರ್ಣಗೊಂಡಿದೆ. ಅದಕ್ಕೆ ರಾಜ್ಯಪಾಲರ ಅಂಕಿತವೂ ಬಿದ್ದಿದೆ. ಹೀಗಾಗಿ ಊಹಾಪೋಹಗಳಿಗೆ ಇಂದು ತೆರೆ ಬೀಳಲಿದೆ.
ಸದ್ಯ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ, ರಮೇಶ್ ಜಾರಕಿಹೊಳಿ- ಜಲಸಂಪನ್ಮೂಲ, ಬಿ.ಸಿ.ಪಾಟೀಲ್- ಅರಣ್ಯ, ಎಸ್.ಟಿ.ಸೋಮಶೇಖರ್- ಸಹಕಾರ, ಬಿ.ಎ.ಬಸವರಾಜು- ನಗರಾಭಿವೃದ್ಧಿ, ಡಾ.ಕೆ.ಸುಧಾಕರ್- ವೈದ್ಯಕೀಯ ಶಿಕ್ಷಣ, ಕೆ.ಗೋಪಾಲಯ್ಯ- ಸಣ್ಣ ಕೈಗಾರಿಕೆ, ಶಿವರಾಮ್ ಹೆಬ್ಬಾರ್- ಕಾರ್ಮಿಕ, ಶ್ರೀಮಂತ ಪಾಟೀಲ್- ಜವಳಿ, ನಾರಾಯಣ ಗೌಡ- ಪೌರಾಡಳಿತ,ತೋಟಗಾರಿಕೆ, ಆನಂದ್ ಸಿಂಗ್- ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಗಳ ಹಂಚಿಕೆ ಆಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಕೃಷಿ ಖಾತೆ ಹೆಚ್ಚುವರಿ ಹೊಣೆಗಾರಿಕೆ ಆಗಿರಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
