ಧಾರವಾಡ:ಹಾಡಹಗಲೇ ರಿಯಲ್​ ಎಸ್ಟೇಟ್​ ಉದ್ಯಮಿಯೊಬ್ಬರ ಅಪಹರಣವಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರೋಚಕ ಕಾರ್ಯಾಚರಣೆ ನಡೆದಿದ್ದು, ಪ್ರಕರಣವನ್ನು ಸುಖಾಂತವಾಗಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದ ರಿಯಲ್​ ಎಸ್ಟೇಟ್​ ಉದ್ಯಮಿ ಶ್ರೀನಿವಾಸ ನಾಯ್ಡು ಎಂಬವರು ಅಪಹೃತರಾದವರು. ಇವರು ತಮ್ಮ ಅಳಿಯನೊಂದಿಗೆ ಜಮೀನು ನೋಡಲು ಹೋಗಿದ್ದಾಗ ದಾಳಿ ನಡೆಸಿದ್ದ ದುಷ್ಕರ್ಮಿಗಳು, ಅಳಿಯನ ಮೇಲೆ ಹಲ್ಲೆ ನಡೆಸಿ, ಶ್ರೀನಿವಾಸ ನಾಯ್ಡು ಅವರನ್ನು ಅಪಹರಿಸಿದ್ದರು.
ಅಪಹರಣದ ಬಗ್ಗೆ ಅಳಿಯ ದೂರು ನೀಡುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಅಪಹರಣ ನಡೆದ ನಾಲ್ಕೇ ಗಂಟೆಗಳಲ್ಲಿ ಉದ್ಯಮಿಯನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ. ಅಪಹರಣಕಾರರು ಉದ್ಯಮಿಯನ್ನು ಧಾರವಾಡ ಹೊರವಲಯದ ದೇವರ ಹುಬ್ಬಳ್ಳಿಯ ಶೆಡ್ ಒಂದರಲ್ಲಿ ಕೂಡಿ ಹಾಕಿದ್ದರು. ಪೊಲೀಸರು ಅಲ್ಲಿಗೆ ತೆರಳುತ್ತಿದ್ದಂತೆ ಅಪಹರಣಕಾರರು ಪರಾರಿಯಾಗಿದ್ದಾರೆ. ಪೊಲೀಸರು ಉದ್ಯಮಿಯನ್ನು ಧಾರವಾಡ ವಿದ್ಯಾಗಿರಿ ಪೊಲೀಸ್​ ಠಾಣೆಗೆ ಕರೆತಂದಿದ್ದು, ಅಲ್ಲಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್​ ಭೇಟಿಯಾಗಿದ್ದಾರೆ.
ಕೊಳ್ಳುವವರು ಸಿಗಲಿಲ್ಲ ಅಂತ 3 ವರ್ಷದ ಮಗನನ್ನೇ ಕೊಂದ!; ಬಡತನದಿಂದಾಗಿ ಪುತ್ರನನ್ನೇ ಮಾರಾಟಕ್ಕಿಟ್ಟಿದ್ದ..

ದೇಶದ ಮಹಾನ್​ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಲಿದೆ ಈ ಬಾನುಲಿ ಸರಣಿ, ‘ಹಮಾರೇ ಸ್ವತಂತ್ರ್ಯ ತಾ ಸೇನಾನಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − six =
Remember me
