ಮೈಸೂರು:ನಟ ದರ್ಶನ್​ ಕುರಿತ ವಿವಾದಾತ್ಮಕ ವಿಚಾರವಾಗಿ ಸಂಜೆಯಷ್ಟೇ ಚಿತ್ರ ನಿರ್ದೇಶಕ ಇಂದ್ರಜಿತ್ ಸುದ್ದಿಗೋಷ್ಠಿ ಕರೆದು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಉಂಟಾಗಿದೆ. ಮಾತ್ರವಲ್ಲ, ಈ ವಿಚಾರವಾಗಿ ಇದುವರೆಗೆ ಬಹುತೇಕ ಸುಮ್ಮನಿದ್ದ ಉದ್ಯಮಿಯೊಬ್ಬರು ಈಗ ಮಾತನಾಡಿದ್ದಲ್ಲದೆ, ಇಂದ್ರಜಿತ್ ಆರೋಪಗಳೆಲ್ಲವನ್ನೂ ಅಲ್ಲಗಳೆದಿದ್ದಾರೆ.
ಮೈಸೂರಿನ ತಮ್ಮ ಹೋಟೆಲ್​ ಮುಂದೆ ಜಮಾಯಿಸಿದ್ದ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಉದ್ಯಮಿ ‘ಸಂದೇಶ್​’ ನಾಗರಾಜ್​, ತಮ್ಮ ಪುತ್ರ ಸಂದೇಶ್ ಈ ವಿಚಾರವಾಗಿ ಇಂದ್ರಜಿತ್ ಜೊತೆ ಮಾತನಾಡಿಲ್ಲ. ಇಂದ್ರಜಿತ್ ಬಿಟ್ಟಿರುವ ಆಡಿಯೋದಲ್ಲಿ ಇರುವುದು ನನ್ನ ಮಗನ ಧ್ವನಿಯಲ್ಲ. ಇಂದ್ರಜಿತ್ ಹೇಳಿರುವುದೆಲ್ಲವೂ ಸುಳ್ಳು. ಅವುಗಳಿಂದಾಗಿ ಉಂಟಾಗಿರುವ ಗೊಂದಲದಿಂದಾಗಿ ಈಗ ನನ್ನ ಮಗನನ್ನು ಒಂದು ವಾರದ ಮಟ್ಟಿಗೆ ಬೆಂಗಳೂರಿಗೆ ಕಳುಹಿಸುತ್ತಿದ್ದೇನೆ ಎಂದು ಹೇಳಿದರು.
ಈ ವಿಷಯವಾಗಿ ತಮ್ಮ ಹೋಟೆಲ್​ ಸುದ್ದಿಯ ಕೇಂದ್ರವಾಗಿ ಪರಿಣಮಿಸಿರುವ ಕುರಿತು ಮಾತನಾಡಿರುವ ಅವರು, ಇದು ಹೋಟೆಲೇ ಅಥವಾ ಪೊಲೀಸ್​ ಸ್ಟೇಷನ್ನೇ? ಇದನ್ನೆಲ್ಲ ನೋಡಿ ಈಗಾಗಲೇ ಇಬ್ಬರು ಗ್ರಾಹಕರು ಹೋಟೆಲ್​ನಿಂದ ತೆರಳಿದ್ದಾರೆ. ನಮ್ಮದು ಹೊಟ್ಟೆಪಾಡು, ದಯವಿಟ್ಟು ಸಹಕರಿಸಿ, ಇದನ್ನು ಇಲ್ಲಿಗೇ ಬಿಟ್ಟು ಬಿಡಿ, ನಮ್ಮ ಹೋಟೆಲನ್ನು ಚಿತ್ರೀಕರಿಸಬೇಡಿ ಎಂದು ಮಾಧ್ಯಮದವರನ್ನು ಕೋರಿಕೊಂಡರು.
ಮೇರುನಟ ಹೇಗಿರಬೇಕು ಎಂಬುದನ್ನು ಡಾ.ರಾಜ್​ ಅವರನ್ನು ನೋಡಿ ಕಲಿಯಲಿ; ದರ್ಶನ್​ ಇನ್ನಾದ್ರೂ ತಪ್ಪು ಒಪ್ಪಿಕೊಳ್ಳಲಿ: ಇಂದ್ರಜಿತ್

ದೆಹಲಿಯಲ್ಲಿ ಮೋದಿ-ಬಿಎಸ್​ವೈ ಮಹತ್ವದ ಮಾತುಕತೆ: ಚರ್ಚಿಸಿದ್ದೇನು ಎಂಬುದಕ್ಕೆ ಯಡಿಯೂರಪ್ಪ ಹೇಳಿದ್ದಿಷ್ಟು..

ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − thirteen =
Remember me
