ಬೆಂಗಳೂರು:ರಾಜ್ಯದಲ್ಲಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ (ಜು.26) ಒಂದು ವರ್ಷ. ಭಾನುವಾರ ಕರೊನಾ ಲಾಕ್​ಡೌನ್​ ಇರುವ ಕಾರಣ ವರ್ಷೋತ್ಸವ ಸಂಭ್ರಮವನ್ನು ಸೋಮವಾರ ಸರಳವಾಗಿ ಆಚರಿಸಲು ಸರ್ಕಾರ ಸಜ್ಜಾಗಿದೆ.
ವರ್ಷೋತ್ಸವ ಕಾರ್ಯಕ್ರಮ ಒಂದು ಗಂಟೆ ಅವಧಿಯ ಪತ್ರಿಕಾಗೋಷ್ಠಿಗಷ್ಟೇ ಸೀಮಿತವಾಗಿದ್ದು, ಸೋಮವಾರ ಬೆಳಗ್ಗೆ 11ರಿಂದ 12ರವರೆಗೆ ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆಯಲಿದೆ. ಅಂದು ತಮ್ಮ ಆಡಳಿತದ ಸಾಧನೆಗಳನ್ನು ಮೆಲುಕು ಹಾಕುತ್ತಲೇ ಮುಂದಿನ ಮೂರು ವರ್ಷದ ಗುರಿ, ಆಶಯಗಳ ಕನಸನ್ನು ಸಿಎಂ ಬಿಎಸ್​ವೈ ತೆರೆದಿಡಲಿದ್ದಾರೆ. ಕರೊನಾ ಜತೆ ಜತೆಗೆ ನಾವು ಹೆಜ್ಜೆ ಹಾಕಬೇಕಿರುವುದರಿಂದ ಸೋಂಕಿನ ನಿಯಂತ್ರಣ ಹಾಗೂ ರಾಜ್ಯದ ಆರ್ಥಿಕ ಬೆಳವಣಿಗೆ ಕುರಿತು ಮಾತನಾಡಲಿದ್ದಾರೆ. ಅಂದು ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಂದಲೇ ಈ ವರ್ಚುವಲ್​ ಫ್ಲಾಟ್​ ಫಾರಂ ಮುಖೇನ ಲೈವ್​ನಲ್ಲಿ ಇರಲಿದ್ದಾರೆ.
ಇದನ್ನೂ ಓದಿರಿತಾರಕಕ್ಕೇರಿದೆ ‘ಕುದುರೆ’ ವಿಷ್ಯ; ಜನರಿಂದ ತಿರಸ್ಕರಿಸಲ್ಪಟ್ಟ ಸಿ.ಪಿ.ಯೋಗೇಶ್ವರ್ ‘ಸತ್ತ ಕುದುರೆ’!
ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಿವಿಧ ಇಲಾಖೆಯ ಸಾಧನೆಗಳ ಕುರಿತು ಪ್ರಕಟಿಸಿರುವ ‘ಸಮಸ್ಯೆ ಸವಾಲುಗಳ ಒಂದು ವರ್ಷ ಪರಿಹಾರದ ಸ್ಪರ್ಶ, ಧೃತಿಗೆಡದ ಸಿಎಂ ಬಿಎಸ್​ವೈ’ ಎಂಬ ಪುಸ್ತಕ ಹಾಗೂ ‘ಪುಟಕ್ಕಿಟ್ಟ ಚಿನ್ನ’ ಎಂಬ ವಿಶಿಷ್ಟ ಕೃತಿ ಬಿಡುಗಡೆಯಾಗಲಿದೆ.
ಬಿಎಸ್​ವೈ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 1.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಸಂವಾದ ನಡೆಸಬಹುದೆಂಬ ಮಾಹಿತಿ ಇದೆ. ಅಧಿಕೃತವಾಗಿ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ.
ನಿಖಿಲ್​ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದಲೇ ಹಿಗ್ಗಾಮುಗ್ಗಾ ತರಾಟೆ.. ರಾಜೀನಾಮೆ ಕೊಡುವಂತೆ ಖಡಕ್ ವಾರ್ನಿಂಗ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
