ರಾಘವ ಶರ್ಮ ನಿಡ್ಲೆ, ನವದೆಹಲಿರಾಜ್ಯದ ರೈಲ್ವೆ ಯೋಜನೆಗಳಿಗೆಂದು ಕೇಂದ್ರ ಬಜೆಟ್​ನಲ್ಲಿ 7,524 ಕೋಟಿ ರೂ. ಮೀಸಲಿಡಲಾಗಿದೆ. ಹೊಸ ರೈಲು ಮಾರ್ಗಗಳ ನಿರ್ವಣ, ದ್ವಿಪಥ ಹಾಗೂ ಗೇಜ್ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಮಧ್ಯಂತರ ಬಜೆಟ್​ನಲ್ಲಿ ಹಂಚಿಕೆ ಮಾಡಲಾಗಿದೆ.
ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದು, 2009-14ರ ಮಧ್ಯೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಾರ್ಷಿಕವಾಗಿ ಸರಾಸರಿ 835 ಕೋಟಿ ರೂ.ಗಳನ್ನಷ್ಟೇ ನೀಡಿತ್ತು. ಆದರೆ, ಎನ್​ಡಿಎ ಸರ್ಕಾರ ಈ ಬಜೆಟ್​ನಲ್ಲಿ ಒಂಬತ್ತು ಪಟ್ಟು ಹೆಚ್ಚು ಅನುದಾನವನ್ನು ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದೆ. ಇದು ಪಿಎಂ ಮೋದಿ ಸರ್ಕಾರದ ಹೆಗ್ಗಳಿಕೆ ಎಂದರು.
ರಾಜ್ಯದಲ್ಲಿ 31 ರೈಲ್ವೆ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ. ಇವುಗಳ ಉದ್ದ 3,866 ಕಿ.ಮೀ. ಈ ಯೋಜನೆಗಳ ಒಟ್ಟು ಮೊತ್ತ ರೂ. 47,346 ಕೋಟಿ ಎಂದು ತಿಳಿಸಿದ ಸಚಿವ ವೈಷ್ಣವ್, ಯುಪಿಎ ಅವಧಿಯಲ್ಲಿ ವರ್ಷಕ್ಕೆ 114 ಕಿಮೀ ಉದ್ದ ರೈಲ್ವೆ ಟ್ರಾಕ್​ಗಳನ್ನಷ್ಟೇ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ಈಗ ನಾವು ವರ್ಷಕ್ಕೆ 166 ಕಿಮೀ ರೈಲ್ವೆ ಟ್ರಾ್ಯಕ್ ನಿರ್ಮಾಣ ಮಾಡುತ್ತಿದ್ದೇವೆ. ವಿದ್ಯುದೀಕರಣ 18 ಕಿಮೀಯಿಂದ 369ಕ್ಕೆ ಏರಿದೆ. ಮುಖ್ಯವಾಗಿ, ಶೇ.97ರಷ್ಟು ರೈಲ್ವೆ ಮಾರ್ಗಗಳ ವಿದ್ಯುದೀಕರಣ ಪೂರ್ಣಗೊಂಡಿವೆ ಎಂದು ವಿವರಿಸಿದರು. 2014ರಿಂದ ಇಲ್ಲಿಯವರೆಗೆ 595 ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ವಿುಸಲಾಗಿದೆ. ರಾಜ್ಯದ 77 ಸ್ಟೇಷನ್​ಗಳಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಮಳಿಗೆಗಳನ್ನು ತೆರೆಯಲಾಗಿದೆ. ರಾಜ್ಯದ ನಿಲ್ದಾಣವೊಂದಕ್ಕೆ ಭೇಟಿ ನೀಡಿದ್ದಾಗ ಚೆನ್ನಪಟ್ಟಣ ಬೊಂಬೆಗಳಿಗೆ ಸಾಕಷ್ಟು ಬೇಡಿಕೆಯಿದ್ದದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಂಥ ಉತ್ಪನ್ನಗಳು ಸ್ಟೇಷನ್​ಗಳಲ್ಲಿ ಮಾರಾಟವಾಗುತ್ತಿದ್ದು, ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಾರಿಗಳ ಸಂಪಾದನೆಯೂ ಹೆಚ್ಚಿದೆ ಎಂದರು.
ಯಾವ ನಿಲ್ದಾಣಗಳು?:ರಾಜ್ಯದ ಆಲಮಟ್ಟಿ, ಅಳ್ನಾವರ, ಅರಸೀಕೆರೆ ಜಂಕ್ಷನ್, ಬಾದಾಮಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಕಂಟೋನ್​ವೆುಂಟ್, ಬಂಗಾರಪೇಟೆ, ಬಂಟ್ವಾಳ, ಬೆಳಗಾವಿ, ಬೀದರ್, ವಿಜಯಪುರ, ಚಾಮರಾಜನಗರ, ಚನ್ನಪಟ್ಟಣ, ಚನ್ನಸಂದ್ರ, ಚಿಕ್ಕಮಗಳೂರು, ಚಿಕ್ಕೋಡಿ ರೋಡ್, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದೊಡ್ಡಬಳ್ಳಾಪುರ, ಗದಗ, ಗಂಗಾಪುರ ರೋಡ್, ಗಂಗಾವತಿ, ಘಟಪ್ರಭ, ಗೋಕಾಕ್ ರೋಡ್, ಹರಿಹರ, ಹಾಸನ, ಹೊಸಪೇಟೆ, ಕಲಬುರಗಿ ಜಂಕ್ಷನ್, ಕೆಂಗೇರಿ, ಕೊಪ್ಪಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು ಸ್ಟೇಷನ್), ಕೃಷ್ಣರಾಜಪುರ, ಮಲ್ಲೇಶ್ವರ, ಮಾಲೂರು, ಮಂಡ್ಯ, ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಮುನಿರಾಬಾದ್, ಮೈಸೂರು ಜಂಕ್ಷನ್, ರಾಯಬಾಗ, ರಾಯಚೂರು ಜಂಕ್ಷನ್, ರಾಮನಗರ, ರಾಣಿಬೆನ್ನೂರು, ಸಾಗರ ಜಂಬಗರು, ಸಕಲೇಶಪುರ, ಶಹಬಾದ್, ಶಿವಮೊಗ್ಗ ಟೌನ್, ]ೕ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್, ಸುಬ್ರಹ್ಮಣ್ಯ ರೋಡ್, ತಾಳಗುಪ್ಪ, ತಿಪಟೂರು, ತುಮಕೂರು, ಉಡುಪಿ, ವಾಡಿ, ವೈಟ್​ಫೀಲ್ಡ್, ಯಾದಗಿರಿ ಮತ್ತು ಯಶ್ವಂತಪುರ ನಿಲ್ದಾಣಗಳು ಅಮೃತ ಸ್ಟೇಷನ್​ಗಳ ವ್ಯಾಪ್ತಿಗೆ ಸೇರಲಿವೆ.
ರಾಜ್ಯದ ಮನವಿಗಿಲ್ಲ ಸ್ಪಂದನೆ:ಬಜೆಟ್​ನಿಂದ ಕರ್ನಾಟಕ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿತ್ತು. ಈ ಸಂಬಂಧ ಕೇಂದ್ರಕ್ಕೆ ಮನವಿಗಳನ್ನೂ ಸಲ್ಲಿಸಿತ್ತು. ಆದರೆ, ಬಹುಪಾಲು ಮನವಿಗಳಿಗೆ ಉತ್ತರ ಸಿಕ್ಕಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವ ಬಗ್ಗೆ ಕಳೆದ ಬಜೆಟ್​ನಲ್ಲೇ ಘೊಷಿಸಿದ್ದರೂ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಮಹದಾಯಿ, ಮೇಕೆದಾಟು ಯೋಜನೆ ಉಲ್ಲೇಖವಿಲ್ಲ. ಏಳು ಏಮ್ಸ್​ ಸ್ಥಾಪನೆ ಬಗ್ಗೆ ನಿರ್ಮಲಾ ಸೀತಾರಾಮನ್ ಘೊಷಿಸಿರುವುದು ಸ್ವಾಗತಾರ್ಹವಾಗಿದ್ದರೂ, 7ರಲ್ಲಿ ಒಂದನ್ನಾದರೂ ಕರ್ನಾಟಕಕ್ಕೆ ನಿಗದಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಪುಣೆ- ಬೆಂಗಳೂರು ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆ, ಬೆಂಗಳೂರಲ್ಲಿ ನೆರೆ ನಿಗ್ರಹ ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್​ನಿಂದ 3000 ಕೋಟಿ ರೂ. ಆರ್ಥಿಕ ನೆರವು, ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನವನ್ನು 150 ದಿನಗಳಿಗೆ ಹೆಚ್ಚಿಸುವುದು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು 60 ಕಿ.ಮೀ ಸುರಂಗ ಮಾರ್ಗ ನಿರ್ಮಾಣ ಯೋಜನೆಗೆ ಅನುದಾನದ ಬೇಡಿಕೆ ಸೇರಿ ಹಲವು ಮನವಿಗಳನ್ನು ಸಿಎಂ ಹಾಗೂ ಡಿಸಿಎಂ ಸಲ್ಲಿಸಿದ್ದರು. ಅಲ್ಲದೆ, ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ, ಹೊಸ ರೈಲ್ವೆ ಮಾರ್ಗ, ಡಬ್ಲಿಂಗ್ ಯೋಜನೆ, ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ ಕಾಫಿ ಬೆಳೆ ಸೇರಿಸಬೇಕು ಎಂದೂ ಕೇಳಿಕೊಳ್ಳಲಾಗಿತ್ತು. ಹಾಸನಕ್ಕೆ ಐಐಟಿ ಬೇಕೆಂದು ಮಾಜಿ ಪ್ರಧಾನಿ ದೇವೇಗೌಡರೂ ಮನವಿ ಮಾಡಿದ್ದರು. ಈ ಬಗ್ಗೆಯೂ ಬಜೆಟ್​ನಲ್ಲಿ ಉತ್ತರ ಸಿಕ್ಕಿಲ್ಲ.
59 ಸ್ಟೇಷನ್​ಗಳಿಗೆ ‘ಅಮೃತ’ ಮಾನ್ಯತೆ:ರಾಜ್ಯದ 59 ರೈಲ್ವೆ ಸ್ಟೇಷನ್​ಗಳನ್ನು ಅಮೃತ ರೈಲ್ವೆ ಸ್ಟೇಷನ್​ಗಳನ್ನಾಗಿ ಮಾರ್ಪಾಡು ಮಾಡಲು ಎಂದು ಕೇಂದ್ರ ರೈಲ್ವೆ ಸಚಿವಾಲಯ ತೀರ್ವನಿಸಿದೆ. ಈ ಬಗ್ಗೆ ಕೇಂದ್ರ ಬಜೆಟ್​ನಲ್ಲಿ ಘೊಷಿಸಲಾಗಿದೆ. ಈ ಯೋಜನೆ ಮೂಲಕ ವಿವಿಧ ಹಂತಗಳಲ್ಲಿ ದೇಶದ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದು ಕೇಂದ್ರ ಸರ್ಕಾರದ ಗುರಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + four =
Remember me
