| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕರೊನಾ ಕರಿನೆರಳಿನಿಂದಾಗಿ ಬಹುತೇಕ ಕೈಗಾರಿಕೆಗಳು ಮುಚ್ಚಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರುತ್ತಿರುವ ಸಂದರ್ಭದಲ್ಲಿ, ಉದ್ಯೋಗ ಅವಕಾಶ ಹೆಚ್ಚಿಸಿ, ಕೃಷಿಕರ ಹಿತಕಾಯುವ ಉದ್ದೇಶದಿಂದ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೆಚ್ಚಿನ ಘಟಕಗಳನ್ನು ಸ್ಥಾಪಿಸುವತ್ತ ಸರ್ಕಾರ ಮುಂದಡಿ ಇಟ್ಟಿದೆ. ಕೇಂದ್ರ ಸರ್ಕಾರ ಘೋಷಿಸಿರುವ ‘ಆತ್ಮನಿರ್ಭರ’ ಯೋಜಯೆಯಡಿ ಅಧಿಕ ಅನುದಾನ ಪಡೆದು ಆ ಮೂಲಕ ಆಹಾರ ಸಂಸ್ಕರಣಾ ಘಟಕಗಳನ್ನು ಹೆಚ್ಚೆಚ್ಚು ಸ್ಥಾಪಿಸುವ ಉದ್ದೇಶ ಈಡೇರಿಕೆಯತ್ತ ಸರ್ಕಾರ ಕಾರ್ಯೋನ್ಮುಖವಾಗಿದೆ.
ಕರೊನಾದಿಂದಾಗಿ ಹಳ್ಳಿಗಳಿಗೆ ಮರುವಲಸೆ ಹೋಗಿರುವ ಯುವ ಸಮುದಾಯ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು, ಉದ್ಯೋಗ ಅವಕಾಶ ಹೆಚ್ಚಾಗಬೇಕೆಂಬುದು ಸರ್ಕಾರದ ಉದ್ದೇಶ. ರಾಜ್ಯ ಸರ್ಕಾರ ಆಹಾರ ಸಂಸ್ಕರಣೆಗೆ ಒತ್ತು ನೀಡುವ ಉದ್ದೇಶದಿಂದಲೇ 2015 ರಲ್ಲಿ ಕೃಷಿ ವ್ಯಾಪಾರ, ಆಹಾರ ಸಂಸ್ಕರಣೆ ನೀತಿ ಜಾರಿಗೆ ತಂದಿದ್ದರೂ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ.
ಜಿಡಿಪಿಗೆ ಅನುಕೂಲ:ಕೃಷಿ ಸಂಸ್ಕರಣಾ ಘಟಕಗಳು ಹೆಚ್ಚಾದಷ್ಟು ರಾಜ್ಯದ ಜಿಡಿಪಿಗೂ ಹೆಚ್ಚಿನ ಕೊಡುಗೆ ಲಭಿಸುತ್ತದೆ.
ಕೇಂದ್ರಕ್ಕೆ ಪತ್ರ:ಕೇಂದ್ರ ಸರ್ಕಾರ ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಎಂಬ ನೀತಿಯನ್ನು ತಂದಿದೆ. ಆ ನಿಯಮವನ್ನು ತೆಗೆದುಹಾಕಿ ಕ್ಲಸ್ಟರ್​ವಾರು ಘಟಕಗಳ ಸ್ಥಾಪನೆಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಒಂದೇ ಜಿಲ್ಲೆಯಲ್ಲಿ ಎರಡು ಮೂರು ಕೃಷಿ ಉತ್ಪನ್ನಗಳಿಗೆ ಅವಕಾಶ ಇದ್ದರೆ ಉತ್ತಮ ಎಂಬುದು ಸರ್ಕಾರದ ವಾದ.
ಎಫ್​ಪಿಒಗಳ ಸ್ಥಾಪನೆ:ಆಹಾರ ಸಂಸ್ಕರಣಾ ಘಟಕಗಳ ಕಾರ್ಯದಲ್ಲಿ ರೈತರ ಪಾತ್ರ ಸಹ ಮುಖ್ಯವಾಗಿರುತ್ತದೆ. ಅದಕ್ಕಾಗಿಯೇ ರೈತ ಉತ್ಪಾದಕರ ಸಂಸ್ಥೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಈಗ 334 ರೈತ ಉತ್ಪಾದಕ ಸಂಸ್ಥೆಗಳಿವೆ. ನಬಾರ್ಡ್​ನಿಂದ 206, ಕೃಷಿ ಇಲಾಖೆಯಿಂದ 24, ತೋಟಗಾರಿಕೆ ಇಲಾಖೆಯಿಂದ 99 ಹಾಗೂ ಪಶು ಸಂಗೋಪನೆ ಇಲಾಖೆಯ 6 ಸಂಸ್ಥೆಗಳು ಕರೊನಾ ಸಂಕಷ್ಟದ ಸಂದರ್ಭದಲ್ಲಿ ರೈತರಿಂದ ಉತ್ಪನ್ನಗಳನ್ನು ಖರೀದಿಸಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿವೆ.
ಈ ಅನುಭವದ ಆಧಾರದಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಲಿಂಕ್ ಮಾಡಲು ಕನಿಷ್ಠ 1000 ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳಿಗೆ ತಲಾ 25 ಲಕ್ಷ ರೂ. ದುಡಿಯುವ ಬಂಡವಾಳ ನೀಡಬೇಕೆಂಬ ಆಲೋಚನೆಯೂ ಸರ್ಕಾರದಲ್ಲಿದೆ.
4 ಆಹಾರ ಪಾರ್ಕ್:ರಾಜ್ಯದಲ್ಲಿ ಈಗ ನಾಲ್ಕು ಸಣ್ಣ ಪ್ರಮಾಣದ ಆಹಾರ ಪಾರ್ಕ್​ಗಳಿವೆ. ಹಿರಿಯೂರು, ಬಾಗಲಕೋಟೆ, ಜೇವರ್ಗಿ, ಮಾಲೂರಿನ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ತುಮಕೂರಿನಲ್ಲಿ ಮೆಗಾ ಫುಡ್ ಪಾರ್ಕ್ ಅನ್ನು ಉದ್ಘಾಟಿಸಿದ್ದರು. ಈ ಪಾರ್ಕ್​ಗಳು ಇನ್ನಷ್ಟು ಅಭಿವೃದ್ಧಿಯಾಗಬೇಕಾಗಿದೆ. ಆತ್ಮನಿರ್ಭರ ಯೋಜನೆಯಡಿ ಇವುಗಳನ್ನು ಬೆಸೆಯುವುದು ಸರ್ಕಾರದ ಉದ್ದೇಶ.
ಮೂಲಸೌಕರ್ಯಕ್ಕೆ ಆದ್ಯತೆ
ಗೋದಾಮು, ಶೀತಲೀಕರಣ ಘಟಕ, ಸಂಸ್ಕರಣಾ ಘಟಕ ಸ್ಥಾಪಿಸಿ ಮೌಲ್ಯವರ್ಧನೆ ಮಾಡುವುದು, ಪ್ಯಾಕಿಂಗ್, ಕಚ್ಚಾ ವಸ್ತುವನ್ನು ಸೇರಿದಂತೆ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.
ತಿದ್ದುಪಡಿ ಅನುಕೂಲ
ಕೇಂದ್ರ ಸರ್ಕಾರದ ಸೂಚನೆಯಂತೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಆಹಾರ ಸಂಸ್ಕರಣಾ ಕ್ಷೇತ್ರದ ಬೆಳವಣಿಗೆಗೆ ಪೂರಕವೆಂದು ಸರ್ಕಾರ ಪ್ರತಿಪಾದಿಸುತ್ತಿದೆ. ಸಂಸ್ಕರಣಾ ಘಟಕಗಳು ಸ್ಥಾಪನೆಯಾದರೆ ರೈತರ ಉತ್ಪನ್ನಗಳನ್ನು ಖರೀದಿಸಲು ಅನುಕೂಲವಾಗುತ್ತದೆ. ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ಬ್ರಾ್ಯಂಡಿಂಗ್​ಗೆ ಆದ್ಯತೆ
ಇಲ್ಲಿನ ಉತ್ಪನ್ನಗಳನ್ನು ಬ್ರಾ್ಯಂಡ್ ಮಾಡುವ ಮೂಲಕ ಸ್ಥಳೀಯ ಮಾರುಕಟ್ಟೆ ಕಂಡುಕೊಳ್ಳಬಹುದು. ವಿದೇಶದ ಅನೇಕ ಸಂಸ್ಥೆಗಳು ಇಲ್ಲಿನ ಉತ್ಪನ್ನಗಳನ್ನು ಸಂಸ್ಕರಿಸಿ ಇಲ್ಲಿಯೇ ಮಾರುಕಟ್ಟೆ ಕಂಡುಕೊಂಡಿಲ್ಲವೇ ಎಂಬುದು ಸರ್ಕಾರದ ಪ್ರಶ್ನೆಯಾಗಿದೆ.
ಉದ್ಯೋಗ ಅವಕಾಶ
ರಾಜ್ಯದಲ್ಲಿ 1072 ಘಟಕಗಳು ಸ್ಥಾಪನೆಯಾದರೆ ಪ್ರತಿಯೊಂದರಲ್ಲಿ ಕನಿಷ್ಠ 100 ನೇರ ಉದ್ಯೋಗಾವಕಾಶ ಸಿಕ್ಕರೂ 10 ಸಾವಿರ ಜನರಿಗೆ ಕೆಲಸ ಸಿಗುತ್ತದೆ. ಇದಲ್ಲದೇ ಪರೋಕ್ಷವಾಗಿಯೂ ಹಲವು ಉದ್ಯೋಗಗಳು ಸಿಗುತ್ತವೆ.
ಎಲ್ಲಿ ಯಾವ ಕ್ಲಸ್ಟರ್?
ಯಾದಗಿರಿ, ಬಳ್ಳಾರಿ, ಮೈಸೂರು, ತುಮಕೂರು, ಉಡುಪಿ, ಕೊಪ್ಪಳ ಜಿಲ್ಲೆಗಳಲ್ಲಿ ಅಕ್ಕಿ, ಬೆಂಗಳೂರು, ಬೆಳಗಾವಿಯಲ್ಲಿ ಬಿವರೇಜಸ್, ಮೈಸೂರು, ದಕ್ಷಿಣ ಕನ್ನಡ, ಕೋಲಾರದಲ್ಲಿ ಸಿದ್ಧ ಆಹಾರ, ಕೊಡಗಿನಲ್ಲಿ ಕಾಫಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಹಾವೇರಿಯಲ್ಲಿ ಸಾಂಬಾರ, ಹಾವೇರಿಯಲ್ಲಿ ಮೆಕ್ಕೆ ಜೋಳ, ಮಂಗಳೂರಿನಲ್ಲಿ ಸೀಪುಡ್, ಚಿತ್ರದುರ್ಗದಲ್ಲಿ ಶೇಂಗಾ- ಹೀಗೆ ವಿವಿಧ ಕ್ಲಸ್ಟರ್​ಗಳ ಸ್ಥಾಪನೆಯ ಉದ್ದೇಶವಿದೆ.
ಉದ್ಯೋಗ ಅವಕಾಶ
ರಾಜ್ಯದಲ್ಲಿ 1072 ಘಟಕ ಸ್ಥಾಪನೆಯಾದರೆ ಪ್ರತಿಯೊಂದರಲ್ಲಿ ಕನಿಷ್ಠ 100 ನೇರ ಉದ್ಯೋಗ ಅವಕಾಶ ಸಿಕ್ಕರೂ 10 ಸಾವಿರ ಜನರಿಗೆ ಕೆಲಸ ಸಿಗುತ್ತದೆ. ಇದಲ್ಲದೆ ಪರೋಕ್ಷವಾಗಿಯೂ ಹಲವು ಉದ್ಯೋಗಗಳು ಸಿಗುತ್ತವೆ.
ಲಾಭ ಏನು?
ಆಹಾರ ಸಂಸ್ಕರಣೆ ಮೂಲಕ ಮೌಲ್ಯವರ್ಧನೆ ಮಾಡಿದರಷ್ಟೇ ಮಾರುಕಟ್ಟೆ ಸಿಕ್ಕಿ ರೈತರಿಗೆ ಅನುಕೂಲವಾಗುತ್ತದೆ. ದಲ್ಲಾಳಿ ಇಲ್ಲದಂತೆ ರೈತರು ನೇರವಾಗಿ ಮಾರಾಟ ಮಾಡಬಹುದು, ಉತ್ಪನ್ನಗಳನ್ನು ಮಾರುಕಟ್ಟೆಗೂ ನೀಡಬಹುದು.
ಎಲ್ಲೆಲ್ಲಿ ಸ್ಥಾಪನೆ?
ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಲ್ಲಿನ ಬೆಳೆಗಳಿಗೆ ತಕ್ಕಂತೆ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಉದ್ದೇಶವಿದೆ.
ಎಷ್ಟು ಘಟಕ?
ಕೇಂದ್ರ ಸರ್ಕಾರ ರಾಜ್ಯದಲ್ಲಿ 1072 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದೆಂಬ ಅಂದಾಜಿದೆ. ಆತ್ಮ ನಿರ್ಭರ ಯೋಜನೆಯಲ್ಲಿ 10 ಸಾವಿರ ಕೋಟಿ ರೂ. ಮೊತ್ತ ಪಡೆಯುವ ಬಗ್ಗೆ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ಹೇಳುತ್ತವೆ.
ಏನೇನು ಸ್ಥಾಪನೆ ಉದ್ದೇಶ?
ಅಗ್ರಿ ಪಾರ್ಕ್, ಫುಡ್ ಪಾರ್ಕ್, ಸೀಫುಡ್ ಪಾರ್ಕ್, ರೈಸ್ ಟೆಕ್ನಾಲಜಿ ಪಾರ್ಕ್, ಮೇಜ್ ಟೆಕ್ನಾಲಜಿ ಪಾರ್ಕ್, ಶೀತಲೀಕರಣ ಘಟಕ, ಉಗ್ರಾಣ, ಅಗ್ರಿ ಲಾಜಿಸ್ಟಿಕ್ ಹಬ್, ಹಾಗೂ ಲಾಜಿಸ್ಟಿಕ್ ಪಾರ್ಕ್ ನಿರ್ವಣ.
ಗಣಿತದಲ್ಲಿ ನೂರಕ್ಕೆ ನೂರು, ಉಳಿದ ವಿಷಯದಲ್ಲೂ ಉತ್ತಮ ಅಂಕ: ಆದ್ರೆ ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
