ಗಂಗೊಳ್ಳಿ:ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ಕಾರಿನಲ್ಲಿ ಹೊರಟ ಉದ್ಯಮಿ ಸೌಪರ್ಣಿಕಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೈಸೂರು ಮೂಲದ ಉದ್ಯಮಿ ಎಂ.ಪಿ.ಮಧು (40) ಮೃತರು. ನೆಲಮಂಗಲದಲ್ಲಿ ಡೀಸೆಲ್​ ಬಂಕನ್ನು ಐದು ವರ್ಷ ಅವಧಿಗೆ ಗುತ್ತಿಗೆ ಪಡೆದು ವ್ಯವಹಾರ ನಡೆಸುತ್ತಿದ್ದ ಮಧು, ಬುಧವಾರ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ಕಾರಿನಲ್ಲಿ ಹೊರಟಿದ್ದರು.
ಕಾರ್ಕಳ-ಉಡುಪಿ ಮಾರ್ಗವಾಗಿ ಹೊಸಾಡು ಎಂಬಲ್ಲಿಗೆ ಬಂದ ಮಧು, ಅರಾಟೆ ಸೇತುವೆ ಸಮೀಪ ಕಾರು ನಿಲ್ಲಿಸಿ ಸೇತುವೆ ಮೇಲಿನಿಂದ ಸೌಪರ್ಣಿಕಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಇವರ ಮೃತದೇಹ ಸೇನಾಪುರ ಗ್ರಾಮದ ಸೌಪರ್ಣಿಕಾ ನದಿಯಲ್ಲಿ ಗುರುವಾರ ಪತ್ತೆಯಾಗಿದೆ. ಅರಾಟೆ ಸೇತುವೆ ಸಮೀಪ ನಿಲ್ಲಿಸಿದ್ದ ಅಪರಿಚಿತ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿದ್ದ ಮೊಬೈಲ್​ ಮೂಲಕ ಮಧು ಗುರುತು ಪತ್ತೆಯಾಗಿದೆ.
ಮಧು ಅವರು ಉದ್ಯಮದಲ್ಲಿ ಡೀಸೆಲ್​ ಮತ್ತು ಪೆಟ್ರೋಲ್​ ಅನ್ನು ಸಾಲವಾಗಿ ಇತರರಿಗೆ ನೀಡಿದ್ದು, ಬಾಕಿ ಹಣ ಮರಳಿ ಬಾರದೆ ಇರುವುದರಿಂದ ಮಾನಸಿಕವಾಗಿ ನೊಂದಿದ್ದರು. ವ್ಯವಹಾರದಲ್ಲಿನ ಆರ್ಥಿಕ ಅಡಚಣೆಯಿಂದ ಮಧು ಸಾಯುವ ನಿರ್ಧಾರ ತೆಗೆದುಕೊಂಡಿರುವ ಬಹುದೆಂದು ಶಂಕಿಸಲಾಗಿದೆ. ಮಧುಗೆ ಪತ್ನಿ ಹಾಗೂ 15 ವರ್ಷದ ಪುತ್ರ ಇದ್ದಾನೆ. ಶುಕ್ರವಾರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಕೊಡಲಾಯಿತು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟವಾಡುತ್ತಲೇ ಲಿಫ್ಟ್​ ಗುಂಡಿಗೆ ಬಿದ್ದು ಪ್ರಾಣಬಿಟ್ಟ 2 ವರ್ಷದ ಮಗು!

ಇಬ್ಬರು ಪತ್ನಿಯರೊಂದಿಗಿನ ಕಾಮದಾಟದ ಲೈವ್​ ದೃಶ್ಯವನ್ನೇ ಮಾರಾಟಕ್ಕಿಟ್ಟ 24ರ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + one =
Remember me
