ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್ ಪರ್ವ ಮಂಗಳವಾರ ಶುರುವಾಗಿದೆ. ಮುಂದಿನ ಎಂಟು ತಿಂಗಳೊಳಗೆ ಬಜೆಟ್​ನಲ್ಲಿ ಪ್ರಸ್ತಾಪಿತ ಯೋಜನೆ, ಗುರಿಗಳನ್ನು ಸಾಧಿಸಬೇಕಾದ ಸವಾಲಿದೆ.
ಜನಸಾಮಾನ್ಯರಿಗೆ ಕನಿಷ್ಠ ಆದಾಯ ಪರಿಕಲ್ಪನೆಯ ಗ್ಯಾರಂಟಿಗಳು ಒಳಗೊಂಡ, ಜನರ ಕೈಗೆ ದುಡ್ಡು, ದುಡಿಮೆ, ಬಂಡವಾಳ ಆಕರ್ಷಣೆ, ಹಸಿವು ಮುಕ್ತ ರಾಜ್ಯದ ಸಂಕಲ್ಪವೇ ಸಿದ್ದರಾಮಯ್ಯ 14ನೇ ಆಯವ್ಯಯದ ತಿರುಳು.
ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ್ದರು. ನಂತರ ಚುನಾವಣೆ ಘೋಷಿಸಿದ್ದರಿಂದ ಧನವಿನಿಯೋಗ ಕಾಯ್ದೆಯನ್ವಯ ಲೇಖಾನುದಾನದಲ್ಲಿ ನಾಲ್ಕು ತಿಂಗಳ ಖರ್ಚು, ವೆಚ್ಚಗಳನ್ನು ನಿರ್ವಹಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಜು.7ರಂದು 2023-24ನೇ ಸಾಲಿನ ಪರಿಷ್ಕೃತ 3.27 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಚುನಾವಣೆ ಪೂರ್ವದ ಬಜೆಟ್​ಗೆ ಹೋಲಿಸಿದರೆ ಮುಂಗಡಪತ್ರದ ಗಾತ್ರ 18 ಸಾವಿರ ಕೋಟಿ ರೂ.ಗಳಷ್ಟು ಹಿಗ್ಗಿದೆ.
ದುಬಾರಿ ದುನಿಯಾ:ಅಬಕಾರಿ 36 ಸಾವಿರ ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ 25 ಸಾವಿರ ಕೋಟಿ ರೂ., ಸಾರಿಗೆ 11 ಸಾವಿರ ಕೋಟಿ ರೂ., ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಒಂಬತ್ತು ಸಾವಿರ ಕೋಟಿ ರೂ. ಪರಿಷ್ಕೃತ ರಾಜಸ್ವ ಸಂಗ್ರಹ ಗುರಿ ನಿಗದಿಯಾಗಿದೆ. ಇದರಿಂದಾಗಿ ಜು.20ರಿಂದಲೇ ಮದ್ಯದ ದರ ಏರಿಕೆಯಾಗಿದೆ. ಶಾಲೆ-ಕಾಲೇಜು, ಸರಕು ಸಾಗಣೆ ವಾಹನಗಳ ರಸ್ತೆ ತೆರಿಗೆ ಏರಿಸಲಾಗಿದೆ. ಎತ್ತರ ಕಟ್ಟಡ ನಿರ್ವಣಕ್ಕೆ ಶುಲ್ಕ, ಜಲ್ಲಿಕಲ್ಲು ಮತ್ತು ಮರಳು ದರ ದುಬಾರಿಯಾಗಿದೆ. ವಾಸ್ತವಿಕ ಮಾರುಕಟ್ಟೆ ಮೌಲ್ಯ, ಮಾರ್ಗಸೂಚಿ ದರ ಆಧರಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಏರಿಕೆಯಾಗಲಿದೆ. ಬಜೆಟ್​ನಲ್ಲಿ ಘೋಷಿಸಿದ್ದರೂ ಸಂಬಂಧಿತ ಆದೇಶ ಇನ್ನಷ್ಟೇ ಹೊರ ಬೀಳಬೇಕಾಗಿದೆ.
ಅನುದಾನ ಕಡಿತ:ಕೃಷಿ, ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಯೋಜನೆಗಳಿಗೆ ಅನುದಾನ ಕಡಿತ ಮಾಡಲಾಗಿದೆ. ಸಿಎಂ ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯದ ಪಾಲು, ರೈತಶಕ್ತಿ, ಯುವ ಸಂಘ-ಸಂಸ್ಥೆಗಳಿಗೆ ನೆರವಿನ ಪ್ರಸ್ತಾಪ ಕೈಬಿಡಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಡಿ ಲಭ್ಯ ಅನುದಾನದಲ್ಲಿ ಕಡಿತ ಸರಿದೂಗಿಸಲು ಸರ್ಕಾರ ಆಲೋಚಿಸಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪ ಯೋಜನೆಯಡಿ 34,294 ಕೋಟಿ ರೂ.ಒದಗಿಸಿದ್ದು, ಅಷ್ಟೇ ಮೊತ್ತದ ಕ್ರಿಯಾ ಯೋಜನೆಗೆ ಸಮ್ಮತಿಸಲಾಗಿದೆ. ಆದರೆ ನಿಗದಿತ ಮೊತ್ತದಲ್ಲಿ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಹಂಚಿಕೆ ಮಾಡಿದ್ದು, ವಾಸ್ತವಿಕ ಮೊತ್ತ 23 ಸಾವಿರ ಕೋಟಿ ರೂ.ಗಳಿಗೆ ಇಳಿಯಲಿದೆ.
ಐದು ಗ್ಯಾರಂಟಿಗಳ ಪೈಕಿ ನಾಲ್ಕು ಅನುಷ್ಠಾನಕ್ಕೆ ಬಂದಿವೆ. ಐದು ಯೋಜನೆಗಳ ವೆಚ್ಚದ ಗಾತ್ರ 52 ಸಾವಿರ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಆದರೆ ಪ್ರಸಕ್ತ ಆರ್ಥಿಕ ವರ್ಷದ ಮೂರು ತಿಂಗಳು ಕಳೆದುಹೋಗಿವೆ. ಐದು ಗ್ಯಾರಂಟಿಗಳಿಗೆ ಪ್ರಸ್ತುತ ವರ್ಷಕ್ಕೆ 35,410 ಕೋಟಿ ರೂ. ವೆಚ್ಚದ ಅಂದಾಜಿದೆ. ವಿವಿಧ ಇಲಾಖೆಗಳ ತೆರಿಗೆ ಸಂಪನ್ಮೂಲ ಕ್ರೋಡೀಕರಣ ಗುರಿ ಹೆಚ್ಚಳ, ಕೆಲವೊಂದು ತೆರಿಗೆ ಏರಿಕೆ ಜತೆಗೆ ಸಾಲ ರೂಪದಲ್ಲಿ ಈ ವೆಚ್ಚ ಭರಿಸುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ರಾಜ್ಯದ ಜನರ ಮುಂದಿಟ್ಟಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 19 =
Remember me
