ಬೆಂಗಳೂರು:ಕರೊನಾ ಸೋಂಕಿತರ ದತ್ತಾಂಶ ಆಧರಿಸಿ ವಿಶ್ಲೇಷಣೆ ನಡೆಸಿರುವ ಹಿರಿಯ ಅಧಿಕಾರಿಗಳು, ಲಾಕ್​ಡೌನ್ ಸಡಿಲಿಕೆಯಿಂದ ಆಗಬಹುದಾದ ಅನಾಹುತದ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯ ಮಾಹಿತಿಯೊಂದನ್ನು ರವಾನಿಸಿದ್ದಾರೆ. ಈವರೆಗೆ ಸೋಂಕು ಹರಡಿಸುವ ವೇಗ ಗಮನಿಸಿ ಮೇ 6ರ ವೇಳೆಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಲಿದೆ ಎಂದು ಅಂದಾಜಿಸಿ ವರದಿ ನೀಡಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಎಷ್ಟು ಸಂಖ್ಯೆಯಲ್ಲಿ ಸೋಂಕಿತರು ಹೆಚ್ಚಾಗಬಹುದೆಂದು ಊಹಿಸಿದ್ದು, ಬೆಂಗಳೂರು ಹೊರತುಪಡಿಸಿದರೆ ವಿಜಯಪುರ, ಬೆಳಗಾವಿ, ಮೈಸೂರಲ್ಲಿ ಹೆಚ್ಚಾಗಲಿದೆ ಎಂದು ವಿಶ್ಲೇಷಿಸಿದ್ದಾರೆ. ಈಗ ಸೋಂಕಿತರು ಪತ್ತೆಯಾದ ಜಿಲ್ಲೆಯ ಪೈಕಿ ಕೊಡುಗು, ಚಿತ್ರದುರ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂದೆಯೂ ಅದೇ ಪರಿಸ್ಥಿತಿ ಇರಬಹುದೆಂದು ಅಂದಾಜಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಈಗಾಗಲೇ ಹಸಿರು ವಲಯದಲ್ಲಿರುವ ಜಿಲ್ಲೆಗಳಲ್ಲಿ ಹೊಸ ಪ್ರಕರಣ ಕಂಡುಬರುವ ಸಾಧ್ಯತೆ ಇಲ್ಲ. ಏ.25ರ ದಿನಾಂತ್ಯಕ್ಕೆ ರಾಜ್ಯದಲ್ಲಿ 501 ಪ್ರಕರಣ ಇದ್ದು, ಮುಂದಿನ 12 ದಿನಗಳಲ್ಲಿ 1086ಕ್ಕೆ ತಲುಪಬಹುದೆಂದು ಲೆಕ್ಕ ಹಾಕಿದ್ದಾರೆ.
ಈ ಲೆಕ್ಕಾಚಾರದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬಹುದು. ಯಾವ ಪ್ರದೇಶದಲ್ಲಿ ಹೆಚ್ಚು ಗಮನ ಕೊಡಬಹುದು, ಮುಂಜಾಗ್ರತೆಯಾಗಿ ಆರೋಗ್ಯ ಸೇವೆಗೆ ತಯಾರಿ ಮಾಡಿಕೊಳ್ಳಬಹುದು. ಸೋಂಕಿತರು ಹೆಚ್ಚಾದರೆ, ಕ್ವಾರಂಟೈನ್​ಗೆ ಒಳಗಾಗುವ ಸಂಖ್ಯೆಯೂ ಹೆಚ್ಚಾಗುತ್ತದೆ. ಲಾಕ್​ಡೌನ್ ಜಾರಿಯಲ್ಲಿದ್ದಾಗಲೇ ಇಷ್ಟು ಸೋಂಕು ಇದೆ, ಇನ್ನು ಸಡಿಲಿಕೆಯಾಗಿ ಜನ ಬೇಕಾಬಿಟ್ಟಿಯಾಗಿ ವರ್ತಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹೋದರೆ ಸೋಂಕು ಹರಡುವ ಪ್ರಮಾಣ ಹೆಚ್ಚಾಗಬಹುದೆಂಬುದನ್ನು ವರದಿಯಲ್ಲಿ ಸೂಚ್ಯವಾಗಿ ತಿಳಿಸಿದ್ದಾರೆ.
ಇಬ್ಬರಿಂದ ಪ್ಲಾಸ್ಮಾ ಸಂಗ್ರಹ:ಕರೊನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಮಾಡುವ ಸಂಬಂಧ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಮವಾರ ಇಬ್ಬರು ದಾನಿಗಳಿಂದ ಪ್ಲಾಸ್ಮಾ ಸಂಗ್ರಹಿಸಲಾಯಿತು.
ಕ್ಯಾನ್ಸರ್ ರೋಗ ತಜ್ಞ ಡಾ.ವಿಶಾಲ್ ರಾವ್ ನೇತೃತ್ವದ ತಜ್ಞರ ತಂಡ ದಾನಿಗಳಿಂದ ಪ್ಲಾಸ್ಮ ಸಂಗ್ರಹಿಸಿ ಚಿಕಿತ್ಸೆಗೆ ಸಿದ್ಧವಾಗಿದೆ. ಆದರೆ, ಚಿಕಿತ್ಸೆಗೆ ಒಳಗಾಗಬೇಕಿರುವ ರೋಗಿಗಳನ್ನು ಅಂತಿಮ ಗೊಳಿಸಲಾಗಿಲ್ಲ. ರೋಗಿ ಯಾರು ಎಂಬುದು ಅಂತಿಮಗೊಂಡ ಕೂಡಲೆ ಚಿಕಿತ್ಸೆ ಆರಂಭಿಸಲಾಗುವುದು ಎಂದು ಡಾ. ವಿಶಾಲ್ ರಾವ್ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾರ್ಗಸೂಚಿ ಅನ್ವಯ ಥೆರಪಿಗೆ ಒಳಗಾದ ರೋಗಿಯ ಮೇಲೆ ಒಂದು ತಿಂಗಳು ನಿಗಾ ವಹಿಸಬೇಕಿದೆ. ಆದರೆ, ನಮಗೆ ಒಂದು ವಾರದಲ್ಲಿಯೇ ಫಲಿತಾಂಶ ತಿಳಿಯಲಿದೆ. ಹೀಗಾಗಿ ದಾನಿಗಳು ಸ್ವಯಂಪ್ರೇರಿತರಾಗಿ ಪ್ಲಾಸ್ಮಾ ದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + one =
Remember me
