ಬೆಂಗಳೂರು : ಬಹುಮಹಡಿ ಕಟ್ಟಡ ನಿರ್ಮಾಣ, ವಾಣಿಜ್ಯ ಮಳಿಗೆಗೆ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಪೇಕ್ಷಣಾ ಪ್ರಮಾಣ ಪತ್ರ(ಎನ್‌ಒಸಿ) ಮತ್ತು ಕ್ಲಿಯರೆನ್ಸ್ ಪತ್ರ(ಸಿಸಿ) ಆನ್‌ಲೈನ್‌ನಲ್ಲಿ ಸಿಗಲಿದೆ. ಬಹುಮಹಡಿ ಕಟ್ಟಡ, ವಾಣಿಜ್ಯ ಮಳಿಗೆ ಇನ್ನಿತ್ತರರು ಎನ್‌ಒಸಿ ಮತ್ತು ಸಿಸಿ ಪಡೆಯಲು ಇನ್ನೂ ಮುಂದೆ ಅಗ್ನಿ ಶಾಮಕ ಇಲಾಖೆ ಕಚೇರಿಗೆ ಹೋಗುವಂತಿಲ್ಲ.
ಕುಳಿತಲ್ಲಿಂದಲೇ ಸರ್ಕಾರದ ಆನ್‌ಲೈನ್ ತಂತ್ರಾಂಶ ‘ಸೇವಾ ಸಿಂಧು’ನಲ್ಲಿ ಬಹುಮಹಡಿ ಕಟ್ಟಡ ಅಥವಾ ವಾಣಿಜ್ಯ ಮಳಿಗೆ ವಿಳಾಸ, ಸ್ವ-ವಿವರ, ನೀಲಿ ನಕ್ಷೆ, ಮಹಡಿ ವಿವರ, ಏತಕ್ಕಾಗಿ ಕಟ್ಟಡ ನಿರ್ಮಾಣ ಸೇರಿ ಎಲ್ಲ ಮಾಹಿತಿಯನ್ನು ಅಪ್‌ಲೋಡ್ ಮಾಡಿದರೆ ಸಾಕು. ಅಗ್ನಿ ಶಾಮಕ ಅಧಿಕಾರಿಗಳು ಸಂಬಂಧಪಟ್ಟ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ವರದಿಯನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡುತ್ತಾರೆ.ಕಟ್ಟಡ ನಿರ್ಮಾಣಕ್ಕೂ ಮೊದಲು, ಕಟ್ಟಡದ ನಿರ್ಮಾಣದ ವೇಳೆ ಹಾಗೂ ಪೂರ್ಣಗೊಂಡ ಮೇಲೆ ಹಂತ ಹಂತವಾಗಿ ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಉಪಯೋಗಕ್ಕೆ ಯೋಗ್ಯ ಎಂದು ಪ್ರಮಾಣ ಪತ್ರ ನೀಡುತ್ತಾರೆ.
ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಸಹ, ಸೇವಾ ಸಿಂಧುನಲ್ಲಿ ಬರುವ ಅರ್ಜಿಗಳನ್ನು ನಿಗಧಿತ ಸಮಯದ ಒಳಗಾಗಿ ವಿಲೇವಾರಿ ಮಾಡಬೇಕು. ಇಲ್ಲವಾದರೆ, ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಈ ಹಿಂದೆಯೇ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಗ್ನಿ-2 ತಂತ್ರಾಂಶವನ್ನು ಅಳವಡಿಸಿಕೊಂಡಿದೆ. ಇದರ ಮೂಲಕ ಆನ್‌ಲೈನ್‌ನಲ್ಲಿ ಎನ್‌ಒಸಿ ಮತ್ತು ಸಿಸಿ ಸೌಲಭ್ಯ ಒದಗಿಸಿತ್ತು. ಇದೀಗ ಸರ್ಕಾರದಿಂದ ಅಧಿಕೃತ ಮುದ್ರೆ ಬಿದ್ದಿದ್ದು, ಕಡ್ಡಾಯಗೊಳಿಸಲಾಗಿದೆ.
ಭೌತಿಕ ಅರ್ಜಿ ಸ್ವೀಕಾರ ರದ್ದು :ಅಗ್ನಿ ಶಾಮಕ ಇಲಾಖೆಯಲ್ಲಿ ಎನ್‌ಒಸಿ ಮತ್ತು ಸಿಸಿ ನೀಡಲು ಭೌತಿಕವಾಗಿ ಅರ್ಜಿ ಸ್ವೀಕರಿಸುವ ಪದ್ಧತಿಯನ್ನು ರದ್ಧುಪಡಿಸಲಾಗಿದೆ. ಸಾರ್ವಜನಿಕರು ಸಹ ಆನ್‌ಲೈನ್ ಸೇವೆಯನ್ನೇ ಬಳಸಬೇಕು. ಸೇವಾ ಸಿಂಧು ಮೂಲಕವೇ ಎನ್‌ಒಸಿ ಮತ್ತು ಸಿಸಿ ಪಡೆಯಬೇಕೆಂದು ಸರ್ಕಾರ ಸೂಚಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
