ತುಮಕೂರು:ಲೋಕಸಭಾ ಚುನಾವಣೆ 2024ರ ಹಿನ್ನೆಲೆ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡಿತು. ಈ ಹಿಂದಿನಿಂದಲೂ ತುಮಕೂರು ಕ್ಷೇತ್ರಕ್ಕೆ ವಿ. ಸೋಮಣ್ಣ ಕೊಡುಗೆ ಏನೂ ಇಲ್ಲ. ಅವರಿಗೆ ಟಿಕೆಟ್ ಕೊಡಬಾರದು ಎಂದು ಭಾರೀ ವಿರೋಧ ವ್ಯಕ್ತಪಡಿಸಲಾಗಿತ್ತು. ಆದ್ರೆ, ವಿರೋಧಗಳ ನಡುವೆಯೇ ಸೋಮಣ್ಣಗೆ ಟಿಕೆಟ್ ಘೋಷಿಸಲಾಗಿದೆ.
ಇದನ್ನೂ ಓದಿ:IPL 2024: ‘ಅವರಿಗೆ ಶೌಚಾಲಯಕ್ಕೂ ಹೋಗಲಾಗುತ್ತಿರಲಿಲ್ಲ’: ರಿಷಬ್ ಪಂತ್ ಸ್ಥಿತಿ ನೆನಪಿಸಿಕೊಂಡು ಭಾವುಕರಾದ ಶಿಖರ್ ಧವನ್
ಈ ಬೆನ್ನಲ್ಲೇ ತೀವ್ರ ಅಸಮಾಧಾನ ಕೂಡ ಭುಗಿಲೆದ್ದಿದ್ದು, ಜೆ.ಸಿ. ಮಾಧುಸ್ವಾಮಿಗೆ ಟಿಕೆಟ್ ಕೊಡಬೇಕೆ ವಿನಃ ಸೋಮಣ್ಣಗೆ ಅಲ್ಲ ಎಂದಿದ್ದರು. ತುಮಕೂರಿಗೆ ಅವರ ಕೊಡುಗೆ ಇಲ್ಲ ಎಂದು ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ತುರುವೇಕೆರೆ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಎಂದು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಎರಡನೇ ಪಟ್ಟಿಯಲ್ಲಿ ಲೆಕ್ಕಾಚಾರಗಳು ಕೆಳಗಾಗಿದ್ದು, ತುಮಕೂರು ಕ್ಷೇತ್ರದಿಂದ ವಿ.ಸೋಮಣ್ಣ ಸ್ಪರ್ಧಿಸಲಿದ್ದಾರೆ ಎಂಬುದು ಖಚಿತವಾಗಿದೆ.
ಇನ್ನು ಈ ಕುರಿತು ವಿ.ಸೋಮಣ್ಣ ಮಾತನಾಡಿ, “ತುಮಕೂರು ಕ್ಷೇತ್ರದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರಿಗೆ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾಗೆ, ಜೆ.ಪಿ. ನಡ್ಡಾ , ಬಿ.ಎಸ್ ಯಡಿಯೂರಪ್ಪರಿಗೆ, ಬಸವರಾಜ್ ಬೊಮ್ಮಾಯಿ, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಲ್.ಸಂತೋಷ್, ಆರ್.ಅಶೋಕ್, ಬಿ.ವೈ.ವಿಜಯೇಂದ್ರ, ಪ್ರಲ್ಹಾದ್ ಜೋಶಿ, ಜಿ.ಎಸ್.ಬಸವರಾಜು ಹಾಗೂ ಪಕ್ಷದ ಎಲ್ಲಾ ಮುಖಂಡರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದರು.
ಇದನ್ನೂ ಓದಿ:VIDEO| ಟೈಟಾನಿಕ್ ಈಸ್ ಬ್ಯಾಕ್: ಮತ್ತೆ ಸಾಗರದ ನೀಲಿ ನೀರಿನಲ್ಲಿ ಚಲಿಸಲಿದೆ ದೈತ್ಯ ಹಡಗು, ಹೇಗಿದೆ ನೋಡಿ?
“ತುಮಕೂರು ಜನತೆಗೆ ಸೇವೆ ಸಲ್ಲಿಸಬೇಕೆಂಬ ನನ್ನಾಸೆಗೆ ಸಹಾಯಕರಾಗಿ ನಿಂತ ನನ್ನ ಪ್ರೀತಿಯ ಕಾರ್ಯಕರ್ತರಿಗೆ ಧನ್ಯವಾದಗಳು. ಮುಂಬರುವ ಚುನಾವಣೆಯಲ್ಲಿ ಸರ್ವರೂ ಒಟ್ಟುಗೂಡಿ ಬಿಜೆಪಿಯನ್ನು ಗೆಲ್ಲಿಸೋಣ, ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣ” ಎಂದು ಹೇಳಿದರು.
ಲೋಕಸಭೆ ಚುನಾವಣೆ 2024ರಲ್ಲಿ ತುಮಕೂರಿನಿಂದ ಸ್ಪರ್ಧಿಸಲು ಟಿಕೆಟ್ ಪಡೆದ ವಿ.ಸೋಮಣ್ಣಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್​​ವೈ ವೈಯಕ್ತಿಕವಾಗಿ ಅಭಿನಂದನೆ ತಿಳಿಸಿ, ಶುಭಹಾರೈಸಿದರು.
ಹರಾಜಿನಲ್ಲಿ ಒಂದೇ ಒಂದು ನಿಂಬೆ ಹಣ್ಣಿಗೆ 35,000 ರೂ.! ಖರೀದಿ ಮಾಡಿದ ವ್ಯಕ್ತಿಯ ಖುಷಿ ಹೇಳತೀರದು…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eight + eight =
Remember me
