ಬೆಂಗಳೂರು :ತಂತ್ರಜ್ಞಾನ ಜಗತ್ತಿನಲ್ಲಿ ಕುತೂಹಲ ಕೆರಳಿಸಿರುವ ಬಹು ನಿರೀಕ್ಷಿತ ‘ಬೆಂಗಳೂರು ತಾಂತ್ರಿಕ ಶೃಂಗಕ್ಕೆ (ಬಿಟಿಎಸ್ 2020) ಗುರುವಾರ ಭರ್ಜರಿ ಚಾಲನೆ ದೊರೆಯಿತು. ಜನಜೀವನವನ್ನು ಸುಗಮ-ಸರಳವಾಗಿಸುವ ಸಾಧ್ಯತೆಗಳನ್ನು ತೆರೆದಿಟ್ಟು, ತಂತ್ರಜ್ಞಾನದ ಅಗಾಧತೆಯನ್ನು ಅನಾವರಣಗೊಳಿಸಿದ 3 ದಿನಗಳ ಈ ಶೃಂಗ ಇದೇ ಮೊದಲ ಬಾರಿಗೆ ವರ್ಚುವಲ್ ವೇದಿಕೆಯಲ್ಲಿ ನಡೆಯುತ್ತಿರುವುದು ವಿಶೇಷ.
ಉದ್ಘಾಟನಾ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಶೃಂಗದಿಂದ ದೇಶ ಮತ್ತು ವಿಶ್ವದ ನಿರೀಕ್ಷೆಗಳೇನು ಎನ್ನುವುದನ್ನು ಸಂಕ್ಷಿಪ್ತವಾಗಿ ವಿವರಿಸಿ, ಮಾಹಿತಿ, ಜೈವಿಕ ತಂತ್ರಜ್ಞಾನದ ನಿಪುಣರು, ಉದ್ಯಮಿಗಳು, ಹೂಡಿಕೆದಾರರ, ನವೋದ್ಯಮಿಗಳ ಸಮಾವೇಶಕ್ಕೆ ದಿಕ್ಸೂಚಿಯಾದರು. ದತ್ತಾಂಶ ಸಂರಕ್ಷಣೆ, ಸೈಬರ್ ಭದ್ರತೆಯತ್ತ ಗಮನ ಸೆಳೆದು, ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಉದ್ಯಮ ಸ್ನೇಹಿ ನೀತಿ ಪ್ರಸ್ತಾಪಿಸಿದರು ಅಲ್ಲದೆ, ದೇಶದ ಯುವಶಕ್ತಿ, ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆಯೂ ಜಗತ್ತಿನೆದುರು ಪ್ರಧಾನಿ ಬಿಚ್ಚಿಟ್ಟರು.
ಸಾಧ್ಯತೆಗಳತ್ತ ನೋಟಮಹಿಂದ್ರಾ ಗ್ರೂಪ್ ಕಂಪನಿ ಅಧ್ಯಕ್ಷ ಆನಂದ ಮಹಿಂದ್ರಾ ಮುಖ್ಯ ಭಾಷಣ ಮಾಡಿದರು. ಕರೊನಾ ನಂತರದ ಕಾಲದಲ್ಲಿ ಕರ್ನಾಟಕ ಹಾಗೂ ಭಾರತದಲ್ಲಿರುವ ಹೂಡಿಕೆ ಅವಕಾಶಗಳು, ಅದರಲ್ಲೂ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಮೇಲೆ ಬೆಳಕು ಚೆಲ್ಲಿದರು. ನಂತರ ನಡೆದ 4 ಗೋಷ್ಠಿಗಳು ಹೊಸ, ಸಾಧ್ಯತೆಗಳು, ಆವಿಷ್ಕಾರಗಳು, ನಾವೀನ್ಯತೆಯತ್ತ ಗಮನ ಸೆಳೆದವು. ಜತೆಗೆ ನಿತ್ಯಜೀವನದಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ, ಆರೋಗ್ಯ, ಕೃಷಿ, ನಿಸರ್ಗ ವಿಕೋಪ ಸಂದರ್ಭದಲ್ಲಿ ಡ್ರೋನ್ ಹಾಗೂ ರೋಬೊಟ್​ಗಳ ನಿರ್ಣಾಯಕ ಪಾತ್ರ, ಕೃತಕ ಬುದ್ಧಿಮತ್ತೆ ಬಳಕೆ ಕುರಿತು ಮಾತುಕತೆ ನಡೆಯಿತು.
ಸಮಾಜ ಮತ್ತು ಉಪಗ್ರಹಗಳು, ವಿಶ್ವವನ್ನು ಹೊಸದಾಗಿ ಬಾಧಿಸುತ್ತಿರುವ ಮಾರಣಾಂತಿಕ ವೈರಸ್​ಗಳ ವಿರುದ್ಧ ಲಸಿಕೆ, ಔಷಧಗಳ ಆವಿಷ್ಕಾರ, ಡಿಜಿಟಲ್ ಹೆಲ್ತ್​ಕೇರ್ ಮುಂತಾದ ಅಂಶಗಳ ಬಗ್ಗೆ ವಿಚಾರ-ವಿಮರ್ಶೆಯಾಯಿತು. ಶೃಂಗದಲ್ಲಿ 25 ಪಾಲುದಾರ ದೇಶಗಳು ಪಾಲ್ಗೊಂಡಿವೆ. ವಿವಿಧ ಉದ್ಯಮಗಳು, 100ಕ್ಕೂ ಹೆಚ್ಚು ನವೋದ್ಯಮಗಳು ಹೊಸ ಆವಿಷ್ಕಾರ ಹಾಗೂ ಸಂಶೋಧನೆಗಳನ್ನು ಒಳಗೊಂಡ 250 ಪ್ರದರ್ಶನಗಳು ಗಮನಸೆಳೆಯುತ್ತಿವೆ. ವಿವಿಧ ದೇಶಗಳ 4000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದರೆ, 20,000ಕ್ಕೂ ಹೆಚ್ಚು ಜನರು ವರ್ಚುವಲ್ ವೇದಿಕೆಗೆ ಭೇಟಿ ಕೊಟ್ಟಿದ್ದರು.
ವೇದಿಕೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಚಿವ ಜಗದೀಶ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್, ವರ್ಚುವಲ್ ವೇದಿಕೆ ಮೂಲಕ ದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಸಿಡ್ನಿಯಿಂದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಬರ್ನ್ ನಗರದಿಂದ ಸ್ವಿಟ್ಜರ್ಲೆಂಡ್ ಉಪಾಧ್ಯಕ್ಷ ಗೈ ಫಾರ್ವೆಲಿನ್ ಪಾಲ್ಗೊಂಡಿದ್ದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 − 7 =
Remember me
