ತುಮಕೂರು: ಸೇತುವೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ತಲೆಕೆಳಗಾಗಿ ಬಿದ್ದ ಪರಿಣಾಮ ಮೂರಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿ ಗಾಯಗೊಂಡಿದ್ದು 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಭಾನುವಾರ ರಾತ್ರಿ ಹೊಸಕೆರೆ – ಹೊವಿನ ಕಟ್ಟೆ ಮಾರ್ಗದಲ್ಲಿ ರಸ್ತೆಯಲ್ಲಿನ ಗೂಬೆಕಲ್ಲು ಹತ್ತಿರವಿರುವ ಸೇತುವೆಗೆ ಖಾಸಗಿ ಬಸ್ ಚಾಲಕ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದೆ.
ಬಸ್ ನಲ್ಲಿ 20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು . ಗಂಭೀರವಾಗಿ ಗಾಯಗೊಂಡಿದ್ದ ಹೂವಿನಕಟ್ಟೆ ಅನಿತಾ(30), ಹೊಸಪಾಳ್ಯ ರಮೇಶ್ ( 35), ಕುರಿಕಾಟನಹಳ್ಳಿ ನಿಂಗಣ್ಣ ( 60) ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಕೆಳಗೆ ಸಿಕ್ಕಿಕೊಂಡಿದ್ದ ಕುಂಟರಾಮನಹಳ್ಳಿ ತ್ಯಾಗರಾಜ (30) ಮುಬಾರಕ್,(25) ಹಾಗೂ ಬಸ್ ಕ್ಲೀನರ್ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನ ಕಿಶೋರ್ (27)ನನ್ನು ಪೋಲಿಸರು, ಸಾರ್ವಜನಿಕರು ನೆರವಿನಲ್ಲಿ ಕಾಪಾಡಿದ್ದಾರೆ.
ಇದನ್ನೂ ಓದಿ:ಪಶ್ಚಿಮ ಬಂಗಾಳ ಚುನಾವಣೆ: ತಳಮಟ್ಟದಲ್ಲಿ ಸಂಘಟನೆಯ ಕೆಲಸ ಚುರುಕುಗೊಳಿಸಿದ ಬಿಜೆಪಿ
ಸಣ್ಣಪುಟ್ಟ ಗಾಯಗಳಾದ ಎಂಎನ್ ಕೋಟೆ ಗಂಗಮ್ಮ ( 60), ಮಂಚಲದೊರೆ ಶಂಕರಮ್ಮ (60), ಬೆಣಚಗೆರೆ ತಿಮ್ಮಯ್ಯ (55), ಯರಬಳ್ಳಿ ಹನುಮಂತಯ್ಯ(67), ಮುಚ್ಚವೀರನಹಳ್ಳು ನಾಗರಾಜ್ (48)_ ಮಂಚಲದೊರೆ ಬಸವರಾಜು (57), ಹೂವಿನಕಟ್ಟೆ ಜಯಮ್ಮ (57)ರನ್ನು ಹೊಸಕೆರೆ, ಚೇಳೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಚೇಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳ ನೆರವಿಗೆ ನಿಂತಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ನಿಯಮ ಪಾಲಿಸದ ನರ್ಸಿಂಗ್ ಕಾಲೇಜು – 15 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fourteen =
Remember me
