| ಮೃತ್ಯುಂಜಯ ಕಪಗಲ್ಬೆಂಗಳೂರು
ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, ಆ ಮೂಲಕ ತಮ್ಮ ನಾಯಕತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ತಂತ್ರಗಾರಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಣೆದಿದ್ದಾರೆ. ಪಕ್ಷದ ರಾಜ್ಯ ನಾಯಕತ್ವವು ಬೂತ್​ವುಟ್ಟದಿಂದ ಸಂಘಟನಾ ಬಲ ಬಳಸಿಕೊಳ್ಳುತ್ತಿದ್ದರೆ, ಅಧಿಕಾರದ ವರ್ಚಸ್ಸಿನೊಂದಿಗೆ ಜನರ ಒಲವು ಗಿಟ್ಟಿಸಿಕೊಳ್ಳಲು ಬಿಎಸ್​ವೈ ಮುಂದಾಗಿದ್ದಾರೆ. ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಪ್ರಚಾರ ನಡೆಸಿದರೆ, ಹಲವು ಸಮುದಾಯಗಳ ಪ್ರಭಾವಿ ಮುಖಂಡರೊಂದಿಗೆ ರ್ಚಚಿಸಿ ಸೆಳೆಯುವ ಕಾರ್ಯತಂತ್ರ ರೂಪಿಸಿದ್ದಾರೆ.
ಆಂತರಿಕ ಮೌಲ್ಯಮಾಪನದ ವರದಿ ಪ್ರಕಾರ, ಶಿರಾ ತೀವ್ರ ಸೆಣಸು, ಆರ್​ಆರ್​ನಗರದಲ್ಲಿ ಪೂರಕ ವಾತಾವರಣವಿದೆ. ಅತಿಯಾದ ಆತ್ಮವಿಶ್ವಾಸ ಮುಳುವಾಗಬಲ್ಲದು ಎಂದರಿತು ಸಚಿವ ಸಂಪುಟದ ಸದಸ್ಯರಿಗೆ ಮಾತಿನ ಚಾಟಿ ಬೀಸಿ ಪ್ರಚಾರದ ಅಖಾಡಕ್ಕೆ ಕಳುಹಿಸಿದರು. ಇದೀಗ ಶಿರಾದಲ್ಲಿ ಖುದ್ದು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ಆರ್​ಆರ್ ನಗರದಲ್ಲಿ ಶನಿವಾರ ಸಂಜೆಯವರೆಗೂ ವಿವಿಧ ಪ್ರದೇಶಗಳಲ್ಲಿ ರೋಡ್ ಶೋ ಮತ್ತು ರ್ಯಾಲಿಗಳಲ್ಲಿ ಪಾಲ್ಗೊಂಡು ಮತ ಬೇಟೆಗೆ ಇಳಿಯಲಿದ್ದಾರೆ.
ನಾಯಕತ್ವ ಗಟ್ಟಿಗೊಳಿಸಿಕೊಳ್ಳಲೆಂದು ಬಿಎಸ್​ವೈ 2 ಕ್ಷೇತ್ರಗಳನ್ನು ಗೆಲ್ಲುವ ಕಾರ್ಯತಂತ್ರ ರೂಪಿಸಿ, ಅದರ ಪ್ರಕಾರವೇ ರಚಿತ ತಂಡಗಳನ್ನು ವಿವಿಧ ಹಂತದ ಕ್ಷೇತ್ರ ಕಾರ್ಯಕ್ಕೆ ಇಳಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಜತೆಗೆ ಸಮನ್ವಯತೆ ಸಾಧಿಸಿ, ಸಮನ್ವಯ ಮತ್ತು ಸಂಪರ್ಕದ ಕೊರತೆ ಉಂಟಾಗದಂತೆ ನೋಡಿಕೊಂಡಿದ್ದಾರೆ.
ಆರ್​ಆರ್ ನಗರಕ್ಕೆ ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಶಾಸಕ ಅರವಿಂದ ಲಿಂಬಾವಳಿಗೆ ಪ್ರಮುಖ ಜವಾಬ್ದಾರಿ ಒಪ್ಪಿಸಿದರೆ, ಶಿರಾದಲ್ಲಿ ಸಚಿವ-ಶಾಸಕರೊಂದಿಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೂ ಮೇಲುಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ. ಶಿರಾದಲ್ಲಿ ಎಂದಿಗೂ ಗೆಲ್ಲದ, ಠೇವಣಿ ಉಳಿಸಿಕೊಳ್ಳಲು ಅನೇಕ ಬಾರಿ ಮುಗ್ಗರಿಸಿದ ಪಕ್ಷವೀಗ ತೀವ್ರ ಸ್ಪರ್ಧೆಯೊಡ್ಡುವ ಹಂತಕ್ಕೆ ತಲುಪಿದೆ. ಇದು ಕೆ.ಆರ್.ಪೇಟೆ ಪ್ರಯೋಗದ ಮುಂದುವರಿದ ಭಾಗವೆಂದು ಹೇಳಲಾಗುತ್ತಿದ್ದು, ಬಹಿರಂಗ ಪ್ರಚಾರದ ಜತೆಗೆ ತೆರೆಮರೆಯಲ್ಲಿ ವಿವಿಧ ಕ್ಷೇತ್ರಗಳ ಮುಖಂಡರನ್ನು ಸೆಳೆಯುವ ಕಸರತ್ತು ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸ್ಪಷ್ಟ ಸಂದೇಶ ರವಾನೆ ಚಿಂತನೆ:ಪಕ್ಷದ ಒಳಗೆ ಆಗಾಗ್ಗೆ ಕೇಳಿಬರುವ ನಾಯಕತ್ವದ ಬದಲಾವಣೆ ಸೊಲ್ಲಡಗಿಸುವುದಕ್ಕೆ 2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವುದು ಬಿಎಸ್​ವೈಗೆ ಮುಖ್ಯವಾಗಿದೆ. ಆ ಮೂಲಕ ಪಕ್ಷದ ಒಳ-ಹೊರಗಿನ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸುವ ಚಿಂತನೆ ನಡೆಸಿದ್ದಾರೆ. ಈ ಹಿಂದೆ ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ಸುಭದ್ರಪಡಿಸಿದರು. ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರ ಋಣ ತೀರಿಸಿಕೊಂಡರು. ಕೊಟ್ಟ ಮಾತು ಉಳಿಸಿಕೊಂಡು ಪಕ್ಷ ಮತ್ತು ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದಾರೆ. ಇದೀಗ ನಾಯಕತ್ವದ ಬಗೆಗಿನ ಅಪಸ್ವರ ಚಿವುಟಿ ಹಾಕುವುದಕ್ಕೆ ಮುಂದಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
