ರಾಯಚೂರು:ರಾಜ್ಯದಲ್ಲಿ ರಸ್ತೆಗಳ ಪರಿಸ್ಥಿತಿ ಸಾರ್ವಜನಿಕರಿಗೆ ಗೊತ್ತಿರುವಂಥದ್ದೇ. ಕೆಲವೊಂದು ಕಡೆ ರಸ್ತೆಗಳಲ್ಲಿ ಡಾಂಬರು ಕಿತ್ತುಹೋಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಗುಂಡಿಗಳೇ ಬಿದ್ದಿವೆ. ಹೊಂಡ-ಗುಂಡಿಗಳ ಮಧ್ಯೆ ವಾಹನ ಸವಾರರು ಸರ್ಕಸ್ ಮಾಡುತ್ತ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಹಲವೆಡೆ ಇದೆ. ಇಂಥ ರಸ್ತೆಗಳಿಂದಾಗಿಯೇ ಬಸ್ಸೊಂದರ ಚಕ್ರ ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡ ಪ್ರಕರಣವೂ ಸಂಭವಿಸಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ನಗರಗುಂಡ ಕ್ರಾಸ್ ಬಳಿಯ ಸೇತುವೆ ಮೇಲೆ ಬಿದ್ದಿರುವ ಹೊಂಡದೊಳಕ್ಕೆ ಸರ್ಕಾರಿ ಬಸ್​ವೊಂದರ ಚಕ್ರ ಸಿಲುಕಿಕೊಂಡಿತ್ತು. ಅದೃಷ್ಟವಶಾತ್ ಅಪಘಾತ ಸಂಭವಿಸದ್ದರಿಂದ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿತು ಎಂಬುದಾಗಿ ಸ್ಥಳೀಯರು ಹೇಳಿಕೊಂಡಿದ್ದಾರೆ.
ಅಕ್ರಮ ಮರಳು ದಂಧೆಗೆ ರಾಯಚೂರು ಜಿಲ್ಲೆಯ ರಸ್ತೆಗಳು ಹಾಳಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ. ಜಿಲ್ಲೆಯ ದೇವದುರ್ಗ ಪಟ್ಟಣದ ನಗರಗುಂಡ ಕ್ರಾಸ್ ಬಳಿಯ ಸೇತುವೆ ಮೇಲೂ ಅಕ್ರಮ ಮರಳು ಸಾಗಾಣಿಕಾ ಟಿಪ್ಪರ್​ಗಳ ಹಾವಳಿಗೆ ಗುಂಡಿಗಳು ಬಿದ್ದಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ. ಅಂಥದ್ದೇ ಒಂದು ಗುಂಡಿಗೆ ಈ ಸರ್ಕಾರಿ ಬಸ್ ಚಕ್ರ ಸಿಲುಕಿಕೊಂಡಿದ್ದು, ಬಸ್​ ತೆರವುಗೊಳಿಸಲಾಗಿದೆ.
Web Exclusive | ನನೆಗುದಿಗೆ ಬಿದ್ದಿದ್ದ ರೈಲು ಮಾರ್ಗಗಳಿಗೆ ಜೀವಕಳೆ: 10 ಹೊಸ ಮಾರ್ಗಗಳ ಸರ್ವೆ ಪೂರ್ಣ, ವರದಿ ಕಳುಹಿಸಲು ರೈಲ್ವೆ ಮಂಡಳಿ ಸೂಚನೆ

ಐ ಆಮ್ ವಿಲನ್!; ನೆಗೆಟಿವ್ ಪಾತ್ರಗಳತ್ತ ಹೀರೋಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
