ಬೆಂಗಳೂರು:ಸಂಕಷ್ಟದಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಜು.26ಕ್ಕೆ ವರ್ಷ ತುಂಬಲಿದೆ. ಕರೊನಾ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರದ ಸಂಭ್ರಮಾಚರಣೆ ಹೇಗೆ ಎನ್ನುವ ಬಗ್ಗೆ ಪಕ್ಷ ಇನ್ನೂ ಯಾವುದೇ ಸಿದ್ಧತೆ ನಡೆಸಿಲ್ಲ. ಆದರೆ ಸರ್ಕಾರದ ಮಟ್ಟದಲ್ಲಿ ಸರಳವಾಗಿ ಕಾರ್ಯಕ್ರಮ ರೂಪಿಸಲು ತೀರ್ವನಿಸಲಾಗಿದೆ.
ಸರ್ಕಾರಕ್ಕೆ ವರ್ಷ ತುಂಬಿದ ಸಂಭ್ರಮಾಚರಣೆ ಬಗ್ಗೆ ಹಿರಿಯ ಅಧಿಕಾರಿಗಳು ರ್ಚಚಿಸಿದ್ದರೂ, ಅದಕ್ಕೆ ಸಿಎಂ ಹೆಚ್ಚು ಗಮನ ನೀಡಿರಲಿಲ್ಲ. ಸಚಿವರು ಈ ಬಗ್ಗೆ ಮಾತನಾಡಿದರೂ, ಅದಕ್ಕೆ ಆದ್ಯತೆ ನೀಡಿರಲಿಲ್ಲ. ಮೊದಲು ಕರೊನಾ ತಹಬದಿಗೆ ತರಲು ಕೆಲಸ ಮಾಡೋಣ. ಬಳಿಕ ಇನ್ನುಳಿದ ವಿಷಯಗಳ ಬಗ್ಗೆ ರ್ಚಚಿಸೋಣ ಎಂದು ಸಭೆಯಲ್ಲೇ ಸಿಎಂ ತಾಕೀತು ಮಾಡಿದ್ದರಿಂದ ಈ ಬಗ್ಗೆ ಎಲ್ಲರೂ ಮೌನಕ್ಕೆ ಶರಣಾಗಿದ್ದರು.
ಕೆಲ ಆಪ್ತ ಸಚಿವರು ಮತ್ತು ಅಧಿಕಾರಿಗಳ ಸಲಹೆ ಮೇರೆಗೆ ಈಗ ವರ್ಷಾಚರಣೆಗೆ ಸಂಬಂಧ ತಯಾರಿ ಮಾಡಿಕೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಪ್ರತಿ ಇಲಾಖೆಯಲ್ಲಿ ವರ್ಷದಲ್ಲಿ ಆಗಿರುವ ಸಾಧನೆಗಳನ್ನು ಪಟ್ಟಿ ಮಾಡಿ ನೀಡಬೇಕು ಎಂದು ಈಗಾಗಲೆ ಮುಖ್ಯಮಂತ್ರಿ ಸಚಿವಾಲಯ ಎಲ್ಲರಿಗೂ ತಾಕೀತು ಮಾಡಿದೆ. ಅತಿವೃಷ್ಟಿ ಮಾತ್ತು ಕರೊನಾ ಸಂದರ್ಭದಲ್ಲಿ ಸರ್ಕಾರ ಎದುರಿಸಿದ ಸವಾಲು ಮತ್ತು ತೆಗೆದುಕೊಂಡ ಪರಿಹಾರೋಪಾಯ ಕ್ರಮಗಳ ಬಗ್ಗೆ ಸಾಧನೆ ಕಿರುಹೊತ್ತಗೆಯಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲೂ ಆಯಾ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಸರಳವಾಗಿ ವರ್ಷಾಚರಣೆ ಮಾಡುವುದಕ್ಕೆ ಬಿಎಸ್​ವೈ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಕೆಲ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮೂಲಕ ವರ್ಷಾಚರಣೆ ಮಾಡಬೇಕು ಎನ್ನುವ ಬಗ್ಗೆಯೂ ಪ್ರಸ್ತಾಪವಿದ್ದು, ಈ ಬಗ್ಗೆ ನಿರ್ಧರಿಸುವುದು ಇನ್ನೂ ಬಾಕಿ ಇದೆ.
ವರ್ಚುವಲ್ ರ್ಯಾಲಿ?:ಮೋದಿ ಸರ್ಕಾರಕ್ಕೆ ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿ ಆಯೋಜಿಸಿದ್ದ ವರ್ಚುವಲ್ ರ‍್ಯಾಲಿ ರೂಪದಲ್ಲೇ ಈ ವರ್ಷಾಚರಣೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಈ ಬಗ್ಗೆ ಇನ್ನೂ ಅಧಿಕೃತ ತೀರ್ವನವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಬಗ್ಗೆ ಕೇಂದ್ರದ ವರಿಷ್ಠರ ಜತೆ ರ್ಚಚಿಸಲು ನಿರ್ಣಯಿಸಲಾಗುವುದು ಎನ್ನಲಾಗಿದೆ.
ಹೃದಯದ ಆರೋಗ್ಯ ಹೆಚ್ಚಿಸುವ ಯೋಗ-ಮುದ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
