ಬೆಂಗಳೂರು:ಏನೋ ಆಗಬಹುದು, ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡವರ ಲೆಕ್ಕಾಚಾರ ತಲೆ ಕೆಳಗಾಗಿದೆ. ಪರಿಣಾಮ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತಷ್ಟು ಬಲ ಬಂದು, ರಾಜ್ಯ ಸರ್ಕಾರ ಕೂಡ ಸದೃಢಗೊಂಡಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಹಳ ದಿನಗಳ ತರುವಾಯ ಬೆಂಗಳೂರಿಗೆ ಆಗಮಿಸಿ ಸಚಿವರೊಂದಿಗೆ ಮಾಹಿತಿ ಸಂಗ್ರಹ, ಸಿಎಂ ಜತೆ ಅನೌಪಚಾರಿಕ ಮಾತುಕತೆ, ಪಕ್ಷದ ಸಂಘಟನಾತ್ಮಕ ಸರಣಿ ಸಭೆಗಳನ್ನು ನಡೆಸಿದರು. ಕೈತುಂಬ ಕೆಲಸ, ವರಿಷ್ಠರ ಸ್ಪಷ್ಟ ಸಂದೇಶ ಹೊತ್ತುಕೊಂಡು ಬಂದವರು ಅದನ್ನು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸಿದ್ದಾರೆ. ಆದರೂ ವರಿಷ್ಠರಿಗೆ ಸಲ್ಲಿಸಲಿರುವ ವರದಿ ಬಗ್ಗೆ ಕುತೂಹಲ ಇದ್ದೇ ಇದೆ.
ವರಿಷ್ಠರಿಗೆ ತೃಪ್ತಿ:ಸಂತೋಷ್ ಅನುಕೂಲತೆ ನೋಡಿಕೊಂಡು ದೆಹಲಿಗೆ ಬನ್ನಿ ಎಂದು ಸಿಎಂಗೆ ಆಹ್ವಾನ ನೀಡಿದ್ದು, ಕರೊನಾ ಮತ್ತು ಬೆಂಗಳೂರಿನ ಗಲಭೆ ಹಾಗೂ ನೆರೆ ಪರಿಸ್ಥಿತಿ ನಿಭಾವಣೆ, ಕಠಿಣ ಆರ್ಥಿಕ ಪರಿಸ್ಥಿತಿ ಮಧ್ಯೆಯೂ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರೀತಿ ಬಗ್ಗೆ ವರಿಷ್ಠರಿಗೆ ತೃಪ್ತಿ ಇದೆ ಎನ್ನುವ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಮಸ್ಯೆ ಏನೇ ಇದ್ದರೂ ಸಿಎಂ, ಹಾಗೂ ರಾಜ್ಯ ನಾಯಕರ ಜತೆ ರ್ಚಚಿಸಿ ಬಗೆಹರಿಸಿಕೊಳ್ಳಿ ಎಂಬ ಸಂದೇಶವನ್ನೂ ಸಭೆಗಳಲ್ಲಿ ರವಾನಿಸಿದ್ದಾರೆ.
ಅಪನಂಬಿಕೆ ದೂರ:ಬಿ.ಎಲ್. ಸಂತೋಷ್ ಬೆಂಗಳೂರಿಗೆ ಬಂದು ಹೋಗಿದ್ದರಿಂದ ಚದುರಿದ ಚಿತ್ರಗಳಂತೆ ಹರಡಿದ್ದ ಅಪನಂಬಿಕೆ ಮತ್ತು ನಾಯಕತ್ವದ ಬಗೆಗಿನ ಅಪಸ್ವರಗಳು ದೂರವಾಗಿವೆ. ದೆಹಲಿಯಲ್ಲಿ ಅಂಥದ್ದೇನೂ ಇಲ್ಲ ಎಂಬ ಸ್ಪಷ್ಟತೆಯೂ ದೊರಕಿದೆ. ವರಿಷ್ಠರ ಸೂಚನೆಯಂತೆ ನಡೆ: ಸಿಎಂ ಕಾರ್ಯವೈಖರಿ ಬಗ್ಗೆ ಸ್ವತಃ ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿ.ಎಲ್.ಸಂತೋಷ್ ಅನ್ಯ ವಿಚಾರಕ್ಕೆ ಕೈ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವರಿಷ್ಠರ ಸೂಚನೆಯಂತೆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದು ಸಂಘಟನೆ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.
ಸಿಎಂ ಬದಲಾವಣೆ ಇಲ್ಲ:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಮುಂದಿನ 3 ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಪುನರುಚ್ಚರಿಸಿದ್ದಾರೆ. ನಾಯಕತ್ವದ ಹಿಂದೆ ಊಹಾಪೋಹಗಳಿರುವುದು ಸಹಜ. ಆದರೆ ಯಾವುದೇ ಮುಖಂಡರಲ್ಲಿ ಬಿಎಸ್​ವೈ ನಾಯಕತ್ವದ ಬಗ್ಗೆ ಅಪಸ್ವರಗಳಿಲ್ಲ. ರಾಷ್ಟ್ರೀಯ ಮತ್ತು ರಾಜ್ಯ ನಾಯಕರಲ್ಲಿ ಅಂಥ ಭಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್​ಲಾಕ್​ 4.0 ಹೀಗಿರುತ್ತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
