| ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
ಅಣ್ವಸ್ತ್ರಗಳ ಅಭಿವೃದ್ಧಿಯ ಬಳಿಕ 1999ರ ಮೇ 3ರಿಂದ ಜುಲೈ 26ರವರೆಗೂ ಸುದೀರ್ಘವಾಗಿ ನಡೆದ ಎರಡನೇ ನೇರ ಯುದ್ಧವಾದ ಕಾರ್ಗಿಲ್ ಗೆಲುವಿನಲ್ಲಿ ಭಾರತೀಯ ವೀರಯೋಧರ ಜತೆಗೆ ಬಫರ್ಸ್ ಗನ್​ಗಳ ಪಾತ್ರ ಬಹುದೊಡ್ಡದಿದೆ. ಈ ಯುದ್ಧದಲ್ಲಿ ಭಾರತೀಯ ಸೇನೆಗೆ ವಾಯುಪಡೆ ಬೆಂಬಲ ಬಾಹುಬಲ ತುಂಬಿತ್ತು. ದೇಶಕಾಯುವ ವೀರಯೋಧರು ಅತೀ ಎತ್ತರದ ಪರ್ವತ ಶ್ರೇಣಿಯಲ್ಲಿ ಜರುಗಿದ ಕಾದಾಟದಲ್ಲಿ ಹಗಲಿರುಳೆ ನ್ನದೆ, ಜೀವದ ಹಂಗು ತೊರೆದು, ಪಾಕಿಸ್ತಾನಿ ಶತ್ರುಗಳನ್ನು ಹಿಮ್ಮೆಟ್ಟಿಸು ವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೀರಸೇನಾನಿಗಳ ಬೆಟಾಲಿಯನ್​ನಲ್ಲಿ ಕೋಟೆನಾಡಿನ ಎಂ.ಹನುಮಂತಪ್ಪ ಕೂಡ ಇದ್ದರು.
ಪಾಕಿಸ್ತಾನಿ ಉಗ್ರರು, ಸೈನಿಕರು 5 ಕಿ.ಮೀ ದೂರದಲ್ಲಿ ಕೂತಿದ್ದರು. ಇದನ್ನು ಅರಿತು 35 ಕಿ.ಮೀ ದೂರದವರೆಗೂ ಫೈರ್ ಮಾಡುವ ಸಾಮರ್ಥ್ಯವುಳ್ಳ ಬಫರ್ಸ್ ಗನ್​ಗಳಲ್ಲಿ ಬಾಂಬ್​ಗಳನ್ನು ಇಟ್ಟು ಉಡಾಯಿಸಲಾಯಿತು. ಈ ಮೂಲಕ ಶತ್ರುಗಳ ಮೈಯಲ್ಲಿ ನಡುಕ ಹುಟ್ಟಿಸಲಾಯಿತು. ಹೈ ಆಂಗಲ್, ಹೈ ಬ್ಲಾಸ್ಟ್​ಗಳೊಂದಿಗೆ ಆ ವೇಳೆ ಶತ್ರುಗಳ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಿ, ತಂಗಿದ್ದ ಸ್ಥಳಗಳತ್ತ ನುಗ್ಗಿದ ಬೆಟಾಲಿಯನ್ ತಂಡ ನುಸುಳುಕೋರರನ್ನು ಸದೆಬಡಿದರು ಎಂದು ‘ವಿಜಯವಾಣಿ’ಯೊಂದಿಗೆ ಅವರು ಅನುಭವ ಹಂಚಿಕೊಂಡಿದ್ದಾರೆ. ಅವರು ಭಾರತೀಯ ಸೇನೆಯಲ್ಲಿ 28 ವರ್ಷ ಸುದೀರ್ಘ ಸೇವೆ ಸಲ್ಲಿಸಿ, ಕಿರಿಯ ಆಯುಕ್ತರ ಕಚೇರಿ (ಜೆಸಿಒ)ಯ ಸುಬೇದಾರ್ ಆಗಿ ನಿವೃತ್ತರಾಗಿದ್ದಾರೆ. ಅವರೊಂದಿಗಿನ ಮಾತುಕತೆಯ ಆಯ್ದ ಭಾಗವಿದು:
ಕಷ್ಟಕರ ಪರಿಸ್ಥಿತಿ ಇತ್ತೆ?: ಕಾರ್ಗಿಲ್ ಪಶ್ಚಿಮ ಲಡಾಕ್ ಕೇಂದ್ರಾಡಳಿತ ಪ್ರದೇಶದ ಭಾಗ. ಇದು ದ್ರಾಸ್ ಗ್ರಾಮದ ಸಮೀಪದಲ್ಲೇ ಅತಿ ಎತ್ತರದ ಪರ್ವತವಾಗಿದ್ದು, ಅಲ್ಲಿ ಕಾರ್ಯಾ ಚರಣೆ ನಡೆಸಿದ್ದೇವೆ. ಪರ್ವತ ಭೂ ಪ್ರದೇಶದಲ್ಲಿ ನಡೆದ ಯುದ್ಧಕ್ಕೆ ನಿದರ್ಶನವೂ ಆಗಿದೆ. ನುಸುಳುಕೋರರರು ಅತಿ ಎತ್ತರದ ಪ್ರದೇಶದಲ್ಲಿ ಕೂತಿದ್ದರು. ಕಷ್ಟವಾದರೂ ಭಾರತೀಯ ಸೈನ್ಯ ಪಡೆ ಎಲ್ಲಿಯೂ ಜಗ್ಗಲಿಲ್ಲ. 70ರಿಂದ 80 ಡಿಗ್ರಿ ಆಂಗಲ್​ನಲ್ಲಿ, ನೇರವಾದ ಪರ್ವತದ ಮೇಲೆ ಅತಿ ಎತ್ತರದಲ್ಲಿ ಕೂತಿದ್ದ ಶತ್ರುಗಳಿಗೆ ದಾಳಿ ನಡೆಸಲು ಎಲ್ಲ ರೀತಿಯ ಅನುಕೂಲವಿತ್ತು. ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧರಾಗಿದ್ದರು.
ದಾಳಿಗೆ ಪ್ರತಿ ದಾಳಿ ಹೇಗಿತ್ತು?:ಬಾಂಬ್​ಗಳ ಮೂಲಕ ದಾಳಿ ಪ್ರತಿದಾಳಿ ನಡೆದವು. ಮೂರ್ನಾಲ್ಕು ಸಾವಿರ ಶತ್ರುಗಳು ಮೃತಪಟ್ಟರು. ನಮ್ಮವರು 400ರಿಂದ 500 ಮಂದಿ ವೀರಮರಣವನ್ನಪ್ಪಿದರು. ಯುದ್ಧದ ವೇಳೆ ಸಾವು-ನೋವು ಸಾಮಾನ್ಯ. ಹಾಗಂತ ಹಿಂಜರಿಯುವಂತಿಲ್ಲ. ಮುನ್ನುಗ್ಗಲೇಬೇಕು. ಬ್ಲಾಸ್ಟಿಂಗ್ ವೇಳೆ ಬಫರ್ ಜೋನ್​ಗಳಲ್ಲಿ ಅತಿಹೆಚ್ಚು ಶಬ್ದ ಹೊರ ಹೊಮ್ಮುತ್ತದೆ. ಹೀಗಾಗಿ ಓಪನ್ ಏರಿಯಾದಲ್ಲಿ ಯಾವ ಕಾರಣಕ್ಕೂ ಮುನ್ನುಗ್ಗದೆ ಎಚ್ಚರಿಕೆಯಿಂದ ಟ್ರಂಚಸ್​ನಲ್ಲೇ ನಡೆದೆವು. ಪೆಟ್ರೋಲಿಂಗ್ ಸೇರಿದಂತೆ ಕಾರ್ಯಾಚರಣೆ ಮುಂದುವರಿಸಿ ಎಂದು ಸೇನಾಧಿಕಾರಿ ನೀಡಿದ ಮಾರ್ಗದರ್ಶನದಂತೆ ಮುನ್ನಡೆದೆವು.
ಮಾಹಿತಿ ಸಿಕ್ಕಿದ್ದು ಹೇಗೆ?:ನುಸುಳುಕೋರರ ಕುರಿತು ಮಾಹಿತಿ ನೀಡಲು ಲಾಂಗ್ ರೂಟ್ ಪೆಟ್ರೋಲಿಂಗ್ (ಎಲ್​ಆರ್​ಪಿ), ಶಾರ್ಟ್ ರೂಟ್ ಪೆಟ್ರೋಲಿಂಗ್ (ಆರ್​ಆರ್​ಪಿ) ತಂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವೇಳೆ ಶತ್ರುಗಳ ಸಂಚಾರ, ಚಟುವಟಿಕೆ ಗಮನಿಸಿದ ಭಾರತೀಯ ಪೆಟ್ರೋಲಿಂಗ್ ತಂಡ ಸೇನಾಧಿಕಾರಿಗೆ ಮಾಹಿತಿ ತಿಳಿಸಿದರು. ಆನಂತರ ಕಾರ್ಯಾಚರಣೆ ಆರಂಭಿಸಲಾಯಿತು. ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ನಿಯಮ ಮೀರಿ ಕಳ್ಳತನದಿಂದ ನುಸುಳಿದ್ದೆ ಕಾರ್ಗಿಲ್ ಯುದ್ಧವಾಗಲು ಕಾರಣವಾಯಿತು.
ಎಷ್ಟು ಬೆಟಾಲಿಯನ್​ಗಳಿದ್ದವು?:ಪ್ರತಿ ಡೀವ್ ಅಲ್ಲೂ ಒಂಬತ್ತು ಬೆಟಾಲಿಯನ್ ತಂಡ ಇದ್ದವು. ಒಂದು ಬೆಟಾಲಿಯನ್​ನಲ್ಲಿ 800 ಮಂದಿ ಇದ್ದರು. ಒಂದರ ಹಿಂದೆ ಮತ್ತೊಂದರಂತೆ ಸರತಿಯಾಗಿ ಬೆಟಾಲಿಯನ್ ಕಾರ್ಯಪಡೆ ಮುನ್ನುಗ್ಗಿದವು. 4 ಸಾವಿರಕ್ಕೂ ಅಧಿಕ ಮಂದಿ ಅಲ್ಲಲ್ಲೇ ಸಮೀಪದಲ್ಲಿ ಕಾರ್ಯಪ್ರವೃತ್ತರಾಗಿದ್ದರು.


ವೀಲ್​ಚೇರ್​ನಲ್ಲೇ ಬಂದು ಪ್ರಧಾನಿ ಮೋದಿ ಭೇಟಿಯಾದ ಎಚ್‌ಡಿ ದೇವೇಗೌಡ: ಇಲ್ಲಿವೆ ಪೋಟೋಗಳು…!
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two × four =
Remember me
