ಹಾಸನ:ಬುಧವಾರ ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿತ್ತು. ಇಷ್ಟೇ ಆಗಿದ್ದರೆ ಪ್ರಕರಣ ದೊಡ್ಡದಾಗುತ್ತಿರಲಿಲ್ಲ. ಕಾರಿನ ಡಿಕ್ಕಿಯಲ್ಲಿ ಶವವೊಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಇದೀಗ ಇಡೀ ಪ್ರಕರಣದ ಭಯಾನಕ ಸತ್ಯ ಬಯಲಾಗಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಮೀಪದ ಗ್ರಾಮ ಮಟ್ಟನವಿಲೆಯಲ್ಲಿ ಘಟನೆ ನಡೆದಿತ್ತು. ಕಾರಿನ ಬೆಂಕಿ ಉರಿದು ಸ್ಫೋಟಗೊಂಡ ಸದ್ದು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದರು. ಮೊದಲಿಗೆ ಸುಟ್ಟು ಹೋದ ಕಾರೆಂದು ತಿಳಿದಿದ್ದರು. ಪರಿಶೀಲಿಸಿ ನೋಡಿದಾಗ ಸುಟ್ಟ ಕಾರಿನ ಡಿಕ್ಕಿಯಲ್ಲಿ ಸುಟ್ಟು ಕರಕಲಾದ ಶವವೊಂದು ಕಂಡು ಬಂದಿತ್ತು.
ಇದನ್ನೂ ಓದಿ:ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ರೋಚಕ ಮಾಹಿತಿ ಬಿಚ್ಚಿಟ್ಟ ಪ್ರಿಯಕರ ಪ್ರಶಾಂತ್​!
ಶವ ಗಂಡಿನದ್ದೋ ಅಥವಾ ಮಹಿಳೆಯದ್ದೋ ಎಂದು ತಿಳಿಯದ ಮಟ್ಟಿಗೆ ದೇಹ ಸುಟ್ಟುಹೋಗಿತ್ತು. ಸ್ಥಳಕ್ಕೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶವ ಸ್ಥಳೀಯರದ್ದೇ ಇರಬಹುದೆಂದು ಪೊಲಿಸರು ಊಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ 75 ರ ಸಮೀಪ ಘಟನೆ ನಡೆದಿರುವ ಕಾರಣ ಬೆಂಗಳೂರಿನಿಂದ ಆಗಮಿಸಿದ ದುಷ್ಕರ್ಮಿಗಳಿಂದಲೂ ಈ ಕೃತ್ಯ ಆಗಿರಬಹುದೆಂದು ಶಂಕಿಸಿದ್ದರು.
ಬಯಲಾಯ್ತು ಅಸಲಿಯತ್ತುಕಾರಿನ ಡಿಕ್ಕಿಯಲ್ಲಿ ಇದ್ದದ್ದು ಪುರುಷನ ಶವವೆಂಬುದು ತಿಳಿದುಬಂದಿದೆ. ಮೃತನನ್ನು ದಿನೇಶ್​ (27) ಎಂದು ಗುರುತಿಸಲಾಗಿದೆ. ಈತ ಚನ್ನರಾಯಪಟ್ಟಣ ಲಕ್ಷ್ಮೀಪುರ ಗ್ರಾಮದ ನಿವಾಸಿ. ಎರಡನೇ ಮದುವೆ ವಿಚಾರ ತಿಳಿದು ಮೊದಲನೇ ಪತ್ನಿ ಅಭಿಲಾಶ (22) ಮತ್ತು ಮಾವ ಮಂಜುನಾಥ್​ (45) ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ. ಮಗಳ ಸಮಾನವಾದ ದೊಡ್ಡಪ್ಪನ ಅಪ್ರಾಪ್ತ ಮಗಳನ್ನು ದಿನೇಶ್​ ಗುಟ್ಟಾಗಿ 2ನೇ ವಿವಾಹ ಆಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆತನನ್ನು ಕೊಲೆ ಮಾಡಿ, ಕಾರಿನ ಡಿಕ್ಕಿಗೆ ಹಾಕಿ ಪೆಟ್ರೋಲ್ ಸುರಿದು ಸುಟ್ಟುಹಾಕಿ ಬಂದಿದ್ದರು. ದಿನೇಶ್​ ನಾಪತ್ತೆ ಕುರಿತು ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಸತ್ಯಾಂಶ ಬಯಲಾಗಿದೆ. ಇದೀಗ ಮೊದಲ ಪತ್ನಿ ಅಭಿಲಾಶ, ಮಾವ ಮಂಜುನಾಥ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಳ್ಳಂಬೆಳಗ್ಗೆ ಸುಟ್ಟು ಕರಕಲಾಗಿದ್ದ ಕಾರಿನ ಡಿಕ್ಕಿ ನೋಡಿದ ಹಾಸನ ಗ್ರಾಮಸ್ಥರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 5 =
Remember me
