ಬೆಂಗಳೂರು:ಉದ್ಯಮಿಯ ಪುತ್ರನನ್ನು ಅಪಹರಿಸಿದ ಆರೋಪಿಗಳಿಬ್ಬರು ಒಂದು ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇರಿಸಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ನಡೆದಿದ್ದ ಈ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.
ಫರ್ನಿಚರ್ ಇಂಡಸ್ಟ್ರೀಸ್​ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ವಿಕಾಸ್ ಬೋರ ಎಂಬವರನ್ನು ಅಪಹರಿಸಿದ್ದ ಆರೋಪಿಗಳು, ಬಳಿಕ ಆತನ ತಂದೆ ಮಹೇಂದ್ರ ಕುಮಾರ್​ಗೆ ಕರೆ ಮಾಡಿ ಒಂದು ಕೋಟಿ ರೂ. ನೀಡುವಂತೆ ಬೇಡಿಕೆ ಇರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ವಿಜಯನಗರ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆನಂದ್ ಮತ್ತು ಅಜ್ಗರ್ ಪಾಷಾ ಬಂಧಿತ ಆರೋಪಿಗಳು.
ಇದೇ ಸೆ. 23ರಂದು ಆರೋಪಿಗಳು ವಿಕಾಸ್​ ಅವರನ್ನು ಅಪಹರಿಸಿದ್ದು, ಬಳಿಕ ಮಹೇಂದ್ರ ಕುಮಾರ್​ಗೆ ಕರೆ ಮಾಡಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂಬುದಾಗಿ ಹೇಳಿದ್ದರು. ಅಲ್ಲದೆ 1 ಕೋಟಿ ರೂಪಾಯಿ, ಜತೆಗೆ 15 ಕೆ.ಜಿ. ಚಿನ್ನ ಕೊಡುವಂತೆ ಬೇಡಿಕೆ ಇರಿಸಿದ್ದರು.
ಈ ಸಂಬಂಧದ ದೂರಿನ ಮೇರೆಗೆ ಪಶ್ಚಿಮ ವಿಭಾಗದ ಡಿಸಿಪಿ ವಿಶೇಷ ತಂಡ ರಚಿಸಿದ್ದು, ವಿಜಯನಗರ, ಮಾಗಡಿ ರೋಡ್, ಕಾಮಾಕ್ಷಿ ಪಾಳ್ಯ ಇನ್​ಸ್ಪೆಕ್ಟರ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅಪಹರಣಕ್ಕೆ ಆನಂದ್ ಮತ್ತು ಅರ್ಜಿತ್ ಎಂಬಿಬ್ಬರು ಆರೋಪಿಗಳು ಸುಪಾರಿ ನೀಡಿದ್ದು, ತನ್ವೀರ್ ಸುಪಾರಿ ಪಡೆದಿದ್ದ. ಒತ್ತೆ ಹಣ ಪಡೆದುಕೊಳ್ಳಲು ಆನಂದ್ ಮತ್ತು ತನ್ವೀರ್ ತಂಡದ ಅಜ್ಗರ್ ಬಂದಿದ್ದಾಗ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಬಳಸಿದ್ದ ಕಾರು ಹಾಗೂ ಒಂದು ಮೊಬೈಲ್​ಫೋನ್ ಆರೋಪಿಗಳಿಂದ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ಉಳಿದ ಆರು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಬರ್ತ್​ಡೇ ದಿನವೇ ಕೊಲೆಯಾದ ರೌಡಿಶೀಟರ್​; ಕೇಕ್​ ಕಟ್ ಮಾಡುವಾಗಲೇ ಅಟ್ಯಾಕ್​!

‘ಕಾಂತಾರ’ಕ್ಕೀಗ ಕಾನೂನುಕ್ರಮದ ‘ಕಿರಿಕ್​’: ಯಶಸ್ಸಿನ ಓಟಕ್ಕೆ ಬ್ರೇಕ್​ ಹಾಕುವ ಯತ್ನವೋ?

ಜಾಗಿಂಗ್ ಮಾಡುತ್ತಲೇ ಕುಸಿದು ಬಿದ್ದ ಏರ್​ಫೋರ್ಸ್ ಅಧಿಕಾರಿ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
