ಕಲಬುರಗಿ:ಮಾನವ ಮಾಡಿದ ಒಂದು ತಪ್ಪಿನಿಂದ ಮೂಕ ಪ್ರಾಣಿಯೊಂದು ನರಕಯಾತನೆ ಅನುಭವಿಸುವಂತಾಗಿದೆ.
ಹೌದು, ಹಸಿವಿನಿಂದ ಆಹಾರವೆಂದು ಸಿಡಿಮದ್ದು‌ ತಿನ್ನಲು ಹೋದ ಎಮ್ಮೆಯೊಂದರ ಬಾಯಿಯೊಳಗೆ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ತುಂಬು ಗರ್ಭಿಣಿ ಎಮ್ಮೆಯ ಬಾಯಿ ಛಿದ್ರ ಛಿದ್ರವಾಗಿದೆ.
ಇದನ್ನೂ ಓದಿ:ಪಾಕ್ ಮಾಜಿ​ ಕ್ರಿಕೆಟರ್​ ಅಬ್ದುಲ್​ ರಜಾಕ್ ಮದುವೆಯಾಗಲಿದ್ದಾರಾ ತಮನ್ನಾ? ಮಿಲ್ಕಿ ಬ್ಯೂಟಿ ಹೇಳಿದ್ದೇನು?​
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿನ್ನೆ(ಬುಧವಾರ) ಚಾಮನೂರು ರಸ್ತೆಯ ಹೊಲವೊಂದರಲ್ಲಿ‌ ಎಮ್ಮೆ ಮೇಯಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಕಾಡು ಹಂದಿಯನ್ನು ಓಡಿಸಲು ಇಟ್ಟಿದ್ದ ಸಿಡಿಮದ್ದು ತಿಂದು ಎಮ್ಮೆ ಬಾಯಿ ಛಿದ್ರವಾಗಿದೆ.
ಸಾಕು ಪ್ರಾಣಿಗಳು ಆಹಾರವನ್ನು ಅರಸಿ ಬರುತ್ತವೆ ಎಂಬುದು ತಿಳಿದಿದ್ದರೂ ಸಿಡಿಮದ್ದು ಇಡುವ ಮಾನವ ಗುಣಕ್ಕೆ ಏನನ್ನಬೇಕೋ? ಸಿಡಿಮದ್ದಿನಿಂದಾಗಿ ಇಡೀ ಬಾಯಿ ಛಿದ್ರಗೊಂಡು ಮೂಕ ಪ್ರಾಣಿ ಅದೆಷ್ಟು ಸಂಕಟ ಪಡುತ್ತಿದೆಯೋ? ಈಗಲಾದರೂ ಎಚ್ಚೆತ್ತುಕೊಂಡು ಸಿಡಿಮದ್ದು ಇಡುವಾಗ ಸಾಕಷ್ಟು ಮುಂಜಾಗ್ರತೆ ವಹಿಸಿ ಎಂಬುದು ಎಲ್ಲರ ಕಳಕಳಿಯಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!
ಧನ್ವಂತರಿ: ಸನ್ನಡತೆಯ ನವರತ್ನಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
