ಉಡುಪಿ:ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಶೆಟ್ಟಿ ಇಂದು ಹಾಡಹಗಲೇ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದನ್ನು ಅವರ ಡೆತ್​ನೋಟ್​ ಬಹಿರಂಗಪಡಿಸಿದೆ.
ಸುಮಾರು 80 ವರ್ಷ ಪ್ರಾಯದ ಭೋಜಣ್ಣ ಶೆಟ್ಟಿ ಇಂದು ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ ಮನೆಯ ಸಿಟೌಟ್​ನಲ್ಲಿ ರಿವಾಲ್ವಾರ್​ನಿಂದ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದರು.
ಇದೀಗ ಅವರ ಡೆತ್​ನೋಟ್ ಸಿಕ್ಕಿದ್ದು, ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ಇಸ್ಮಾಯಿಲ್ ಅವರು ಹೆಸರು ಪ್ರಸ್ತಾಪವಾಗಿದೆ. ಇಬ್ಬರೂ ಸೇರಿ 3.34 ಕೋಟಿ ರೂಪಾಯಿ ಮತ್ತು 5 ಕೆ.ಜಿ. ಬಂಗಾರ ಪಡೆದು ವಂಚಿಸಿದ್ದಾರೆ ಎಂದು ಡೆತ್​ನೋಟ್​ನಲ್ಲಿ ಆರೋಪಿಸಲಾಗಿದೆ.
ಬಡ್ಡಿ ಆಸೆ ತೋರಿಸಿ ಹಣ ಪಡೆದಿದ್ದರು. ಆದರೆ ಬಡ್ಡಿ ನೀಡದೆ ಅಸಲೂ ಹಿಂದಿರುಗಿಸದೆ ಮೊಳಹಳ್ಳಿ ಗಣೇಶ್ ಶೆಟ್ಟಿ ಸತಾಯಿಸುತ್ತಿದ್ದ ವಿಚಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಳಿಗೂ ಹೋಗಿತ್ತು. ಈ ಸಂಬಂಧ ಅವರು ಐದಾರು ಬಾರಿ ರಾಜಿ ಪಂಚಾಯ್ತಿ ನಡೆಸಿದ್ದರು. ಆ ಬಳಿಕವೂ ಹಣ ಕೊಡದೆ ಸತಾಯಿಸಿದ್ದರಿಂದ ಬೇಸತ್ತು ಇಂದು ಗಣೇಶ್​ ಶೆಟ್ಟಿ ಮನೆ ಮುಂಭಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರು ಇಸ್ಮಾಯಿಲ್ ಮತ್ತು ಗಣೇಶ್ ಶೆಟ್ಟಿ ಅವರಿಂದ ನಮ್ಮ ಮನೆಯವರಿಗೆ ಹಣ ವಸೂಲಿ ಮಾಡಿಸಿ ಮರಳಿಸುವಂತೆ ಭೋಜಣ್ಣ ಡೆತ್​​ನೋಟ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
