ಉತ್ತರಕನ್ನಡ:ವಾಹನದ ಹಾರ್ನ್​ ಶಬ್ದಕ್ಕೆ ಎತ್ತುಗಳು ಬೆದರಿ ಓಡಿದ್ದರಿಂದ ಚಕ್ಕಡಿ ಬಂಡಿ ಕಂದಕಕ್ಕೆ ಉರುಳಿ, ಅದರಲ್ಲಿ ಸಾಗುತ್ತಿದ್ದ ಭಕ್ತ ಸಾವಿಗೀಡಾಗಿದ್ದಾನೆ. ದಾಂಡೇಲಿಯ ಜನತಾ ಕಾಲನಿ ಬಳಿ ಈ ದುರಂತ ಸಂಭವಿಸಿದೆ.
ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ನಿವಾಸಿ ಈರಣ್ಣ ಧೂಪದಾಳ (21) ಸಾವಿಗೀಡಾದ ಭಕ್ತ. ಈತ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಜಾತ್ರೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಚಕ್ಕಡಿ ಬಂಡಿ ಜೊಯಿಡಾ ಮಾರ್ಗವಾಗಿ ದಾಂಡೇಲಿ ಕಡೆಗೆ ಸಾಗುತ್ತಿದ್ದು, ಮಾರ್ಗಮಧ್ಯೆ ವಾಹನದ ಹಾರ್ನ್​ಗೆ ಎತ್ತುಗಳು ಬೆದರಿ ಕಂದಕದ ಕಡೆಗೆ ಓಡಿವೆ. ಆಗ ಚಕ್ಕಡಿ ಪಲ್ಟಿಯಾಗಿದ್ದು, ಕೆಳಕ್ಕೆ ಬಿದ್ದ ಈರಣ್ಣನ ಮೈಮೇಲೇ ಗಾಲಿ ಹಾದುಹೋಗಿ ಗಾಯಗೊಂಡು ಸಾವಿಗೀಡಾಗಿದ್ದಾನೆ. ಜಿಲ್ಲಾಡಳಿತವು ಉಳವಿಗೆ ಚಕ್ಕಡಿ ಗಾಡಿ ನಿಷೇಧಿಸಿದ್ದರೂ ಇವರು ಅದರಲ್ಲೇ ಸಾಗಿದ್ದರು. ದಾಂಡೇಲಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?
ತಲೆ ಮೇಲೇ ಆಕ್ಸಿಜನ್ ಸಿಲಿಂಡರ್ ಬಿದ್ದು ಸಾವಿಗೀಡಾದ 9 ವರ್ಷದ ಬಾಲಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 6 =
Remember me
