ಮಂಡ್ಯ:ಬಸ್​ಗಾಗಿ ಪ್ರಯಾಣಿಕರು ಕಾಯೋದು ಸಾಮಾನ್ಯ. ಆದರೆ, ಇಂದು ಪ್ರಯಾಣಿಕರಿಗಾಗಿ ಬಸ್​ಗಳೇ ಕಾಯುತ್ತಿವೆ. ಹೌದು, ಸಕ್ಕರೆ ನಾಡಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೇ ಕೆಎಸ್​ಆರ್​ಟಿಸಿ ಬಸ್​ಗಳು ಸಾಲುಗಟ್ಟಿ ನಿಂತಿವೆ.
ಇದನ್ನೂ ಓದಿ:13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?
ಬೆಳಗ್ಗೆಯಿಂದ ಈವರೆಗೆ ಕೇವಲ 15 ಬಸ್​ಗಳು ಮಾತ್ರ ಪ್ರಯಾಣಿಕರನ್ನು ಕರೆದೊಯ್ದಿದೆ. ಬೆಂಗಳೂರು ಹಾಗೂ ಮೈಸೂರಿಗೆ ಮಾತ್ರ ಬಸ್ ಸಂಚಾರ ಇದೆ. ಪ್ರಯಾಣಿಕರಿಲ್ಲದೇ ತಾಲೂಕು ಕೇಂದ್ರಗಳಿಗೂ ಬಸ್​ಗಳು ತೆರಳಲು ಸಾಧ್ಯವಾಗಿಲ್ಲ.
ಇವತ್ತು ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ತಾಲೂಕು ಕೇಂದ್ರಗಳಿಗೆ ತೆರಳಲು ಪ್ರಯಾಣಿಕರು ಬಾರದೇ ಇರುವ ಹಿನ್ನೆಲೆಯಲ್ಲಿ ಒಂದೇ ಒಂದು ತಾಲೂಕು ಕೇಂದ್ರಕ್ಕೂ ಬಸ್​ಗಳು ತೆರಳಿಲ್ಲ.
ಇದನ್ನೂ ಓದಿ:ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್​ ಟ್ರಂಪ್​…!
ಒಂದು ಮಾರ್ಗಕ್ಕೆ ಕನಿಷ್ಠ 10 ರಿಂದ 15 ಜನ ಪ್ರಯಾಣಿಕರಿದ್ದರೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದರೆ ಆ ಮಾರ್ಗಕ್ಕೆ ಬಸ್ ಕಳುಹಿಸುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ರಾಜ್ಯಾದ್ಯಂತ ಬಸ್​ ಸಂಚಾರ ಆರಂಭ: ನಿಲ್ದಾಣಗಳಿಗೆ ಪ್ರಯಾಣಿಕರ ದೌಡು, ಮುನ್ನೆಚ್ಚರಿಕೆಗೆ ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 16 =
Remember me
