
ಬೆಂಗಳೂರು:ಯಡಿಯೂರಪ್ಪ ಜೊತೆ 2006ರಲ್ಲ ಸರ್ಕಾರ ಮಾಡಿದಂತೆ ಈ ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸೋಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಮೈತ್ರಿ ಮುಂದುವರಿಕೆಗೆ ಸ್ಪಷ್ಟ ಮುನ್ನುಡಿ ಬರೆದಿದ್ದಾರೆ.ಅರಮನೆ ಆವರಣದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಎನ್‌ಡಿಎ ಸಂಸದರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.2006ರಲ್ಲಿ ಯಡಿಯೂರಪ್ಪ ಜೊತೆಗೂಡಿ ಸರ್ಕಾರ ಮಾಡಿದ್ವಿ. ಆಗ ಅತ್ಯತ್ತಮ ಸರ್ಕಾರ ನಡೆದಿತ್ತು.ಅಂದೇ ಎರಡು ಪಕ್ಷಗಳು ಒಂದಾಗಿ ನಡೆಯುವ ಆಶಯ ವ್ಯಕ್ತವಾಗಿತ್ತು. ಕೆಲವರಿಂದ ಕೆಲವು ಕುತಂತ್ರಗಳು ನಡೆದವು. ಅದರ ಪರಿಣಾಮ ಇವತ್ತು ಕಾಂಗ್ರೆಸ್ ಅಧಿಕಾರದಲ್ಲಿದೆ ಎಂದರು.ಎರಡೂ ಪಕ್ಣಗಳ ಹೊಂದಾಣಿಕೆ ನೈಸರ್ಗಿಕ ಅಲಯನ್ಸ ಆಗಿದೆ. ಮೈತ್ರಿಯ ನಮ್ಮ ನಿರೀಕ್ಷೆ 28ಕ್ಕೆ 28 ಗೆಲ್ಲುವುದಾಗಿತ್ತು. ಸ್ವಲ್ಪ ವ್ಯತ್ಯಾಸಗಳು ಆಗಿವೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು. ಈ ಚುನಾವಣೆಯಲ್ಲಿ ಜನತಾ ಆಶೀರ್ವಾದಕ್ಕೆ ಹೃದಯ ತುಂಬಿದ ಅಭಿನಂದನೆ ಎಂದರು.2018ರ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸಿತ್ತು. ಆದರೆ ಹಾಗಾಗಲಿಲ್ಲ. ಅಂದು ಹೊಂದಾಣಿಕೆ ಆಗಿದ್ದರೆ ಇಂದು ಕಾಂಗ್ರೆಸ್ ಇರುತ್ತಿರಲಿಲ್ಲ ಎಂದರು.ಯಡಿಯೂರಪ್ಪ ಅವರು ಇಡಿ ರಾಜ್ಯ ಸುತ್ತಿ ಕೆಲಸ ಮಾಡಿದ್ದರು. ಮುಂಬರುವ ಚುನಾವಣೆಯಲ್ಲಿಯಾರೂ ಭಿನ್ನಾಭಿಪ್ರಾಯ, ಸಂಶಯಗಳನ್ನ ಹುಟ್ಟುಹಾಕದೇ, ಅದಕ್ಕೆ ಕಿವಿಕೊಡದೇ ಸಹೋದರ ಭಾವನೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಕುಮಾರಸ್ವಾಮಿಯಂತವನು ನಾಡಿಗೆ ಪರಿಚಯ ಆಗಬೇಕಾದರೆ ಅದಕ್ಕೆ ಮೂಲ ಕಾರಣ ಯಡಿಯೂರಪ್ಪ. ಅವಾಗ ಯಡಿಯೂರಪ್ಪ ಅವರು ನನಗೆ ಮುಕ್ತ ಅವಕಾಶ ನೀಡಿದ್ದರಿಂದ ಅತ್ಯುತ್ತಮ ಸರ್ಕಾರ ಮಾಡಿದ್ದೆ. ಅಧಿಕಾರ ಹಸ್ತಾಂತರ ಮಾಡಬೇಕಾದರೆ, ಅದು ನನ್ನಿಂದ ಆಗಿರುವ ತಪ್ಪು ಅಲ್ಲ. ಕೆಲವರ ಕುತಂತ್ರದಿಂದ ತಪ್ಪುಗಳಾಗಿವೆ ಎಂದರು.ನಾವು ಆವಾಗಲೇ ಮೈತ್ರಿ ಮುಂದುವರಿದಿದ್ರೆ ಇಷ್ಟೊತ್ತಿಗೆ ಕಾಂಗ್ರೆಸ್ ನೆಲ ಕಚ್ಚುತ್ತಿತ್ತು. ನಾನು ಮತ್ತೆ ಯಡಿಯೂರಪ್ಪ ಜೊತೆಗೂಡಿ ಕೆಲಸ ಮಾಡಿದಾಗ ಯಾವ ರೀತಿ ರಾಜ್ಯದಲ್ಲಿ ವಾತವರಣ ಇತ್ತು ಎಂದು ನಿಮಗೆ ಗೊತ್ತಿದೆ. ನಮ್ಮ ಹೊಂದಾಣಿಕೆ ನ್ಯಾಚುರಲ್ ಎಂದರು.2014ರಲ್ಲಿ ಬಿಜೆಪಿ ಜೊತೆ ಹೋಗೇ ನಾನು ಸರ್ಕಾರ ಮಾಡಬೇಕು ಎಂದಿಕೊಂಡಿದ್ದೆ. ಆದರೆ ಇವಾಗ ಅದೆಲ್ಲವೂ ಮುಗಿದು ಹೋಗಿರುವ ಅಧ್ಯಾಯ. ಸರ್ಕಾರ ರಚನೆ ಆದ ಕೂಡಲೇ ವಿದೇಶಾಂಗ ಸಚಿವರು ನಮ್ಮ ಜೊತೆ ಚರ್ಚೆ ಮಾಡ್ತಿದ್ದರು. ವಿಶ್ವದಲ್ಲೇ ನರೇಂದ್ರ ಮೋದಿಯ ಬಗ್ಗೆ ಅತ್ಯುತ್ತಮ ವಿಶ್ವಾಸ ಭಾವನೆಗಳಿವೆ. ಅವರ ನಾಯಕತ್ವದಲ್ಲೇ ದೇಶದಲ್ಲಿ ಉತ್ತಮ ಆಡಳಿತ ಕೊಡಲು ನಾವೆಲ್ಲರೂ ಸಹಕಾರ ಕೊಡಬೇಕು ಎಂದರು.ಯಡಿಯೂರಪ್ಪ, ದೇವೇಗೌಡರಿಗೆ ವಯಸ್ಸು ಆಗಿದ್ರು ಕೂಡ ಎಲ್ಲಾ ಕಡೆ ಪ್ರವಾಸ ಮಾಡಿದರು.ಅವರ ಹೋರಾಟದಿಂದ ರಾಜ್ಯದಲ್ಲಿ 19ಸಂಸದರಿಗೆ ಜನರು ಆಶೀರ್ವಾದ ಮಾಡಿದ್ದಾರೆ. ನಾವೆಲ್ಲರೂ ಗಟ್ಟಿ ಧ್ವನಿಯಾಗಿ ದೇಶದ ಅಭಿವೃದ್ಧಿಗೆ ಬದ್ದರಾಗೋಣ. ರಾಜ್ಯದ ಜನರ ನಿರೀಕ್ಷೆ ಗೆ ತಕ್ಕಂತೆ, ಜನರ ಋಣ ತೀರಿಸಲು ನಾವೆಲ್ಲರೂ ಸಿದ್ದರಾಗೋಣ ಎಂದರು.ನ್ಯಾಯಯುತವಾಗಿ ಜನರ ನಿರೀಕ್ಷೆ ಗಳನ್ನು ಈಡೇರಿಸಲು ನರೇಂದ್ರ ಮೋದಿಯವರ ಮನವೊಲಿಕೆ ಮಾಡಿ ಮಾಡಿದಾಗ ಮಾತ್ರ ಈ ಅಭಿನಂದನೆ ನಮಗೆ ಸಲ್ಲುತ್ತದೆ. ಕಿತ್ತೂರು ಕರ್ನಾಟಕ ಭಾಗಕ್ಕೆ ಹೆಚ್ಚು ಯೋಜನೆ ತರಬೇಕು. ಎಲ್ಲಾ ಕಡೆ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಸೋಮಣ್ಣ ಅವರಿಗೆ ಪ್ರಮುಖ ವಾದ ಖಾತೆಗಳಿವೆ. ಆ ಎರಡು ಇಲಾಖೆ ಗಳು ರಾಜ್ಯಕ್ಕೆ ದೊಡ್ಡ ಮಟ್ಟದ ಅಭಿವೃದ್ಧಿ ಆಗೋಕೆ ಪೂರಕವಾಗಿವೆ ಎಂದರು.ಎರಡು ಪಕ್ಷಗಳ ಕಾರ್ಯಕರ್ತರು ಯಾವುದೇ ಸಂಕೋಚ ಇಲ್ಲದೇ, ಜನರ ಮುಂದೆ ಹೋಗಬೇಕುಎಲ್ಲರೂ 28 ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಈ ಗೆಲುವಿನ ಸಂಪೂರ್ಣ ಯಶಸ್ಸು ಎರಡು ಪಕ್ಷಗಳ ಕಾರ್ಯಕರ್ತರುಗೆ ಸಲ್ಲಿಕೆಯಾಗಬೇಕು ಎಂದರು.ಮೈಸೂರು, ಬೆಂಗಳೂರು ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯ್ರಿ ಚುನಾವಣೆಗಳು ನಮ್ಮ ಮುಂದೆ ಇವೆ. ಕಾಂಗ್ರೆಸ್‌ನ್ನು ಜನರು ಸಂಪೂರ್ಣವಾಗಿ ತಿರಸ್ಕಾರ ಮಾಡಲು ನಾವು ಹೋರಾಟ ಮಾಡಬೇಕು. ಒಂದು ವರ್ಷಗಳಲ್ಲಿ ರಾಜ್ಯದಲ್ಲಿ ಏನು ಅಭಿವೃದ್ಧಿ ಆಗಿಲ್ಲ ಎಂದರು.
ಬಾಕ್ಸ್ಗ್ಯಾರಂಟಿಯೇ ಬೆಲೆ ಏರಿಕೆ ಮೂಲ: ಎಚ್ಡಿಕೆಆಸೆಯೇ ದುಃಖಕ್ಕೆ ಮೂಲ ಎಂದು ಬುದ್ದ ಸಂದೇಶ ಕೊಟ್ಟಿದ್ದ. ಈಗ ನಮ್ಮ ಸಿದ್ರಾಮಣ್ಣನವರು ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಅಂತಾ ಮಾಡಿದ್ದಾರೆ ಎಂದು ಕುಟುಕಿದರು.ಕಾಂಗ್ರೆಸ್‌ನಲ್ಲೇ ಅಸಮಾಧಾನ ಇದೆ. ಮುಂದೆ ಇವರನ್ನು ಚುನಾವಣೆ ಗಳಲ್ಲಿ ತಿರಸ್ಕಾರ ಮಾಡಬೇಕು. ಕುಟುಂಬದಲ್ಲಿ ಅಣ್ಣ ತಮ್ಮಂದಿರ ರೀತಿಯಲ್ಲಿ ರಾಜ್ಯದಲ್ಲಿ ಜನಪರವಾದ ಸರ್ಕಾರ ತರುವಂತ ನಿಟ್ಟಿನಲ್ಲಿ ಮುಂದೆ ಹೋಗೋಣ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
