ಭರ್ಜರಿ ಜನಮತದಿಂದ ದೇಶಾದ್ಯಂತ ಕಮಲ ಅರಳಿಸಿ 2014ರಲ್ಲಿ ಮೊದಲ ಬಾರಿ ಪ್ರಧಾನಿ ಗಾದಿಗೇರಿದ ನರೇಂದ್ರ ಮೋದಿ 2019ರಲ್ಲೂ ಅದೇ ದಿಗ್ವಿಜಯ ಪುನರಾವರ್ತಿಸಿದ್ದು ಇತಿಹಾಸ. ಸತತ ಎರಡನೇ ಅವಧಿಗೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದ ಮೋದಿ 2.0 ಸರ್ಕಾರಕ್ಕೀಗ ವರ್ಷದ ಹರ್ಷ. ಬಿಡುವಿಲ್ಲದ ಕಾಯಕ, ಜನಸೇವೆಯ ಬದ್ಧತೆ, ವಿಶ್ವವನ್ನೇ ನಡುಗಿಸಿರುವ ಕರೊನಾ ಮಹಾಮಾರಿ ಮಟ್ಟಹಾಕುವಲ್ಲಿನ ಚಾಣಾಕ್ಷತೆ ಮೋದಿ ವರ್ಚಸ್ಸನ್ನು ಮತ್ತಷ್ಟು ಬಾನೆತ್ತರಕ್ಕೆ ಕೊಂಡೊಯ್ದಿದೆ. ಜನಸಂಘದ ಉಗಮದಿಂದ ಹಿಡಿದು ಸಂಸತ್ ಭವನದ ಗದ್ದುಗೆಯಲ್ಲಿ ಕಮಲ ಅರಳುವವರೆಗಿನ ಅಪೂರ್ವ ಕ್ಷಣಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷ ಲೇಖನದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ
2014 ಲೋಕಸಭಾ ಚುನಾವಣೆ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನನಸು ಮಾಡಿದ ಚುನಾವಣೆ. ಹಿಂದು ಧರ್ಮ-ಸಂಸ್ಕೃತಿ ಸಂರಕ್ಷಣೆ ಮಾಡುವ ಭಾರತದ ಬಹುಸಂಖ್ಯಾತ ಹಿಂದುಗಳ ಆಶಯಗಳಿಗೆ ದನಿಯಾಗಬಲ್ಲ ರಾಜಕೀಯ ಶಕ್ತಿಯೊಂದು ಭಾರತದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅನ್ನುವುದು ಈ ದೇಶದ ಕೋಟ್ಯಾನುಕೋಟಿ ಭಾರತೀಯರ ಅಂತರಂಗದ ಇಂಗಿತವಾಗಿತ್ತು.
ಪಂಡಿತ್ ಜವಹರಲಾಲ್ ನೆಹರು ಭಾರತಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣ ರಚಿಸಿದ ಜವಾಬ್ದಾರಿ ಸರ್ಕಾರದಲ್ಲಿ 3 ವರ್ಷಗಳ ಕಾಲ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ, 1950ರಲ್ಲಿ ಸಚಿವ ಪದವಿಗೆ ಗುಡ್ ಬೈ ಹೇಳಿದ್ದರು. 1943ರಿಂದ 1946ರವರೆಗೆ ಅಖಿಲ ಭಾರತೀಯ ಹಿಂದು ಮಹಾಸಭಾ ಅಧ್ಯಕ್ಷರಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿಯವರಿಗೆ, ನೆಹರು ಸರ್ಕಾರದಿಂದ ಭಾರತದ ಹಿತಾಸಕ್ತಿ ರಕ್ಷಿಸಲು ಸಾಧ್ಯವಿದೆ ಎನ್ನುವ ನಂಬಿಕೆ ಮೂಡಿರಲಿಲ್ಲ. ಅಖಂಡ ಭಾರತದ ಸಂಸ್ಕೃತಿ, ಪರಂಪರೆಯನ್ನು ರಕ್ಷಣೆ ಮಾಡುವ ರಾಜಕೀಯ ಸಂಘಟನೆಯೊಂದರ ಅಗತ್ಯವಿದೆ ಅನ್ನುವುದು ಶ್ಯಾಮಪ್ರಸಾದ್ ಮುಖರ್ಜಿಯವರ ಮನಸ್ಸಿನ ಇಂಗಿತವಾಗಿತ್ತು. ಈ ದಿಸೆಯಲ್ಲಿ ಅವರು ಸ್ಥಾಪನೆ ಮಾಡಿದ್ದೇ ಭಾರತೀಯ ಜನಸಂಘ. ಸಂವಿಧಾನ ರಚನೆಯ ನಂತರ 1951-52ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಜನಸಂಘ ಚುನಾವಣಾ ಅಖಾಡ ಪ್ರವೇಶಿಸಿತ್ತು. ಆದರೆ ಕಾಂಗ್ರೆಸ್ಸಿನ ಪ್ರಭಾವಳಿ ಎದುರು ಜನಸಂಘ ತನ್ನ ಅಸ್ತಿತ್ವದ ಛಾಪು ಮೂಡಿಸುವುದು ಸಾಧ್ಯವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಚುನಾವಣೆ ಯಿಂದ ಚುನಾವಣೆಗೆ ಭಾರತೀಯ ಜನಸಂಘ ನಿಧಾನವಾಗಿ ಭಾರತದ ಉದ್ದಗಲಕ್ಕೂ ತನ್ನ ಇರುವಿಕೆಯನ್ನು ಪ್ರದರ್ಶಿಸಲಾರಂಭಿಸಿತ್ತು. ಪ್ರಸಕ್ತ ಹಿನ್ನೆಲೆಯಲ್ಲಿ ಜನಸಂಘದ ರೂಪಾಂತರ ಭಾರತೀಯ ಜನತಾಪಕ್ಷ 1988, 1999ರಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಾಗ ಸಮಸ್ತ ಭಾರತೀ ಯರ ಕನಸು ಭಾಗಶಃ ನನಸಾಗಿತ್ತು.
ಭಾರತೀಯ ಜನತಾ ಪಕ್ಷ ಸ್ವಂತಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗದಿದ್ದರೂ ಹತ್ತು ಹಲವು ಆಸಕ್ತ ರಾಜಕೀಯ ಪಕ್ಷಗಳ ಜತೆಗೂಡಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟ ಸರ್ಕಾರ ರಚಿಸಲಾಯಿತು. ಇದರಿಂದ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತೇ ಹೊರತು ನಮ್ಮ ಪಕ್ಷದ ಆಶಯಗಳನ್ನು ಈಡೇರಿಸಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಒಂದು ರೀತಿಯಲ್ಲಿ ಪಕ್ಷದ ಭಾವನಾತ್ಮಕ ಆಶಯಗಳ ಮೊದಲ ಹೆಜ್ಜೆ ಸಾಕಾರಗೊಂಡಿತ್ತು.
ಇದನ್ನೂ ಓದಿಇನ್ನು ಮುಂದೆ ವರ್ಷಕ್ಕೆ 100 ದಿನ ಮಾತ್ರ ಶಾಲೆ!
ಅದೇನೇ ಇರಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದಿಂದ ಪ್ರಧಾನಿ ಅಭ್ಯರ್ಥಿ ಎಂದು ಘೊಷಣೆಯಾದ ದಿನದಿಂದಲೇ ಬಿಜೆಪಿ ಖದರ್ ಬದಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಬದುಕನ್ನು ರಾಷ್ಟ್ರಹಿತಕ್ಕೆ ಸಮರ್ಪಿಸಿಕೊಂಡಿದ್ದ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿ ದೇಶ ಮೆಚ್ಚುವ ಆಡಳಿತ ನೀಡಿದ್ದರು. ಭಾರತದ ಪ್ರಧಾನಿಯಾಗಿ ಆಯ್ಕೆಗೊಂಡರೆ ಗುಜರಾತಿನಲ್ಲಿ ಅನಾವರಣಗೊಳಿಸಿದ ಅಭಿವೃದ್ಧಿ ಪರ್ವವನ್ನು ಅಖಂಡ ಭಾರತದಲ್ಲಿ ಸಾಕಾರಗೊಳಿಸಬಹುದು ಎಂಬುದು ಮೋದಿ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎನ್ನುವ ಪಕ್ಷದ ಘೊಷಣಾಪತ್ರಕ್ಕೆ ಸಹಿ ಹಾಕಿದವರಲ್ಲಿ ಮೊದಲಿಗ ನಾನೇ. ಇದು ನನಗೆ ಹೆಮ್ಮೆಯ ಸಂಗತಿ. 2014ರ ಲೋಕಸಭಾ ಚುನಾವಣೆಯಲ್ಲಿ ಯೋಜಿತ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ ಭಾರತೀಯ ಜನತಾ ಪಕ್ಷಕ್ಕೆ ಚೊಚ್ಚಲ ಗೆಲುವನ್ನು ತಂದುಕೊಟ್ಟರು. 282 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸ್ವಂತಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು.
ಆಡಳಿತಾವಧಿಯ ಮೊದಲ ಐದು ವರ್ಷಗಳಲ್ಲಿ ಕಪ್ಪುಹಣದ ವಿರುದ್ಧ ಸಮರ ಸಾರುವ ಹಿನ್ನೆಲೆಯಲ್ಲಿ ಘೊಷಿಸಿದ ಡಿಮಾನಿಟೈಸೇಷನ್, ದೇಶದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ದೃಷ್ಟಿಯಿಂದ 2014ರ ಅಕ್ಟೋಬರ್ 2ರಂದು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ, ಶ್ರೀಸಾಮಾನ್ಯನೂ ಬ್ಯಾಂಕ್​ಗಳಲ್ಲಿ ತನ್ನ ಖಾತೆ ಹೊಂದಲು ಅನುಕೂಲ ಆಗುವ ಹಾಗೆ ಆರಂಭಿಸಿದ ಜನಧನ ಯೋಜನೆ. ಈ ಯೋಜನೆ ಪರಿಣಾಮ 38 ಕೋಟಿ ಶ್ರೀಸಾಮಾನ್ಯರು ಬ್ಯಾಂಕ್​ಗಳಲ್ಲಿ ತಮ್ಮ ಖಾತೆ ತೆರೆಯಲು ಸಾಧ್ಯವಾಯಿತು. ಇನ್ನು ಸ್ವಾತಂತ್ರಾ್ಯನಂತರದಲ್ಲಿಯೇ ಐತಿಹಾಸಿಕ ತೆರಿಗೆ ಸುಧಾರಣೆ ಕ್ರಮ ಎಂದು ಭಾವಿಸಲಾದ ಜಿಎಸ್​ಟಿ ಪದ್ಧತಿ ಜಾರಿ, ಮೊದಲಿದ್ದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆಯನ್ನು ಪ್ರಧಾನ ಬಜೆಟ್ ಜತೆ ವಿಲೀನಗೊಳಿಸಿದ್ದು, ರಕ್ಷಣಾ ಉಪಕರಣಗಳೂ ಸೇರಿ ಎಲ್ಲ ರೀತಿಯ ಉತ್ಪನ್ನಗಳನ್ನು ಭಾರತದಲ್ಲಿಯೇ ಉತ್ಪಾದಿಸುವುದಕ್ಕೆ ಪೂರಕವಾಗಿ ಜಾರಿಗೊಳಿಸಿದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ, ರಾಷ್ಟ್ರದ ಪ್ರಮುಖ ನಗರಗಳನ್ನು ಸಂರ್ಪಸುವ ದೃಷ್ಟಿಯಿಂದ ಸುಧಾರಿತ ರೈಲ್ವೆ ವ್ಯವಸ್ಥೆಗೆ ನೀಡಿದ ಆದ್ಯತೆ, ಈ ದಿಸೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ಟ್ರೇನ್ ಕಾಮಗಾರಿ ಪ್ರಾರಂಭ. ಡಿಜಿಟಲ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿ ಪರಿಕಲ್ಪನೆಗೆ ಚಾಲನೆ, ಭಾರತ ಪಾಕಿಸ್ತಾನ ಗಡಿಯ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳ ಉಪಟಳ ತಡೆಯುವಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಹೀಗೆ ಹತ್ತು ಹಲವು ಜನಹಿತ ಕಾರ್ಯಕ್ರಮಗಳ ಮೂಲಕ ಮೋದಿ ಭಾರತದ ಜನಮನ ಗೆಲ್ಲುವಲ್ಲಿ ಯಶಸ್ವಿ ಆದರು. ಒಂದು ರೀತಿಯಲ್ಲಿ ಅವರು ಭಾರತದ ರಾಜಕಾರಣದ ಯುಗ ಪ್ರವರ್ತಕರಾಗಿ ಹೊರಹೊಮ್ಮಿದ್ದರು ಎಂದು ಹೇಳಲು ಹೆಮ್ಮೆಯಾಗುತ್ತದೆ.
ಇದನ್ನೂ ಓದಿವರ್ತುಲ ರಸ್ತೆ ಸ್ವಚ್ಛತೆಗೆ ಪರಿಹಾರ ಸೂತ್ರ!
ಇದರ ಪರಿಣಾಮವಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಸಾಧ್ಯವಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 282 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದ್ದರೆ, 2019ರ ಚುನಾವಣೆಯಲ್ಲಿ 302 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಇಂಥ ಐತಿಹಾಸಿಕ ಗೆಲುವಿಗೆ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಕಾರ್ಯಕ್ರಮಗಳೇ ಪ್ರಧಾನವಾಗಿ ಕಾರಣ.
ಭಾರತವನ್ನು ದಶಕಗಳಿಂದ ಕಾಡುತ್ತಿದ್ದ ಅನೇಕ ಗಂಭೀರ ಸಮಸ್ಯೆಗಳಿಗೆ ಎರಡನೇ ಅಧಿಕಾರಾವಧಿಯ ಕೇವಲ ಒಂದೇ ವರ್ಷದಲ್ಲಿ ಯಶಸ್ವಿ ಹಾಗೂ ದಿಟ್ಟತನದ ಪರಿಹಾರಗಳನ್ನು ಕಂಡುಕೊಳ್ಳುವ ರಾಜಕೀಯ ನೈಪುಣ್ಯವನ್ನು ಪ್ರದರ್ಶಿಸಿದರು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಹಾಗೂ 35ನೇ ವಿಧಿ ತೆರವುಗೊಳಿಸಿದ್ದು ಭಾರತದ ಅಖಂಡತೆ ಮತ್ತು ಏಕತೆಯನ್ನು ರಕ್ಷಿಸುವ ಹಾದಿಯಲ್ಲಿ ಐತಿಹಾಸಿಕ ನಿರ್ಧಾರ. 370ನೇ ವಿಧಿಯ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನು ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಐವತ್ತರ ದಶಕದ ಆರಂಭದಲ್ಲಿಯೇ ವಿರೋಧಿಸಿದ್ದರು. ಈ ಕಾರಣಕ್ಕಾಗಿಯೇ ಅವರು ಪ್ರಾಣಾರ್ಪಣೆ ಮಾಡಿಕೊಂಡಿದ್ದರು. ಈ ದಿಸೆಯಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಕನಸನ್ನು ಮೋದಿ ನನಸು ಮಾಡಿದರು.
ಮುಸ್ಲಿಮ್ ಧಾರ್ವಿುಕ ಕಾಯ್ದೆಯ ರಕ್ಷಣೆಯನ್ನು ಪಡೆದುಕೊಂಡು ಪತ್ನಿಗೆ ನಿರ್ದಾಕ್ಷಿಣ್ಯವಾಗಿ ನೀಡುತ್ತಿದ್ದ ತ್ರಿವಳಿ ತಲಾಖ್​ನ್ನು ರದ್ದು ಮಾಡಿದ್ದು ಎನ್​ಡಿಎ ಸರ್ಕಾರದ ದಿಟ್ಟ ನಿರ್ಧಾರ. ಇನ್ನು ಭಯೋತ್ಪಾದನೆಯ ವಿರುದ್ಧ ‘ಖ್ಞಿ್ಝಡ್ಛಿu ಅಠಿಜಿಡಜಿಠಿಜಿಛಿಠ (ಕ್ಟಛಿಡಛ್ಞಿಠಿಜಿಟ್ಞ) ಅಞಛ್ಞಿಛಞಛ್ಞಿಠಿ ಆಜ್ಝಿ್ಝ 2019’- ಮಹತ್ವದ ಕಾಯ್ದೆ. ರಾಷ್ತ್ರೀಕೃತ ಬ್ಯಾಂಕುಗಳು ವಿಲೀನ, ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ರಾಷ್ಟ್ರಗಳಲ್ಲಿ ಧಾರ್ವಿುಕ ಹಿಂಸೆಗೆ ಗುರಿಯಾಗಿದ್ದು, ಭಾರತಕ್ಕೆ ಮರಳಲು ಇಚ್ಛಿಸುತ್ತಿದ್ದ ಹಿಂದುಗಳು, ಬೌದ್ಧರು, ಜೈನರು, ಸಿಕ್ಖರು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವ ನಿರ್ಧಾರ ಮತ್ತೊಂದು ಐತಿಹಾಸಿಕ ಕಾರ್ಯಕ್ರಮ. ಜತೆಗೆ ಸಾವಿರಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಮಜನ್ಮಭೂಮಿ ವಿವಾದಕ್ಕೆ ಸುಪ್ರೀಂಕೋರ್ಟ್ ತೀರ್ಪಿನಂತೆ ಸರ್ವಸಮ್ಮತ ನಿರ್ಧಾರ ಕೈಗೊಂಡದ್ದು ಮೋದಿಯವರ ದೂರದೃಷ್ಟಿಯ ಫಲ.
ಇದನ್ನೂ ಓದಿಖಾಸಗಿ ಬಸ್ ಚಾಲಕರು, ಅರ್ಚಕರಿಗೆ ಕಿಟ್ ವಿತರಣೆ
ಕರೊನಾ ಸೋಂಕು ಜಗತ್ತಿನ ಉದ್ದಗಲಕ್ಕೂ ಸ್ಪೋಟಗೊಂಡ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೈಗೊಂಡ ದಿಟ್ಟ ನಿರ್ಧಾರ ಜಗತ್ತಿಗೆ ಮಾದರಿ ಆಯಿತು. ಕರೊನಾ ಹೆಮ್ಮಾರಿ ಭಾರತವನ್ನು ಪ್ರವೇಶಿಸಿದ ಗಳಿಗೆಯಿಂದಲೇ ಕರೊನಾ ವ್ಯಾಪಿಸದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಪರಿಣಾಮವಾಗಿ ಭಾರತದ ಲಕ್ಷಾಂತರ ಜನರ ಜೀವ ಉಳಿಯಿತು. ದಿಟ್ಟ ನಿರ್ಧಾರ ರಾಜಕೀಯ ಇಚ್ಛಾಶಕ್ತಿಯ ಪರಿಣಾಮ ನರೇಂದ್ರ ಮೋದಿಯವರು ವಿಶ್ವದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂಥ ದೂರದೃಷ್ಟಿಯ ಹಾಗೂ ರಾಜಕೀಯ ಇಚ್ಛಾಶಕ್ತಿಯ ಪ್ರಧಾನಿಯನ್ನು ಹೊಂದಿರುವುದು ನಿಜಕ್ಕೂ ಭಾರತಕ್ಕೆ ಮತ್ತು ಭಾರತೀಯರಿಗೆ ಹೆಮ್ಮೆಯ ವಿಷಯ.
ಮಹತ್ವದ ಸುಧಾರಣೆಗಳು
‘ಜಮ್ಮು- ಕಾಶ್ಮೀರ ಪುನರ್ವಿಂಗಡಣಾ ಮಸೂದೆ’ ಯನ್ನು ಸಂಸತ್​ನಲ್ಲಿ ಮಂಡಿಸಿ ಅದಕ್ಕೆ ಅನುಮೋದನೆ ಪಡೆದುಕೊಂಡರು. ಈ ಯೋಜನೆ ಅನ್ವಯ ಜಮ್ಮು- ಕಾಶ್ಮೀರ ಮತ್ತು ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಗೊಂಡವು. ಈ ಮೂಲಕ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ರೂಪಾಂತರ ಹೊಂದಿತು. ಇದರಿಂದಾಗಿ ಸಾವಿರ ವರ್ಷಗಳಿಗೂ ಹಳೆಯದಾದ ಮತ್ತು ಭಾರತದ ಅಖಂಡತೆ ಮತ್ತು ಏಕತೆಗೆ ಧಕ್ಕೆಯಾಗಿದ್ದ ಸಮಸ್ಯೆಯೊಂದು ಯಾರೂ ನಿರೀಕ್ಷಿಸದ ರೀತಿಯಲ್ಲಿ ಬಗೆಹರಿಯಿತು. ಇದು ಮೋದಿ ಸರ್ಕಾರದ ದೊಡ್ಡ ಸಾಧನೆ.
ಪ್ರಿಯಕರ ಮದುವೆ ಆಗಲ್ಲ ಅಂದರೂ ಪೊಲೀಸ್ ಸ್ಟೇಷನ್‌ಗೆ ಕರೆಸಿ ತಾಳಿ ಕಟ್ಟಿಸಿಕೊಂಡ ಗಟ್ಟಿಗಿತ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 10 =
Remember me
