ಮಣಿಪಾಲ:ಇತ್ತೀಚೆಗೆ ನಡೆದ ಉಭಯ ಜಿಲ್ಲೆಯ ಕೂಟಗಳಲ್ಲಿ ಕಂಬಳ ಕ್ಷೇತ್ರದಲ್ಲಿ ಸಾದನೆಗೈದ ‘ ನಾಗು’ ಎನ್ನುವ ಕೋಣ ಹೃದಯಾಘಾತದಿಂದಾಗಿ ಶನಿವಾರ ವಿಧಿವಶವಾಗಿದೆ.
ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ಎಂದೇ ಹೆಸರಾದ ‘ಲಕ್ಕಿ’ ಯು ಒಂದು ವಾರದ ಹಿಂದಷ್ಟೇ ಕಂಬಳಾಭಿಮಾನಿಗಳನ್ನು ಅಗಲಿದೆ, ಇದರ ಬೆನ್ನಲ್ಲೇ ಇನ್ನೊಂದು ಆಘಾತ ಎದುರಾಗಿದೆ. ಇತ್ತೀಚೆಗೆ ನಡೆದ ಉಭಯ ಜಿಲ್ಲೆಯ ಕೂಟಗಳಲ್ಲಿ ಸಾದನೆಗೈದ ‘ ನಾಗು’ ಎನ್ನುವ ಕೋಣ ಶನಿವಾರ ವಿಧಿವಶವಾಗಿದೆ.
ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿದ್ದ ನಾಗು ಎಂಬ ಕೋಣವು ಹೃದಯಾಘಾತದಿಂದಾಗಿ ಶನಿವಾರ ಅಸುನೀಗಿದೆ. ನಾಲ್ಕು ವರ್ಷಗಳ ಹಿಂದೆಯಷ್ಟೇ ಹಲಗೆ ಸೀನಿಯರ್ ವಿಭಾಗಕ್ಕೆ ಸೇರಿದ ನಾಗು ತನ್ನ ಸಾಹಸದಿಂದ ಹಲವಾರು ಕಂಬಳಗಳಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು.
ಮೊದಲು ಬೈಂದೂರಿನಿಂದ ಬಂಢಾರಮನೆ ಸೇರಿದ ನಾಗು, ನಂತರ ಉಡುಪಿ ಚಿತ್ತಾಡಿ ಅಪ್ಪು ಶೆಟ್ಟಿಯವರ ಮನೆಗೆ ಸೇರಿದ. ಬಳಿಕ ಜಪ್ಪು ಮಂಕುತೋಟ ಅನಿಲ್ ಶೆಟ್ಟಿಯವರು ಎರಡು ವರ್ಷದ ಹಿಂದೆಯಷ್ಟೇ ನಾಗು ಕೋಣವನ್ನು ಖರೀದಿ ಮಾಡಿ ಸಾಕುತ್ತಿದ್ದರು.ಹೀಗಾಗಿ ಕಂಬಳ ಕ್ಷೇತ್ರದಲ್ಲಿ ಹೆಸರು ಮಾಡಿರುವಂತಹ ಎರಡು ಕೋಣಗಳನ್ನು ಎರಡು ವಾರಗಳ ಅಂತರದಲ್ಲಿ ಅಭಿಮಾನಿಗಳು ಹಾಗೂ ಕಂಬಳ ಕ್ಷೇತ್ರವು ಕಳೆದುಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
