ಶಿವಮೊಗ್ಗ:ರಾಜಕೀಯವಾಗಿ ನನ್ನ ಬೆಳವಣಿಗೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಅಂಗವಾಗಿ ಶನಿವಾರ ಶಿಕಾರಿಪುರದಲ್ಲಿ ಏರ್ಪಡಿಸಿದ್ದ ರೈತಾಭಿಮಾನ ಕಾರ್ಯಕ್ರಮದಲ್ಲಿ ಬಿಎಸ್​ವೈ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಯಡಿಯೂರಪ್ಪ ನನಗೆ ಸಾಕಷ್ಟು ಅವಕಾಶ, ಮಾರ್ಗದರ್ಶನ ನೀಡಿದ್ದಾರೆ. ನನಗೆ ಅಧಿಕಾರ ಬಿಟ್ಟುಕೊಡುವಾಗಲೂ ಅವರ ಮನಸ್ಸಿನಲ್ಲಿ ಕಹಿ ಇರಲಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಓರ್ವ ರಾಜಕಾರಣಿ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಾನೆ. ಆದರೆ ಓರ್ವ ಮುತ್ಸದ್ದಿ ಮುಂದಿನ ಪೀಳಿಗೆ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾನೆ. ಬಿಎಸ್​ವೈ ಎರಡನೇ ವರ್ಗಕ್ಕೆ ಸೇರಿದವರು. ದೂರದೃಷ್ಟಿಯುಳ್ಳ ನಾಯಕನಿಗೆ ಅಧಿಕಾರ ಸಿಕ್ಕರೆ ರಾಜ್ಯ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಯಡಿಯೂರಪ್ಪರ ಆಡಳಿತ ನಿದರ್ಶನ ಎಂದರು. ರಾಜ್ಯ ಹಾಗೂ ಪಕ್ಷಕ್ಕೆ ಒಳ್ಳೆಯದಾಗಬೇಕು ಎಂಬುದಷ್ಟೇ ಯಡಿಯೂರಪ್ಪರ ಅಭಿಲಾಷೆ. ಬಿಎಸ್​ವೈ ರೀತಿಯ ದೊಡ್ಡ ಮನಸ್ಸಿನ ನಾಯಕ ಮತ್ತೊಬ್ಬರಿಲ್ಲ. ಅವರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ. ಅಧಿಕಾರವಿಲ್ಲದಿದ್ದಾಗಲೂ ರಾಜ್ಯದ ಜನರು ಬಿಎಸ್​ವೈಗೆ ಅಪಾರ ಪ್ರೀತಿ ತೋರಿದ್ದಾರೆ. ಅವರು ಕರ್ನಾಟಕ ಇತಿಹಾಸದ ಅಪರೂಪದ ರೈತ ನಾಯಕ. ಜನರ ಮನಸ್ಸಿನಲ್ಲಿ ಚಿರಸ್ಥಾಯಿ ಎಂದು ಹೇಳಿದರು.
ಶಿಕಾರಿಪುರ ಜನರ ಕೊಡುಗೆ:ಶಿಕಾರಿಪುರದ ಜನರು 45 ವರ್ಷದ ಹಿಂದೆಯೇ ಯಡಿಯೂರಪ್ಪ ಸಾಮರ್ಥ್ಯ ಗುರುತಿಸಿ ಬೆಳೆಸಿದರು. ಇದರಿಂದ ರಾಜ್ಯಕ್ಕೆ ಒಳ್ಳೆಯ ನಾಯಕ ಸಿಕ್ಕಂತಾಗಿದೆ. ಕರ್ನಾಟಕಕ್ಕೆ ಯಡಿಯೂರಪ್ಪರನ್ನು ಶಿಕಾರಿಪುರದ ಜನರು ನೀಡಿದ ಕೊಡುಗೆ ಎಂದು ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಬಜೆಟ್ ಅಧಿವೇಶನ ನಂತರ ಬಿಎಸ್​ವೈ ಪ್ರವಾಸ:ಬಜೆಟ್ ಅಧಿವೇಶನ ನಂತರ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಮಾಡಿ ಪಕ್ಷ ಮತ್ತಷ್ಟು ಸಂಘಟಿಸುತ್ತೇವೆ. ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಮುಂದಿಟ್ಟುಕೊಂಡು ಮತ ಯಾಚಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. ಅದು ಈಡೇರುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ದುಡಿಮೆಯೇ ದೊಡ್ಡಪ್ಪ:ದುಡ್ಡೇ ದೊಡ್ಡಪ್ಪ ಎಂಬ ನಾಣ್ಣುಡಿ ಬಹಳ ಜನಪ್ರಿಯ. ಆದರೆ ನಾವು ಬಜೆಟ್​ನಲ್ಲಿ ಹೊಸ ಸಂದೇಶ ನೀಡಿದ್ದೇವೆ. ದುಡಿಮೆಯೇ ದೊಡ್ಡಪ್ಪ ಎಂಬುದು ನಮ್ಮ ದೃಷ್ಟಿಕೋನ. ಬಜೆಟ್​ನಲ್ಲಿ ಯುವಕರು, ಮಹಿಳೆಯರು, ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗಿದೆ. ಅವರ ದುಡಿಮೆ ಹೆಚ್ಚುವುದರಿಂದ ರಾಜ್ಯದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಬೊಮ್ಮಾಯಿ ಹೇಳಿದರು. ಕರೊನಾ ಅವಧಿಯಲ್ಲಿ ಸಿಎಂ ಆಗಿದ್ದ ಬಿಎಸ್​ವೈ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದರು. ಹಾಗಾಗಿ ರಾಜ್ಯದ ಆರ್ಥಿಕತೆ ಹಳಿ ತಪ್ಪಿಲ್ಲ. ಹೀಗಾಗಿ ಈ ಬಾರಿ ಉತ್ತಮ ಬಜೆಟ್ ಮಂಡಿಸಲು ಸಾಧ್ಯವಾಯಿತು ಎಂದರು.
ಒಂದು ಭೀಕರ ಸ್ಫೋಟ, ವಾರ ಕಳೆಯುವಷ್ಟರಲ್ಲಿ 14 ಸಾವು; ಸೀಮಂತದ ಬೆನ್ನಿಗೇ ಭಾರಿ ಸೂತಕ…

52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 7 =
Remember me
