ಬೆಂಗಳೂರು :ಕರೊನಾ ಕಾಮೋಡದಿಂದಾಗಿ ಮಂಕಾಗಿದ್ದ ದೇಶದ ಐಟಿಬಿಟಿ ಕ್ಷೇತ್ರಕ್ಕೆ ಶನಿವಾರ ತೆರೆಕಂಡ ಮೂರು ದಿನಗಳ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ ಹೊಸ ಹೊಳಪು ತಂದಿದೆ. ವಿಶ್ವಾದ್ಯಂತ 2.5 ಕೋಟಿ ಜನರನ್ನು ತಲುಪಿರುವ ಈ ಶೃಂಗ 10ಕ್ಕೂ ಹೆಚ್ಚು ದೇಶಗಳು ಕರ್ನಾಟಕದೊಂದಿಗೆ ಕೈಜೋಡಿಸಿ ವಿವಿಧ ಒಡಂಬಡಿಕೆಗಳ ಮೂಲಕ ಭವಿಷ್ಯದಲ್ಲಿ ಒಟ್ಟಿಗೆ ಹೆಜ್ಜೆ ಹಾಕುವುದಕ್ಕೂ ಅಡಿಪಾಯ ಹಾಕಿಕೊಟ್ಟಿದೆ.
ಶೃಂಗದ ವಿಶೇಷತೆ
1
12 ಖ್ಯಾತನಾಮರ ದಿಕ್ಸೂಚಿ ಭಾಷಣ, 93 ಸೆಷನ್, 357 ಭಾಷಣಕಾರರು
2
25 ದೇಶದ 731 ವಿದೇಶಿ ಪ್ರತಿನಿಧಿಗಳ ಸಕ್ರಿಯ ಉಪಸ್ಥಿತಿ
3
ಕರ್ನಾಟಕ ಬಯೋಎಕಾನಮಿ ವರದಿ ಬಿಡುಗಡೆ
4
146 ಸ್ಟಾರ್ಟ್​ಅಪ್​ಗಳಿಂದ ಶೋಕೇಸ್​ಗೆ ಅವಕಾಶ
5
6 ರಾಜ್ಯಗಳ 150 ಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡ ಐಟಿ ಕ್ವಿಜ್
6
312 ಬ್ಯುಸಿನೆಸ್ ಮೀಟಿಂಗ್
7
10 ಸಚಿವರ ಮಟ್ಟದ ನಿಯೋಗ
ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ನೇತೃತ್ವದಲ್ಲಿ ನಡೆದ ಶೃಂಗಸಭೆಯನ್ನು ಐಟಿ ಕ್ಷೇತ್ರದವರೇ ‘ಫಲಪ್ರದ’ ಎಂದು ಷರಾ ಬರೆದಿದ್ದಾರೆ. ಆಯೋಜಕರಿಗೂ ಕೂಡ ಭವಿಷ್ಯದ ಐಟಿ-ಬಿಟಿ ಕ್ಷೇತ್ರದ ರಹದಾರಿಯನ್ನು ಸ್ಪಷ್ಟ ಮಾಡಿರುವುದು ಖುಷಿತಂದಿದೆ. ‘ನೆಕ್ಟ್ಸ ಈಸ್ ನೌ’ ತಳಹದಿಯ ಮೇಲೆ ನಡೆದಿದ್ದ ಜಾಗತಿಕ ಮಟ್ಟದ ಶೃಂಗಸಭೆಯಲ್ಲಿ 25 ದೇಶದ 732 ಪ್ರತಿನಿಧಿಗಳು, ದೇಶದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪ್ರಮುಖವಾಗಿ ಖ್ಯಾತನಾಮ ಉದ್ಯಮಿಗಳು, ನವೋದ್ಯೋಮಿಗಳು, ಸಂಶೋಧಕರು, ಶಿಕ್ಷಣತಜ್ಞರು, ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳು ಪಾಲ್ಗೊಂಡು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು. ಕರೊನಾ ಅವಧಿಯಲ್ಲಿ ಎದುರಾದ ಸವಾಲು ನಿರ್ವಹಿಸಿದ ರೀತಿ ಮತ್ತು ಕರೊನಾ ದಿನಗಳ ನಂತರ ಯಾವ ರೀತಿ ನಾವು ಸಾಗಬೇಕೆಂದು ತಿಳಿಸಿಕೊಡುವ ಮೂಲಕ ಐಟಿಬಿಟಿ ಕ್ಷೇತ್ರಕ್ಕೆ ಇವರೆಲ್ಲ ಧನಾತ್ಮಕ ಬೆಳಕು ಚೆಲ್ಲಿ ಉತ್ಸಾಹ ತುಂಬಿದರು.
ಇದನ್ನೂ ಓದಿ:ದೇಶಭಾಷೆಯಲ್ಲಿ ವ್ಯವಹಾರ, ಜನಹಿತ ಆಡಳಿತ : ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಾಮಯಿಕ ಅಂಕಣ
ಹೊಸ ಉದ್ಯೋಗ ಸೃಷ್ಟಿ, ಹೂಡಿಕೆ, ತಂತ್ರಜ್ಞಾನ ಅಭಿವೃದ್ಧಿ, ಸಹಯೋಗ, ಹೊಸ ಕ್ಷೇತ್ರಗಳು ಹೀಗೆ ವಿವಿಧ ಆಯಾಮಗಳಲ್ಲಿ ಚರ್ಚೆಗಳು ಮೂರು ದಿನ ನಡೆದವು. ಇವು ಯಾವುದೋ ಉಳ್ಳವರು- ಮೇಲು ಸ್ಥರದವರಿಗೆ ಸಂಬಂಧಿಸಿದ್ದಲ್ಲ, ಜನ ಸಾಮಾನ್ಯರಿಗೂ ಅನ್ವಯಿಸುತ್ತಿದೆ ಎಂಬುದನ್ನು ಸಾರಿತು.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉತ್ತೇಜಕ ಮಾತುಗಳನ್ನಾಡಿ ಹುರಿದುಂಬಿಸಿದರು. ಜತೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಸ್ವಿಜರ್​ಲ್ಯಾಂಡ್ ಪ್ರಧಾನಿ ಸೇರಿ ವಿವಿಧ ದೇಶಗಳ ಪ್ರಮುಖರು ಬೆಂಗಳೂರಿನ ಐಟಿ ಬಿಟಿ ಸಾಧನೆಯನ್ನು ಕೊಂಡಾಡಿ ನಾವು ನಿಮ್ಮ ಜತೆಗಿರುತ್ತೇವೆ ಒಟ್ಟಾಗಿ ಸಾಗೋಣ ಎಂದು ಭರವಸೆ ಮಾತನ್ನಾಡಿದರು.
ಇದನ್ನೂ ಓದಿ:ವಾರಭವಿಷ್ಯ | ಸಿಂಹವೂ ನೀವೇ, ರಾಶಿಯೂ ನಿಮದೇ. ಹುಲಿವೇಷದ ಮರ್ಕಟವನ್ನು ನಂಬದಿರಿ.
ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಮಾತನಾಡಿ ವಿವಿಧ ದೇಶಗಳ ಜತೆ ಒಂಡಬಡಿಕೆ ನಡೆದಿದ್ದು, ಮುಂದಿನ ದಿನಗಳಲ್ಲಿ ವಿಚಾರ ವಿನಿಮಯವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಹಾಗೆಯೇ ಅದು ಭವಿಷ್ಯದಲ್ಲಿ ಹೂಡಿಕೆಗಳಾಗಿ ಪರಿವರ್ತನೆಯೂ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಗಮನ ಸೆಳೆದಿದ್ದು
ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಡ್ರೋಣ್, ಸೈಬರ್ ಸೆಕ್ಯುರಿಟಿ, ಚಿಪ್ ಟೆಕ್ನಾಲಜಿ, ಇವಿ, ಕೃಷಿ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು, ಪ್ರಯೋಗಾಲಯದಿಂದ ಮಾರುಕಟ್ಟೆಗೆ ಉತ್ಪನ್ನಗಳು, ಪರಿಸರ, ಜನಜೀವನಕ್ಕೆ ಸಂಬಂಧಿಸಿದ ಆವಿಷ್ಕಾರ ಪ್ರಚುರಗೊಂಡವು . ನೇರ ವೇದಿಕೆಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ವರ್ಚುಯಲ್ ವೇದಿಕೆ ಬಳಕೆಯಾಗಿದ್ದು ವಿಶೇಷ.
ಮತ್ತೆ 4 ಬಂಧ
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ರಾಜ್ಯದ ವಿವಿಧ ಸಂಸ್ಥೆಗಳೊಂದಿಗೆ 10 ದೇಶಗಳು 12 ಒಡಂಬಡಿಕೆ ಮಾಡಿಕೊಂಡವು. ಕೊನೆಯ ದಿನ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಡಂಬಡಿಕೆಯಾಯಿತು. ಮುಂದಿನ ಮೇಳವನ್ನು 2021ರ ನ.8ರಿಂದ 3 ದಿನ ನಡೆಸಲು ನಿಶ್ಚಯಿಸಲಾಗಿದೆ. ಇದು ಕೂಡ ಆನ್​ಲೈನ್, ಭೌತಿಕ ವೇದಿಕೆಯಲ್ಲಿ ನಡೆಯಲಿದೆ.
2021ರಲ್ಲಿ 269 ದಿನವಷ್ಟೇ ಸರ್ಕಾರಿ ಕಚೇರಿ! – ಸರ್ಕಾರಿ ನೌಕರರಿಗೆ 19 ಪರಿಮಿತ ರಜೆ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
