ಬೆಂಗಳೂರು:ವೇಶ್ಯಾವಾಟಿಕೆ ನೆಪದಲ್ಲಿ ಬಿಲ್ಡರ್‌ನ ಕರೆದು ಮಹಿಳೆ ಜತೆ ಇದ್ದಾಗ ವಿಡಿಯೋ ಮಾಡಿ ಬೆದರಿಸಿ ಚಿನ್ನ, ಹಣ ದೋಚಿದ್ದ ದಂಪತಿ ಸೇರಿ7 ಮಂದಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಪೈ ಲೇಔಟ್ ಸಮೀಪದ ಶಕ್ತಿನಗರದ ಅಂಜಲಿ(31), ಈಕೆ ಪತಿ ಪ್ರೇಮನಾಥ್(32) ಮತ್ತು ಸಹಚರರಾದ ಉದಯನಗರದ ದೀಪಕ್(26), ಟೈಸನ್(23), ವಿನೋದ(43), ಪ್ರಕಾಶ್ ಅಲಿಯಾಸ್ ಚೋಟು(20) ಮತ್ತು ಈಶ್ವರಿ(40) ಬಂಧಿತರು. ಮತ್ತೊಬ್ಬ ವಿನೋದ್ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ. ಬಂಧಿತರಿಂದ 40 ಗ್ರಾಂ ಚಿನ್ನಾಭರಣ, 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಆಟೋ ಚಾಲಕ ಪ್ರೇಮನಾಥ್ ಮತ್ತು ಅಂಜಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ನಡುವೆ ಹಲಸೂರಿನಲ್ಲಿ ಕುಟುಂಬದ ಜತೆ ನೆಲೆಸಿರುವ ಬಿಲ್ಡರ್‌ಗೆ ಪರಿಚಯವಾಗಿ ಆಹ್ವಾನ ನೀಡಿದ್ದಾರೆ. ಇದಕ್ಕೆ ಒಪ್ಪಿದ ಬಿಲ್ಡರ್‌ನನ್ನು ಅ.22ರ ಸಂಜೆ 5 ಗಂಟೆಯಲ್ಲಿ ಪ್ರೇಮನಾಥ್ ಆಟೋದಲ್ಲಿ ಹೋಗಿದ್ದಾನೆ. ಆತ, ತನ್ನ ಮನೆಗೆ ಕರೆದೊಯ್ದು ಮಹಿಳೆ ಜತೆ ಬಿಟ್ಟಿದ್ದು, ಅಷ್ಟೊತ್ತಿಗೆ ಹೊಂಚು ಹಾಕಿ ಕುಳಿತಿದ್ದ ಇತರ ಆರೋಪಿಗಳು ಏಕಾಏಕಿ ಮನೆಗೆ ನುಗ್ಗಿ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಬಿಲ್ಡರ್ ಮೇಲೆ ಹಲ್ಲೆ ನಡೆಸಿ 100 ಗ್ರಾಂ ಚಿನ್ನದ ಸರ, 40 ಗ್ರಾಂ ಚಿನ್ನದ ಬ್ರಾಸ್‌ಲೇಟ್, 25 ಸಾವಿರ ರೂ. ಕಿತ್ತುಕೊಂಡಿದ್ದಾರೆ. ಅಲ್ಲದೆ, ಮಹಿಳೆ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆಯನ್ನು ಕೊಡಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದರು.
ಮತ್ತೊಬ್ಬ ಆರೋಪಿ ಈಶ್ವರಿ ಬಂದು ಮಾನವ ಹಕ್ಕುಗಳ ಸಂಘಟನೆ ಮುಖಸ್ಥೆ. ಇದರ ಬಗ್ಗೆ ಎಲ್ಲಿಯಾದರೂ ಬಾಯ್ಬಿಟ್ಟರೇ ಕೊಲೆ ಮಾಡುತ್ತೆನೆ. ಪೊಲೀಸರಿಗೆ ದೂರು ಕೊಟ್ಟರೇ ಮರ್ಯಾದೆ ತೆಗೆಯುವುದಾಗಿ ಬೆದರಿಸಿ ರಾತ್ರಿ 11.45ರಲ್ಲಿ ಮೊಬೈಲ್ ಮತ್ತು ಬೈಕ್ ಕೀ ಕೊಟ್ಟು ಕಳುಹಿಸಿದ್ದರು. ನೊಂದ ಬಿಲ್ಡರ್ ಮಹದೇವಪುರ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಎ್ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.
ದಿಢೀರ್ ಶ್ರೀಮಂತರಾಗುವ ಆಸೆ :ಬಂಧಿತ ದೀಪಕ್ ಮತ್ತು ಟೈಸರ್ ಟ್ಯಾಟೋ ಹಾಕುವ ವೃತ್ತಿ ಮಾಡುತ್ತಿದ್ದರು. ಆರೋಪಿ ಅಂಜಲಿಗೆ ಆತ್ಮೀಯರಾಗಿದ್ದರು. ವೇಶ್ಯಾವಾಟಿಕೆ ದಂಧೆಯಿಂದ ಹೆಚ್ಚು ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲ. ಹನಿಟ್ರ್ಯಾಪ್ ಮಾಡಿದರೆ ದಿಢೀರ್ ಶ್ರೀಮಂತರಾಗಬಹುದು. ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಶ್ರೀಮಂತರನ್ನು ಕರೆತಂದು ಹನಿಟ್ರ್ಯಾಪ್ ಮಾಡಿದರೆ ಕೈ ತುಂಬ ಹಣ ಸಿಗಲಿದೆ ಎಂದು ಆಮಿಷವೊಡ್ಡಿದ್ದರು. ಇದಕ್ಕೆ ಒಪ್ಪಿದ ಅಂಜಲಿ ಮತ್ತು ಆಕೆ ಪತಿ ಜತೆ ಸೇರಿ ನಾಲ್ಕೈದು ಮಂದಿ ಬಳಿ ಸುಲಿಗೆ ಮಾಡಿದ್ದರು. ಪೊಲೀಸರಿಗೆ ದೂರು ನೀಡಲು ಯಾರು ಮುಂದು ಬಂದಿಲ್ಲ. ಬಿಲ್ಡರ್ ಕೊಟ್ಟ ದೂರಿನ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twenty =
Remember me
