ತುಮಕೂರು:ಶಿರಾ ಉಪಸಮರದಲ್ಲಿ ಈಗೇನಿದ್ದರೂ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರರದ್ದೇ ಹವಾ! ಎಲ್ಲಿ ಹೋಗಿ ಬರಲಿ, ಯಾರ ಬಾಯಲ್ಲೂ ವಿಜಯೇಂದ್ರನ ಬಣ್ಣನೆ ನಡೆದಿದೆ. ಶುಕ್ರವಾರ ತಾನೇ ವಿಜಯೇಂದ್ರರನ್ನು ಶಿವಾಜಿ ಮಹಾರಾಜರಿಗೆ ಸಚಿವ ಬಿ.ಶ್ರೀರಾಮಲು ಹೋಲಿಕೆ ಮಾಡಿದ್ದರು.
ಶನಿವಾರ ಶಿರಾದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಬಿ.ವೈ.ವಿಜಯೇಂದ್ರಗೆ ಬಿಲ್ಲು-ಬಾಣ, ಕಿರೀಟ ತೊಡಿಸಿ ಸನ್ಮಾಸಿ ಗೌರವಿಸಲಾಯಿತು. ಕಿರೀಟಧಾರಿ ವಿಜಯೇಂದ್ರ ಬಿಲ್ಲು ಹಿಡಿದು ಬಾಣ ಹೂಡಿ ಪೋಸ್ ಕೊಟ್ಟರು. ಡಿಸಿಎಂ ಅಶ್ವತ್ಥನಾರಾಯಣ್, ಎಂ.ಪಿ.ರೇಣುಕಾಚಾರ್ಯ, ಎನ್.ರವಿಕುಮಾರ್, ರಾಜುಗೌಡ, ಬಸವರಾಜ್, ಪ್ರೊ.ಲಿಂಗಣ್ಣ, ರಾಜೇಂದ್ರ, ಅಪ್ಪಣ್ಣ, ರಘುಕೌಟಿಲ್ಯ ಇದ್ದರು.
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಮ್ಮ ಸಮುದಾಯದ ವ್ಯಕ್ತಿ. ಅವರಿಗೆ ಜಯಚಂದ್ರ ಮೋಸ ಮಾಡಿದ್ದರು. ಪರಿಷತ್ ಚುನಾವಣೆಯಲ್ಲಿ ರಾಜಣ್ಣರ ಮಗ ರಾಜೇಂದ್ರರನ್ನು ಸೋಲಿಸಿ ನಮ್ಮ ಸಮುದಾಯದ ಯುವಕನಿಗೆ ಮೋಸ ಮಾಡಿದ್ದರು. ಹಾಗಾಗಿ, ವಾಲ್ಮೀಕಿ ಸಮುದಾಯದ ಜನತೆ ಕಾಂಗ್ರೆಸ್‌ಗೆ ಮತಹಾಕಬೇಡಿ ಎಂದು ಬಿಜೆಪಿ ಶಾಸಕ ರಾಜುಗೌಡ ಮನವಿ ಮಾಡಿಕೊಂಡರು.
ಪರಿಷತ್​ ಚುನಾವಣೆ: ನಾಲ್ಕು ಕ್ಷೇತ್ರಗಳ ಮತ ಎಣಿಕೆ ಮುಂದೂಡಿಕೆ!

ನಾನು ಮಾಜಿ ಡಿಸಿಎಂ ಅಣ್ಣನ ಮಗಳು… ಮದುವೆ ಆಗದಿದ್ರೆ ರೇಪ್​ ಕೇಸ್​ ಹಾಕ್ತೀನಿ: ಬೆಚ್ಚಿಬೀಳಿಸುತ್ತೆ ಆಕೆಯ ಹಿಸ್ಟರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 11 =
Remember me
