ಬೆಂಗಳೂರು:ಆರೋಗ್ಯ ಕ್ಷೇತ್ರ ವ್ಯಾಪಾರೀಕರಣಗೊಳ್ಳುತ್ತಿರುವ ನಡುವೆಯೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸೇವಾ ಮನೋಭಾವ ಹೊಂದಿರುವ ವೈದ್ಯರುಗಳ ಸೇವೆ ಅವಶ್ಯಕತೆ ಇದೆ ಎಂದು ಸಚಿವ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.
ಕನಕಪುರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಖಾಸಗಿ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವನೆ ಇರಬೇಕು. ನಮ್ಮಲ್ಲಿ ಜಯದೇವ, ಕಿದ್ವಾಯಿಯಂತಹ ಅತ್ಯುತ್ತಮ ಆಸ್ಪತ್ರೆಗಳಿವೆ. ಆರೋಗ್ಯ ರಣೆಯಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದ್ದು, ಆರೋಗ್ಯವಂತ ಸಮಾಜ ನಿರ್ಮಿಸುವುದು ನಮ್ಮ ಗುರಿ. ಇದು ಸರ್ಕಾರದಿಂದ ಮಾತ್ರ ಸಾಧಿಸಲು ಸಾಧ್ಯವಿಲ್ಲ. ಇದಕ್ಕೆ ಸೇವಾ ಮನೋಭಾವ ಹೊಂದಿರುವಂತಹ ಖಾಸಗಿ ಆಸ್ಪತ್ರೆಗಳ ಪಾತ್ರವೂ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.
ರೋಗವನ್ನು ಉಪಚರಿಸುವುದಗಿಂತ ರೋಗ ಬರದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಆದ್ಯತೆಯಾಗಿದೆ. ರೋಟರಿ, ವ್ಯಾಸ ಹೀಗೆ ಹಲವರು ಸ್ವಯಂ ಸೇವಾ ಸಂಸ್ಥೆಗಳ ಜೊತೆಗೂಡಿ ಸಮಾಜದ ಅಶಕ್ತ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಜನರ ಆರೋಗ್ಯ ಕಾಪಾಡಲು ಮುಂದಾಗಿರುವ ಡಾ.ಚಂದ್ರಶೇಖರ್​ ಮುನಿಯಪ್ಪ ಅವರ ಕಾರ್ಯ ಶ್ಲಾನೀಯ. ಆರೋಗ್ಯ ಕ್ಷೇತ್ರ ವಾಣೀಜ್ಯೀಕರಣವಾಗುತ್ತಿದೆ. ಇಂತಹ ವೇಳೆ ಸೇವೆಯ ಮನೋಭಾವನೆ ಹಾಗೂ ಕೈಗೆಟುಕುವ ದರದಲ್ಲಿ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯರೇ ಸ್ಥಾಪಿಸಿದ ಆಸ್ಪತ್ರೆಗಳ ಅಗತ್ಯತೆ ಹೆಚ್ಚಾಗಿದೆ. ಹೃದಯಜ್ಯೋತಿ ಯೋಜನೆಯಡಿ 20ಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಯೋಜನೆ ವಿಸ್ತರಿಸುವುದಾಗಿ ಸಚಿವರು ಹೇಳಿದರು.
ಜೈಲನ್ನೇ ರೆಸಾರ್ಟ್ ಮಾಡಿಕೊಂಡ ದರ್ಶನ್
ವೈದ್ಯರೇ ನಿಜವಾದ ದೇವರುಆರೋಗ್ಯವಂತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಉತ್ತಮ ಶಿಕ್ಷಣ ಇದ್ದರೆ ಆರೋಗ್ಯ, ದೇಶದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮನಸ್ಸು, ದೇಹ, ಶರೀರ, ಜೀವನ ಶೈಲಿ, ನಡೆ, ನುಡಿಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ರೋಗ ತಡೆಗಟ್ಟಬಹುದು. ದೇವರನ್ನು ನೋಡಲು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ. ಆಸ್ಪತ್ರೆಯಲ್ಲಿರುವ ವೈದ್ಯರು ನಿಜವಾದ ದೇವರು. ಸೇವಾ ಮನೋಭಾವದಿಂದ ಎಲ್ಲರಿಗೂ ಉತ್ತಮ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ಒದಗಿಸುವ ಗುರಿಯನ್ನು ಇಟ್ಟುಕೊಂಡು ಪ್ರಾರಂಭವಾಗಿರುವ ಈ ಆಸ್ಪತ್ರೆಗೆ ಯಶಸ್ಸು ಸಿಗಲಿ ಎಂದು ಆರ್ಟ್​ ಆಫ್​​​ ಲಿವಿಂಗ್​ ಸಂಸ್ಥಾಪಕ ರವಿಶಂಕರ್​ ಗುರೂಜಿ ಹಾರೈಸಿದರು.
ಆಸ್ಪತ್ರೆಯ ಸಿಇಒ ಡಾ.ಚಂದ್ರಶೇಖರ್​ ಚಿಕ್ಕಮುನಿಯಪ್ಪ, ಶಿಕ್ಷಿಣ ತಜ್ಱ ಡಾ. ಗುರುರಾಜ್​ ಕರಜಗಿ, ರೋಟರಿ ಫೌಂಡೇಶನ್​ನ ಏಷ್ಯಾದ ರಾಯಭಾರಿ ಮಹಾದಾನಿ ರವಿಶಂಕರ್​ ದಕೋಜು ಮತ್ತಿತರರಿದ್ದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:10 + seventeen =
Remember me
