
ಬೆಂಗಳೂರು:ಬಜೆಟ್ ಮಂಡನೆ ಮಾಡಿ ಸದನದಿಂದ ಹೊರಗೆ ಬರುವ ಹೊತ್ತಿನಲ್ಲಿ ಹಲವು ಶಾಸಕರು ಮತ್ತು ಸಚಿವರು ಕಾಯ್ದು ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ನಮ್ಮ ಕ್ಷೇತ್ರದ ಬೇಡಿಕೆಗೆ ಸ್ಪಂಧಿಸಿದ್ದೀರಿ ಎಂದು ಕೆಲ ಶಾಸಕರು ಹೇಳಿದರೆ, ನಾವು ಕೇಳಿದ್ದರಲ್ಲಿ ಕೆಲವನ್ನು ಬಜೆಟ್‌ನಲ್ಲಿಯೇ ಸೇರಿಸಿದ್ದೀರಿ ಎಂದು ಸಿಎಂಗೆ ಅಭಿಮಾನದ ಮಾತುಗಳನ್ನು ಹೇಳಿದ್ದಲ್ಲದೆ, ಅವರ ಕಾಲಿಗೆರಗಿದರು. ಶಾಸಕರ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಕೂಡ ಸೇರಿದ್ದರು. ಅವರು ಸಿಎಂಗೆ ವಿಶೇಷ ಧನ್ಯವಾದ ತಿಳಿಸಿದರು.ಸಚಿವರಾದ ಚಲುವರಾಯಸ್ವಾಮಿ, ಮಧು ಬಂಗಾರಪ್ಪ ಸೇರಿದಂತೆ ಹಲವರು ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದರು.ವಿಧಾನಸೌಧದಿಂದ ಆಚೆಗೆ ಹೋಗುವ ಸಂದರ್ಭದಲ್ಲಿ ಹಲವು ಸಮಾಜದ ನಾಯಕರು, ಮುಖಂಡರು, ತಮ್ಮ ಬೇಡಿಕೆ ಈಡೇರಿಸಿದ್ದೀರಿ ಎಂದು ಮುಖ್ಯಮಂತ್ರಿಗೆ ಧನ್ಯವಾದ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
