ಬೆಂಗಳೂರು:ಸೆ.21ರಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷದಿಂದ ಎದುರಾಗ ಬಹುದಾದ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಲು ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳನ್ನು ಸಜ್ಜುಗೊಳಿಸಿದ್ದಾರೆ.
ಸಂಪುಟ ಸಭೆ ಹೊರತಾಗಿ ಸಚಿವರ ಜತೆ ಮೊದಲ ಬಾರಿಗೆ ಒಟ್ಟಾಗಿ ಸೋಮವಾರ ಔಪಚಾರಿಕ ಸಭೆ ನಡೆಸಿದ ಬಿಎಸ್​ವೈ, ಅಧಿವೇಶನದಲ್ಲಿ ಪ್ರತಿಪಕ್ಷ ಹೆಣೆಯುವ ಬಲೆಗೆ ಯಾವುದೇ ಕಾರಣಕ್ಕೂ ಸಿಲುಕದೇ ಪಾರಾಗುವ ನಿಟ್ಟಿನಲ್ಲಿ ಎಲ್ಲ ಸಚಿವರು ಸರ್ವ ಸನ್ನದ್ಧರಾಗಿರಬೇಕು, ಯಾವುದೇ ಕಾರಣಕ್ಕೂ ಪ್ರತಿಪಕ್ಷ ಮೇಲುಗೈ ಸಾಧಿಸಬಾರದೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಪ್ರತಿಪಕ್ಷದವರು ಸರ್ಕಾರವನ್ನು ಎಳೆಎಳೆಯಾಗಿ ಟೀಕಿಸಿ ದಾಖಲೆ ನಿರ್ವಿುಸಲು ಪ್ರಯತ್ನಿಸುತ್ತಾರೆ, ಇದಕ್ಕೆ ಅವಕಾಶ ಕೊಡಬಾರದು. ಸರ್ಕಾರದ ಬಳಿ ಇರುವ ದಾಖಲೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಂಡು ತಕ್ಕ ಉತ್ತರ ನೀಡಬೇಕೆಂದು ತಾಕೀತು ಮಾಡಿದ್ದಾರೆ. ಆರೋಗ್ಯ ಇಲಾಖೆಯ ಖರೀದಿ ಪ್ರಕರಣದಲ್ಲಿ ಪ್ರತಿಪಕ್ಷ ಜಿಗುಟು ಪ್ರದರ್ಶಿಸಬಹುದು, ಈ ವಿಚಾರದಲ್ಲಿ ಎಲ್ಲ ಸಚಿವರೂ ಶಾಸಕರು ಒಗ್ಗಟ್ಟಾಗಿ ಎದುರಿಸುವುದು ಸೇರಿ ಡಿಜೆ ಹಳ್ಳಿ ಘಟನೆ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಪ್ರತಿಪಕ್ಷ ಮಾಡುವ ಟೀಕೆ ಟಿಪ್ಪಣಿಯನ್ನು ಸ್ವೀಕರಿಸಿ, ಸೂಕ್ತ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿದ್ದಾರೆ.ಇದನ್ನೂ ಓದಿ:video/ ಕಾಫಿಪುಡಿ ಖರೀದಿಸಿ ಬರುತ್ತಿದ್ದವರನ್ನು ಕರೆದೊಯ್ಯಲು ಮರದ ಮೇಲೆ ಕುಳಿತ್ತಿದ್ದ ಜವರಾಯ!
ಜಿಎಎಸ್​ಟಿ ನಷ್ಟದಿಂದ ರಾಜ್ಯಕ್ಕೆ ಬರಬೇಕಾದ ಆದಾಯ ಕುಂಠಿತವಾಗಿದೆ, ಸರ್ಕಾರ ಸಾಲ ಮಾಡಿ ಪರಿಸ್ಥಿತಿ ನಿಭಾಯಿಸಬೇಕಿದೆ. ಹೀಗಾಗಿ ಹೆಚ್ಚು ಆರ್ಥಿಕ ಹೊರೆಯಾಗುವಂತಹ ಪ್ರಸ್ತಾವನೆ ಕಳಿಸದಂತೆ ಸಹೋದ್ಯೋಗಿಗಳಿಗೆ ಸಲಹೆ ನೀಡಿದರು ಎನ್ನಲಾಗಿದೆ. ಇದಲ್ಲದೆ ಆಂತರಿಕ ಸಣ್ಣಪುಟ್ಟ ವೈಮನಸ್ಯ ಸರಿಪಡಿಸಲು ಸಿಎಂ ಮುಂದಡಿ ಇಟ್ಟಿದ್ದಾರೆ ಎನ್ನಲಾಗಿದೆ. ಸಚಿವರಾದ ಕೆ.ಎಸ್.ಈಶ್ವರಪ್ಪ, ಶಶಿಕಲಾ ಜೊಲ್ಲೆ, ಶಿವರಾಂ ಹೆಬ್ಬಾರ್ ಕರೊನಾ ಕಾರಣಕ್ಕೆ ಸಭೆಯಿಂದ ದೂರ ಉಳಿದಿದ್ದರು.
ರಸ್ತೆ ಅಗಲೀಕರಣಕ್ಕಾಗಿ ಪುರಾತನ ಆಂಜನೇಯ ಸ್ವಾಮಿ ದೇಗುಲ ತೆರವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eighteen =
Remember me
