ಬೆಳಗಾವಿ:ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಸಾರಿಗೆ ಬಸ್​ ಡಿಪೋದಲ್ಲಿನ ಬಂಕ್​ನಿಂದಲೇ ಶುಕ್ರವಾರ ಡೀಸೆಲ್​ ಹಾಕಿಸಿಕೊಂಡಿದ್ದು, ಡೀಸೆಲ್​ ತುಂಬಿದ ಸಿಬ್ಬಂದಿಗೀಗ ಸಂಕಷ್ಟ ಎದುರಾಗಿದೆ.
ನಗರದ ಮೂರನೇ ಬಸ್​ ಡಿಪೋದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಿದ್ದ ವಿಶ್ರಾಂತಿ ಗೃಹ ಉದ್ಘಾಟನೆಗೆಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಸ್ವಂತ ಕಾರಿನಲ್ಲಿ ಬಂದಿದ್ದರು. ಇದೇ ವೇಳೆ ಸವದಿ ಅವರ ಕಾರಿಗೆ ಇಲ್ಲಿನ ಸರ್ಕಾರಿ ಬಂಕ್​ನಲ್ಲಿ ಬರೋಬ್ಬರಿ 44 ಲೀಟರ್ ಡೀಸೆಲ್ ಅನ್ನು ತುಂಬಿಸಿಕೊಂಡರು. ಗ್ರಾಮೀಣ ಹಾಗೂ ನಗರದಲ್ಲಿ ಸಂಚರಿಸುವ ಸರ್ಕಾರಿ ಬಸ್ ಗಳಿಗೆ ಮಾತ್ರ ಡೀಸೆಲ್ ಹಾಕಲು ಈ ಡಿಪೋ ಬಂಕ್​ನಲ್ಲಿ ಅವಕಾಶ ಇದೆ. ಆದರೂ ಸಚಿವರ ಖಾಸಗಿ ಕಾರಿಗೆ ಸರ್ಕಾರಿ ಡಿಪೋದಲ್ಲಿ ಡೀಸೆಲ್ ಹಾಕಿದ್ದು, ಚರ್ಚೆಗೆ ಗ್ರಾಸವಾಗಿತ್ತು.ಇದನ್ನೂ ಓದಿರಿಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು
ಡಿಸಿಎಂ ಲಕ್ಷ್ಮಣ ಸವದಿ ಅವರ ಖಾಸಗಿ ವಾಹನಕ್ಕೆ ಸಂಸ್ಥೆಯ ನಿಯಮ ಉಲ್ಲಂಘಿಸಿ 44 ಲೀಟರ್ ಡೀಸೆಲ್​ ಹಾಕಿದ್ದನ್ನು ಪ್ರಶ್ನಿಸಿ ವಾ.ಕ.ರ.ಸಾ.ಸಂಸ್ಥೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರು ಶನಿವಾರ ನೋಟಿಸ್ ಜಾರಿ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿ ಇಂಧನ ಹಾಕಿದ್ದಕ್ಕೆ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು? ಎಂದು ಬೆಳಗಾವಿ 3ನೇ ಘಟಕದ ಕಿರಿಯ ಸಹಾಯಕ ಬಿ.ಎಸ್. ಕಿಶೋರ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು 7 ದಿನಗಳ ಒಳಗಾಗಿ ಉತ್ತರಿಸುವಂತೆ ನೋಟಿಸ್​ನಲ್ಲಿ ಗಡುವು ನೀಡಿದ್ದಾರೆ.
3 ಸಾವಿರ ಹಣ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸದಷ್ಟು ದುರ್ಗತಿ ಬಂದಿಲ್ಲ… ಎನ್ನುತ್ತಲೇ ಸಿಡಿಮಿಡಿಗೊಂಡ ಸವದಿ

ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

ತಾಯಿ-ತಂಗಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಕೊಂದುಬಿಟ್ಟ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 2 =
Remember me
