ಬೆಂಗಳೂರು: ಲಾಕ್​ಡೌನ್ ಸಡಿಲಿಕೆಯಿಂದ ಜಲಮಂಡಳಿ ಬಾಕಿ ಬಿಲ್​ನ ಹಣ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಪ್ರತಿ ತಿಂಗಳು ಗೃಹಬಳಕೆ, ವಾಣಿಜ್ಯ ಕಟ್ಟಡಗಳಿಂದ 120 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗುತ್ತಿತ್ತು. ಈ ತಿಂಗಳು ಗ್ರಾಹಕರಿಂದ 103 ಕೋಟಿ ರೂ. ಬಿಲ್ ಮೊತ್ತ ಪಾವತಿಯಾಗಿದೆ.
ಇದನ್ನೂ ಓದಿ:ಸಂಕಷ್ಟದಲ್ಲಿವೆ ಶಾಪಿಂಗ್ ಮಾಲ್​ಗಳು; ಸಾವಿರಾರು ಜನರ ಉದ್ಯೋಗಕ್ಕೂ ಕುತ್ತು
ಕಳೆದೆರಡು ತಿಂಗಳಿಂದ ಸರಿಯಾಗಿ ಪಾವತಿಯಾಗದೆ ಜಲಮಂಡಳಿಗೆ ಆದಾಯ ಕೊರತೆಯಾಗಿತ್ತು. ಲಾಕ್​ಡೌನ್ ಘೋಷಣೆ ನಂತರ ಲಕ್ಷಾಂತರ ಜನರು ಸ್ವಂತ ಊರಿನತ್ತ ಪ್ರಯಾಣ ಬೆಳೆಸಿದ್ದರು. ಇದರಿಂದ ಫೆಬ್ರವರಿ, ಮಾರ್ಚ್ ಬಾಕಿ ನೀರಿನ ಬಿಲ್ ಪಾವತಿ ಸರಿಯಾಗಿ ಆಗಿರಲಿಲ್ಲ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘
ಇದನ್ನೂ ಓದಿ:ಮಳೆಯ ಅಬ್ಬರಕ್ಕೆ ಬೆದರಿದ ರಾಜಧಾನಿ
ಆನ್​ಲೈನ್ ಮೂಲಕ 40 ಕೋಟಿ ರೂ.:ನೀರಿನ ‘ಮೀಟರ್ ರೀಡರ್ ’ಗಳು ಮನೆಮನೆಗೆ ತೆರಳಿ ರಸೀದಿ ನೀಡುತ್ತಿದ್ದರು. ಗ್ರಾಹಕರು ಜಲಮಂಡಳಿಯ ಕಿಯೋಸ್ಕ್​ಗಳಲ್ಲಿ ಬಿಲ್ ಪಾವತಿಸುತ್ತಿದ್ದರು. ಇನ್ನು ಕೆಲವರು ಬೆಂಗಳೂರು ಒನ್ ಸೇವಾ ಕೇಂದ್ರದಲ್ಲಿ ಬಾಕಿ ಬಿಲ್ ಶುಲ್ಕ ಪಾವತಿಸುತ್ತಿದ್ದರು. ಕರೊನಾ ಸೋಂಕು ಅತಂಕದಿಂದಾಗಿ ಮೀಟರ್ ರೀಡರ್​ಗಳು ಏಪ್ರಿಲ್​ನಲ್ಲಿ ಮನೆಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆನ್​ಲೈನ್​ನಲ್ಲಿ ಪ್ರತಿ ತಿಂಗಳು 20ರಿಂದ 25 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಲಾಕ್​ಡೌನ್ ಹಿನ್ನೆಲೆ ಏಪ್ರಿಲ್​ನಲ್ಲಿ ಆನ್​ಲೈನ್ ಮೂಲಕ 40 ಕೋಟಿ ರೂ. ಸಂಗ್ರಹವಾಗಿದೆ.
ಕಾರ್ವಿುಕರ ಕೆಲಸದ ಅವಧಿ ಹೆಚ್ಚಳ ಪ್ರಶ್ನಿಸಿ ಪಿಐಎಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
