|ಶಿವಾನಂದ ತಗಡೂರುಬೆಂಗಳೂರು
ಕೆಎಂಎಫ್ ಹಾದಿಯಲ್ಲಿ ಹೆಜ್ಜೆ ಇಡಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ತೀರ್ವನಿಸಿದ್ದು, ಪ್ರತಿ ಉತ್ಪನ್ನಗಳಿಂದಲೂ ಉಪ ಉತ್ಪನ್ನ ತಯಾರಿಗೆ ಮುಂದಾಗಿದೆ. ನಷ್ಟದಲ್ಲಿಯೇ ಇದ್ದ ನಿಗಮ, ಠೇವಣಿ ವಾಪಸ್ ಪಡೆದು ಸಿಬ್ಬಂದಿಗೆ ಸಂಬಳ ಕೊಡುವ ಸ್ಥಿತಿಗೆ ಬಂದಿತ್ತು. ಇದೀಗ ಶಿಸ್ತಿನ ಸುಧಾರಣಾ ಕ್ರಮ ಹಾಗೂ ಹೊಸ ಯೋಜನೆಗಳಿಂದ ಲಾಭಕ್ಕೆ ಮರಳುತ್ತಿದೆ. ಈ ಸವಾಲನ್ನು ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸಾಧಿಸಿರುವುದು ವಿಶೇಷ.
ರಬ್ಬರ್​ನಲ್ಲಿಯೂ ಗ್ರೇಡ್:ರಬ್ಬರ್ ಉತ್ಪಾದನೆ ಬಳಿಕ ಅದನ್ನು ಗ್ರೇಡ್ ಮಾಡಿ ಅದರಲ್ಲಿ ಕೈ ಗ್ಲೋಸ್, ಬಲೂನ್, ಕಾಂಡಂ ಸೇರಿ ಹಲವು ಉತ್ಪನ್ನಗಳನ್ನು ಮಾಡಲು ನಿಗಮ ಮುಂದಾಗಿದೆ. ಈ ರೀತಿಯಲ್ಲಿ ರಬ್ಬರ್ ಉತ್ಪನ್ನಗಳಲ್ಲಿ ಉಪ ಉತ್ಪನ್ನಗಳನ್ನು ಮಾಡುತ್ತಿರುವುದು ಇದೇ ಮೊದಲು. ಈ ಉಪ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿಯೂ ಬೇಡಿಕೆ ಇರುವ ಕಾರಣ ನಿಗಮಕ್ಕೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.
ನೀಲಗಿರಿಯಲ್ಲೂ ಲಾಭ:ನೀಲಗಿರಿ ಮರವನ್ನು ಕತ್ತರಿಸಿದ ಬಳಿಕ ಅದರಲ್ಲಿನ ಚೇಗವಿರುವ ಭಾಗವನ್ನು ಮಾತ್ರ ಪೇಪರ್ ಉತ್ಪಾದನೆಗೆ ಕಳುಹಿಸಿ ಉಳಿದ ರೆಂಬೆ, ತುದಿ ಭಾಗವನ್ನು ಸ್ಥಳದಲ್ಲಿಯೇ ಬಿಡಲಾಗುತ್ತಿತ್ತು. ಇಂಥ ಅನುಪಯುಕ್ತ ಉತ್ಪನ್ನಗಳನ್ನು ಬಿಸಾಕುವ ಬದಲು ಅದನ್ನು ಉರುವಲು ಬ್ರಿಕ್ಸ್ ಮಾಡಲು ನಿಗಮ ತೀರ್ವನಿಸಿದ್ದಲ್ಲದೆ, ಅದರ ಮಾರಾಟದಿಂದ ಲಾಭ ಪಡೆಯುತ್ತಿದೆ.
ನಿಗಮದ ಕಟ್ಟಡದಿಂದ ಬಾಡಿಗೆ:ನಿಗಮದ ಕಟ್ಟಡದಲ್ಲಿ ಸಾಕಷ್ಟು ಜಾಗವಿದ್ದ ಕಾರಣ ಖಾಲಿ ಜಾಗ ಉಪಯೋಗಕ್ಕೆ ಬರುತ್ತಿರಲಿಲ್ಲ. ನಿಗಮಕ್ಕೆ ಅಗತ್ಯವಿರುವ ಕಚೇರಿ ಜಾಗವನ್ನು ಮಾತ್ರ ಮೀಸಲಿಟ್ಟುಕೊಂಡು, ಸುಮಾರು 6 ಸಾವಿರ ಚದರಡಿ ಜಾಗವನ್ನು ಕಚೇರಿಗಾಗಿ ಜವಳಿ ಇಲಾಖೆಗೆ 6 ಲಕ್ಷ ರೂ.ಗೆ ಬಾಡಿಗೆಗೆ ನೀಡಲಾಗಿದೆ. ರೇಷ್ಮೆ ಇಲಾಖೆಗೆ ಮತ್ತೊಂದು ಅಂತಸ್ತಿನಲ್ಲಿ ಬಾಡಿಗೆ ನೀಡಲು ಉದ್ದೇಶಿಸಿದ್ದು, ಅದರಲ್ಲಿಯೂ 6 ಲಕ್ಷ ರೂ. ಬಾಡಿಗೆ ನಿರೀಕ್ಷಿಸಲಾಗಿದೆ.
10 ಸಾವಿರ ಹೆಕ್ಟೇರ್ ಬಾಕಿ:ಅರಣ್ಯ ಇಲಾಖೆಯಿಂದ ನಿಗಮಕ್ಕೆ 44 ಸಾವಿರ ಹೆಕ್ಟೇರ್ ಪ್ರದೇಶವನ್ನು ವಾರ್ಷಿಕ 1.2 ಕೋಟಿ ರೂ ಗುತ್ತಿಗೆಗೆ ನೀಡಲಾಗಿದೆ. ಇನ್ನೂ 10 ಸಾವಿರ ಹೆಕ್ಟೇರ್ ನೀಡಲು ನೀಡುವುದು ಬಾಕಿ ಇದೆ. ಈ ಪ್ರದೇಶವನ್ನೂ ನೀಡಿದರೆ ಅಭಿವೃದ್ಧಿ ಮಾಡಲು ನಿಗಮ ಸಿದ್ಧವಿದೆ.
ರಬ್ಬರ್​ನಿಂದ 5 ಕೋಟಿ ರೂ.:ಅರಣ್ಯ ಅಭಿವೃದ್ಧಿ ನಿಗಮದಿಂದ 4 ಸಾವಿರ ಹೆಕ್ಟೇರ್ ಅನ್ನು ರಬ್ಬರ್ ಉದ್ಯಮಕ್ಕೆ ಮೀಸಲಿಡಲಾಗಿದೆ. ರಬ್ಬರ್ ಕಾರ್ಖಾನೆಯಿಂದ ಪ್ರತಿ ತಿಂಗಳು 5 ಕೋಟಿ ರೂ. ಬರುತ್ತಿದ್ದು, ಅದರಲ್ಲಿ ಖರ್ಚು ವೆಚ್ಚ ಕಳೆದರೂ ಸುಮಾರು 2 ಕೋಟಿ ರೂ. ಉಳಿಯುತ್ತಿದೆ. ಶ್ರೀಲಂಕಾದಿಂದ ಬಂದ 1400 ಕಾರ್ವಿುಕರು ರಬ್ಬರ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದು, ಇನ್ನೂ 489 ಕಾರ್ವಿುಕರು ಬೇಕಿದೆ. ಈ ಖಾಲಿ ಹುದ್ದೆಗಳಿಗೆ ಸ್ಥಳೀಯರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.
ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಾಗ ನಿಗಮದ ಠೇವಣಿ ಪಡೆದು ಸಿಬ್ಬಂದಿಗೆ ಸಂಬಳ ನೀಡಲಾಗುತ್ತಿತ್ತು. ಹಲವು ಸುಧಾರಣಾ ಕ್ರಮ ತೆಗೆದುಕೊಂಡ ಪರಿಣಾಮ ನಿಗಮ -ಠಿ;107 ಕೋಟಿ ಠೇವಣಿ ಇಟ್ಟಿರುವುದಲ್ಲದೆ, ಸಂಬಳ-ಸಾರಿಗೆ ಖರ್ಚು ನೀಡುವಷ್ಟು ಸ್ವಾವಲಂಬಿಯಾಗಿದೆ.
|ತಾರಾ ಅನುರಾಧಅಧ್ಯಕ್ಷೆ, ಅರಣ್ಯ ಅಭಿವೃದ್ಧಿ ನಿಗಮ
ಕಾರ್ಖಾನೆಗಳು ಖರೀದಿಸುವ ಪಲ್ಪ್​ವುಡ್ ಖರೀದಿ ಅತಿ ಕಡಿಮೆ ಬೆಲೆ ಇತ್ತು. ಅದನ್ನು ಪ್ರತಿ ಟನ್​ಗೆ 1 ಸಾವಿರ ಹೆಚ್ಚಿಸಿ 6 ಸಾವಿರ ರೂ. ನಿಗದಿ ಮಾಡಲು ಅಧ್ಯಕ್ಷೆ ತಾರಾ ಅವರ ಶ್ರಮ ಕಾರಣ. ಹಲವಾರು ಸುಧಾರಣಾ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ನಿಗಮ ಲಾಭಕ್ಕೆ ಬರಲು ಸಾಧ್ಯವಾಗಿದೆ.
|ಎ.ರಾಧಾದೇವಿವ್ಯವಸ್ಥಾಪಕ ನಿರ್ದೇಶಕಿ, ಅರಣ್ಯ ಅಭಿವೃದ್ಧಿ ನಿಗಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 6 =
Remember me
