ತುಮಕೂರು:ವಾಹನ ಚಲಾಯಿಸುವಾಗ ಮೊಬೈಲ್​ಫೋನ್​ ಬಳಸುವುದೇ ಅಪರಾಧ. ಹೀಗಿರುವಾಗ ಇಲ್ಲೊಬ್ಬ ಬಸ್​ ಚಾಲಕ ಕಿಲೋಮೀಟರ್​ಗಟ್ಟಲೆ ದೂರ ಮೊಬೈಲ್​ಫೋನ್​ ನೋಡುತ್ತಲೇ ಬಸ್​ ಚಲಾಯಿಸಿ, ಪ್ರಯಾಣಿಕರ ಟೀಕೆಗೆ ತುತ್ತಾಗಿದ್ದಾನೆ.
ಬೆಂಗಳೂರಿನಿಂದ ಹಾನಗಲ್​ ಕಡೆಗೆ ಸಾಗುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆಯ ಕೆಎ-27 ಎಫ್​ 0777 ಸಂಖ್ಯೆಯ ಬಸ್​ ಚಾಲಕ ತುಮಕೂರು-ಶಿರಾ ಹೆದ್ದಾರಿಯಲ್ಲಿ ಈ ಅಪರಾಧ ಎಸಗಿದ್ದಾನೆ. ಮೊಬೈಲ್​ಫೋನ್​ ನೋಡುತ್ತಲೇ ಸುಮಾರು 15 ಕಿಲೋಮೀಟರ್ ದೂರ ಈತ ಬಸ್ ಚಲಾಯಿಸಿದ್ದಾನೆ ಎನ್ನಲಾಗಿದೆ.
ಒಂದು ಕೈಯಲ್ಲಿ ಸ್ಟೇರಿಂಗ್​, ಇನ್ನೊಂದು ಕೈಯಲ್ಲಿ ಮೊಬೈಲ್​​ ಫೋನ್​ ಹಿಡಿದುಕೊಂಡು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುತ್ತ ಬಸ್​ ಚಲಾಯಿಸಿದ ಈತನ ವಿರುದ್ಧ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಸ್​ನಲ್ಲಿದ್ದ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರೂ ಈತ ಲೆಕ್ಕಿಸದೇ ಮೊಬೈಲ್​ಫೋನ್​ ನೋಡುತ್ತಲೇ ಬಸ್​ ಚಲಾಯಿಸುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಈತನ ಬೇಜವಾಬ್ದಾರಿಯ ಚಾಲನೆಯನ್ನು ಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದು, ಅದೀಗ ಎಲ್ಲೆಡೆ ಹರಿದಾಡಲಾರಂಭಿಸಿದೆ.
ಮೊಬೈಲ್​​ಫೋನ್​ ನೋಡುತ್ತಲೇ ಕಿಲೋಮೀಟರ್​ಗಟ್ಟಲೆ ದೂರ ಬಸ್ ಚಲಾಯಿಸಿದ ಚಾಲಕ!ವಿವರಗಳಿಗೆhttps://t.co/YaFZZchMRhನೋಡಿpic.twitter.com/vVu8oPoFPw
— Vijayavani (@VVani4U)January 29, 2022

ಮತ್ತೆ ಬಣ್ಣ ಹಚ್ಚಿದ್ರು ನಟಿ ನೀತೂ ಶೆಟ್ಟಿ; ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆ..

ಸಪ್ತ ಸುರಂಗದಾಚೆ ಎಲ್ಲೋ ಅಂತರ್ಜಲವು ಕಾದಿದೆ; ಅಭಿನವ ಭಗೀರಥಗೀಗ ಪದ್ಮಗೌರವವು ಸಂದಿದೆ..

Sign in to your account
Please enter an answer in digits:18 + 8 =
Remember me
