ಬೆಂಗಳೂರು:ಲಾಕ್​ಡೌನ್​ ಸಡಿಲಿಕೆ ಹಿನ್ನೆಯಲ್ಲಿ ಕೆಎಸ್ಸಾಟಿರ್ಸಿ ಬೆಂಗಳೂರು ಮತ್ತು ಮೈಸೂರಿನಿಂದ ತೆಲಂಗಾದ ಹೈದರಾಬಾದ್​ಗೆ ನ.3ರಿಂದ ಬಸ್​ ಸೇವೆ ಪುನರಾರಂಭಿಸುತ್ತಿದೆ.
ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೆಎಸ್ಸಾಟಿರ್ಸಿ ಮಾರ್ಚ್​, ಏಪ್ರಿಲ್​, ಮೇ ತಿಂಗಳುಗಳಲ್ಲಿ ಅಂತಾರಾಜ್ಯ ಬಸ್​ ಸೇವೆ ಸ್ಥಗಿತಗೊಳಿಸಿತ್ತು. ಲಾಕ್​ಡೌನ್​ ಸಡಿಲಿಕೆ ನಂತರ ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಬಸ್​ ಸೇವೆ ಮತ್ತೆ ಆರಂಭಿಸಲಾಗಿತ್ತು. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಆಂಧ್ರಪ್ರದೇಶ, ಗೋವಾ, ಕೇರಳ, ಪಾಂಡಿಚೇರಿ ಸೇರಿ ಅಕ್ಕಪಕ್ಕದ ರಾಜ್ಯಗಳಿಗೆ ಬಸ್​ ಸೇವೆ ನೀಡಲಾಗುತ್ತಿದೆ. ಆದರೂ, ಹೈದರಾಬಾದ್​ ಸೇವೆ ಇನ್ನಿತರ ನಗರಗಳಿಗೆ ಬಸ್​ ಸೇವೆ ಆರಂಭಿಸಿರಲಿಲ್ಲ. ಇದೀಗ ನ. 3ರಿಂದ ಹೈದರಾಬಾದ್​ಗೆ ಬಸ್​ ಸೇವೆ ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ.
ಅದರಂತೆ ಬಸ್​ ಪ್ರಯಾಣ ಮಾಡುವವರು ಕಡ್ಡಾಯವಾಗಿ ಮಾಸ್ಕ್​ ಧರಿಸುವುದು, ಥರ್ಮಲ್​ ಸ್ಕ್ರೀನಿಂಗ್​ಗೆ ಒಳಗಾಗಬೇಕಿದೆ. ಜತೆಗೆ ನಿಗಮದ ಜಾಲತಾಣ, ಫ್ರಾಂಚೈಸಿ, ಟಿಕೆಟ್​ ಬುಕ್ಕಿಂಗ್​ ಕೇಂದ್ರಗಳಲ್ಲಿ ಮುಂಗಡ ಟಿಕೆಟ್​ ಕಾಯ್ದಿರಿಸಿ ಬಸ್​ ಪ್ರಯಾಣ ಮಾಡಬೇಕು ಎಂದು ಕೆಎಸ್ಸಾಟಿರ್ಸಿ ಸೂಚಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
