ಬೆಂಗಳೂರು:ತುಮಕೂರಿನ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ಅವರಿಗೆ ಟಿಕೆಟ್​ ಪಕ್ಕಾ ಎಂದು ಹೇಳಲಾಗುತ್ತಿದ್ದರೂ ತುಳಸಿಮುನಿರಾಜಗೌಡ ಅವರೂ ಆಕಾಂಕ್ಷಿ ಹೌದು. ಮುನಿರತ್ನ ಅವರಿಗೆ ಟಿಕೆಟ್​ ನೀಡುವುದನ್ನು ಮುನಿರಾಜು ವಿರೋಧಿಸಿದ್ದಾರೆ. ಈ ಕುತೂಹಲದ ಮಧ್ಯೆಯೇ ಸಚಿವ ಡಾ. ಸುಧಾಕರ್​ ಅವರು ಮುನಿರತ್ನ ಪರ ಮಾತನಾಡಿದ್ದಾರೆ.
ಈ ಸರ್ಕಾರ ಮತ್ತು ಬಿಜೆಪಿ ಪಕ್ಷಕ್ಕಾಗಿ ಮುನಿರತ್ನ ದೊಡ್ಡ ಕೊಡುಗೆಯನ್ನೇ ಕೊಟ್ಟಿದ್ದಾರೆ. ಅವರಿಗೆ ಆರ್​ಆರ್​ ನಗರ ಟಿಕೆಟ್​ ವಿಚಾರದಲ್ಲಿ ಅನ್ಯಾಯ ಆಗೋದಿಲ್ಲ. ಮುನಿರತ್ನ ಅವರು ಸಲೀಸಾಗಿ, ಹೆಚ್ಚಿನ ಮತಗಳೊಂದಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಸುಧಾಕರ್​ ಹೇಳಿದ್ದಾರೆ.ಇದನ್ನೂ ಓದಿ:ಕರೊನಾ ಸೋಂಕಿಗೆ ಆಯುರ್ವೇದ ಚಿಕಿತ್ಸೆ? ಕ್ಲಿನಿಕಲ್​ ಟ್ರಯಲ್​​ನಿಂದ ಹೊರಬಿತ್ತು ಅಚ್ಚರಿಯ ಫಲಿತಾಂಶ
ನಾವೆಲ್ಲರೂ ಪಕ್ಷಕ್ಕೆ ಬರುವಾಗ ಕೆಲವೊಂದು ಭರವಸೆಗಳನ್ನು ಕೊಟ್ಟಿದ್ದರು. ಅದನ್ನು ಖಂಡಿತ ಪಕ್ಷ ಈಡೇರಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ಆರ್​ಆರ್​ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿರುವ ಮುನಿರತ್ನ ಅವರು ನಾಳೆ (ಸೆ.30) ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಲಿದ್ದಾರೆ.
ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
