ಕಲ್ಯಾಣ ಕರ್ನಾಟಕದ ರೂವಾರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದಿನ ನಾಯಕತ್ವವನ್ನು ಬಿ.ವೈ.ವಿಜಯೇಂದ್ರ ಅನುಮಾನವಿಲ್ಲದೆ ಮುನ್ನಡೆಸುತ್ತಾರೆ. ಆ ನಂಬಿಕೆಯನ್ನು ಉಳಿಸಿ ಕೊಂಡಿ ದ್ದಾರೆ. ಈಗ ನಮಗೆ ನಾಯಕತ್ವದ ಆತಂಕ ದೂರವಾಗಿದೆ.
| ಎಂ. ರುದ್ರೇಶ್
ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲವನ್ನೂ ಎದುರಿಸಿ ಮೆಟ್ಟಿನಿಂತ ದೈತ್ಯಶಕ್ತಿ. ಇಡೀ ರಾಜ್ಯದಲ್ಲೇಹೋರಾಟ ಅಂದ್ರೆ ಬಿಎಸ್​ವೈ, ಬಿಎಸ್​ವೈ ಅಂದ್ರೆ ಬಿಜೆಪಿ. ಇತ್ತೀಚಿನ ದಿನಗಳಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಉದ್ಭವ ಆಗಿದೆ. ನನ್ನ ಅನುಭವದ ಪ್ರಕಾರ, 1990ರಿಂದ ಬಿಜೆಪಿಯಲ್ಲಿದ್ದು, ಎಲ್ಲ ನಾಯಕರ ಮಧ್ಯದಲ್ಲಿ ಬೆಳೆದು, ನಾ ಕಂಡಂತೆ ಅದೇ ಛಲ-ಅದೇ ಹೋರಾಟ, ಬಿಎಸ್​ವೈ ಅವರ ಎಲ್ಲ ಗುಣ ಮೈಗೂಡಿಸಿಕೊಂಡು ಇನ್ನೂ ಮುಂದೆ ಹೋಗಿ ಚಾಣಕ್ಯನಂತೆ ರಾಜ್ಯದ ಜನರ ಮನ ಗೆದ್ದಿರುವ ಬಿ.ವೈ.ವಿಜಯೇಂದ್ರ ಅವರಲ್ಲಿ ತಂದೆಯಂತೆ ಹೋರಾಟದ ಛಲ ರಕ್ತಗತವಾಗಿ ಬಂದಿದೆ.
ರೈತರ, ಕಾರ್ವಿುಕರ, ಜನರ ನೋವುಗಳಿಗೆ ಚಿಂತನೆ ಬಹಳಷ್ಟಿದೆ. ಆದರೆ ರಾಜ್ಯದ ಅಭಿವೃದ್ದಿ ಬಗ್ಗೆ ದೂರಾಲೋಚನೆ ಮಹತ್ವದ್ದು, ಕ್ರೀಡೆ, ಯುವಜನ, ವೈದ್ಯಲೋಕ, ಕೈಗಾರಿಕೆ, ಉದ್ಯೋಗ, ವಿದ್ಯಾಭ್ಯಾಸ, ವೈಜ್ಞಾನಿಕ ಕೃಷಿ, ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಸಹಾಯ, ನಿರುದ್ಯೋಗ ನಿಮೂಲನೆ, ಸ್ವ ಕೈಗಾರಿಕೆ ಮೂಲಕ ಸ್ವ ಉದ್ಯೋಗ ಕಲ್ಪಿಸುವುದು ಹಾಗೂ ರಾಜ್ಯದ ಸಮಗ್ರ ಅಭಿವೃದ್ದಿಗೆ ಚಿಂತನೆ ಮಾಡುವಂತಹ ವ್ಯಕ್ತಿ ವಿಜಯೇಂದ್ರ.
ಸಂಘಟನೆಯಲ್ಲಿ ನಾನು ಕಂಡಂತೆ ವಿಜಯೇಂದ್ರ ಅವರಂಥ ಪರಿಣಾಮಕಾರಿ ವ್ಯಕ್ತಿ ಇನ್ನೊಬ್ಬರಿಲ್ಲ. ತಂದೆ ಬಿಎಸ್​ವೈ ಹೋರಾಟದ ಕಿಚ್ಚು ಪರಿಣಾಮಕಾರಿಯಾದರೆ, ಮಗ ವಿಜಯೇಂದ್ರ ಸ್ನೇಹ, ಗೌರವ, ಸಜ್ಜನಿಕೆ, ವಿನಯತೆ ಎಲ್ಲದಕ್ಕಿಂತ ತಾಳ್ಮೆ ಅವರನ್ನು ಗೆಲ್ಲುವಂತೆ ಮಾಡುತ್ತದೆ. ಅವರ ಜತೆ ಒಂದು ಬಾರಿ ಸ್ನೇಹ ಮಾಡಿದರೆ, ಮತ್ತೆ ಅವರ ಸ್ನೇಹ ಕಳೆದುಕೊಳ್ಳಲು ಆಗುವುದಿಲ್ಲ. ಒಂದು ಬಾರಿ ಶ್ರೀ ಸಿದ್ಧಗಂಗಾ ಮಠಕ್ಕೆ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಹುಟ್ಟುಹಬ್ಬದಂದು ಅವರ ಆಶೀರ್ವಾದ ಪಡೆಯಲು ಹೋಗಿದ್ದೆವು, ಬೆಳಗ್ಗೆಯೇ ಶ್ರೀಗಳು ಪೂಜೆ ಮುಗಿಸಿ ಹೊರಬಂದ ಕ್ಷಣ, ದೂರದಲ್ಲಿ ವಿಜಯೇಂದ್ರ ಮತ್ತು ನಾನು ಕುಳಿತಿದ್ದೆವು. ಇನ್ನೂ ಅನೇಕ ಭಕ್ತಾದಿಗಳು, ಹಿರಿಯರು, ಪ್ರಮುಖ ನಾಯಕರು ಇದ್ದರು. ಆದರೆ ಶ್ರೀಗಳು ಬಂದ ಕೂಡಲೆ ನೇರವಾಗಿ ವಿಜಯೇಂದ್ರ ಅವರನ್ನು ಕರೆದರು. ಜತೆಯಲ್ಲಿದ್ದವರೆಲ್ಲ ಗಾಬರಿಯಾದೆವು. ಏನಪ್ಪ, ಎಲ್ಲರನ್ನೂ ಬಿಟ್ಟು ವಿಜಯೇಂದ್ರರನ್ನು ಕರೆದರಲ್ಲ ಅಂದುಕೊಂಡೆವು. ಶ್ರೀಗಳು ಬಿವೈವಿ ಮುಖ ನೋಡಿ, ನಿಮ್ಮಪ್ಪನಿಗಿಂತ ಹೆಸರು ಮಾಡುತ್ತೀಯಾ, ನಿನಗೆ ಆ ಶಕ್ತಿ ಇದೆ. ಜನರಿಗೆ ಒಳ್ಳೆಯದು ಮಾಡು ಅಂತ ಹೇಳಿ ಹಣೆಗೆ ವಿಭೂತಿ ಹಚ್ಚಿದರು. ನಾವೆಲ್ಲರೂ ಆ ದೃಶ್ಯವನ್ನು ಮರೆಯಲು ಸಾಧ್ಯವಿಲ್ಲ.
ರಾಜಕೀಯದಿಂದ ದೂರ ಉಳಿದಿದ್ದ ಬಿವೈವಿ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಕ್ಕೆ ಬರುವಂತಾಯಿತು. ಕೆಲವರು ತಂದೆಯ ಬಗ್ಗೆ, ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದರು. ಎಲುಬಿಲ್ಲದ ನಾಲಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾಗ, ಅವರಿಗೆ ತುಂಬಾ ನೋವಾಗುತ್ತಿತ್ತು. ನಾವುಗಳು ಆ ಬಗ್ಗೆ ಚರ್ಚೆ ಮಾಡುತ್ತಿದ್ದೇವು. ಅವರ ತಂದೆಯಿಂದ ಅನೇಕ ಜನ ಉಪಯೋಗ, ಅಧಿಕಾರ ಪಡೆದು ಅವರ ಮುಂದೆ ಗೌರವಿಸುವಂತೆ ನಟನೆ ಮಾಡಿ ಹಿಂದೆ ಬಾಯಿಗೆ ಬಂದಂತೆ ಮಾತನಾಡಿದ್ದು ಅವರಿಗೆ ಬೇಸರ ತಂದಿತ್ತು, ಆ ಸಂದರ್ಭದಲ್ಲಿ ನಾವುಗಳು ಸಲಹೆ ಕೊಟ್ಟು ಹಿಂದಿನಿಂದ ಯಾವ ಮುಖ್ಯಮಂತ್ರಿ ಮಕ್ಕಳು, ಮತ್ತೆ ರಾಜಕೀಯದಲ್ಲಿ ಮುಂದೆ ಬಂದಿಲ್ಲ. ನಮ್ಮ ಸಮಾಜ ನಿಮ್ಮ ಕುಟುಂಬವನ್ನು ಬಹಳ ಗೌರವದಿಂದ ಒಪ್ಪಿದೆ. ಬಿಎಸ್​ವೈ ಅಂದ್ರೆ ಸಮಾಜ, ಸಮಾಜ ಅಂದ್ರೆ ಬಿಎಸ್​ವೈ. ಬಿಎಸ್​ವೈ ತಲೆಗೆ ಕೊನೆ ಮಾಡಬೇಡಿ. ನೀವು ಆಚೆ ಬನ್ನಿ. ಎಲ್ಲ ಸಮಾಜದವರು ನಿಮ್ಮನ್ನು ಒಪ್ಪುತ್ತಾರೆ ಎಂದುಹೇಳಿ ಅವರನ್ನ ಒಪ್ಪಿಸಿದೆವು. ಆಗ ವಿಜಯೇಂದ್ರ ಅವರು, ‘ನನಗೆ ರಾಜಕೀಯ ಬೇಡ. ನಮ್ಮ ಮನೆಯಲ್ಲಿ ನಮ್ಮಣ್ಣ ಬಿ.ವೈ.ರಾಘವೇಂದ್ರ ಮತ್ತೆ ತಂದೆ ಸಾಕು. ನಾನು ಉದ್ಯಮಿ ಆಗಿರುತ್ತೇನೆ’ ಎನ್ನುತ್ತಿದ್ದರು. ಕೊನೆಗೆ ನಮ್ಮ ಮನವಿಗೆ ಒಪ್ಪಿ, ದಾವಣಗೆರೆಯಲ್ಲಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ತೀರ್ಮಾನ ಮಾಡಿದರು. ಹೋದರೆ, ಬಲಿಷ್ಠವಾಗಿರುವವರ ಜತೆ ಹೋರಾಟ ಮಾಡಬೇಕು ಅಂತ ಯೋಚಿಸಿ ವರುಣಾ ಕ್ಷೇತ್ರ ಆಯ್ಕೆ ಮಾಡಿಕೊಂಡರು. ಆದರೆ ಮುಂದೆ ಗೊತ್ತೇ ಇದೆ. ಇಡೀ ರಾಜ್ಯದಲ್ಲಿ ವಿಜಯೇಂದ್ರ ಎನ್ನುವ ಹೆಸರನ್ನು ಒಬ್ಬ ನಾಯಕನನ್ನಾಗಿ ಮಾಡಿತು. ಆ ದಿನ ವಿಜಯೇಂದ್ರರಿಗೆ ಟಿಕೆಟ್ ನೀಡಿದ್ದರೆ, ಎಂಎಲ್​ಎ ಆಗುತ್ತಿದ್ದರು. ಬೇರೆಯವರಿಗೆ ಟಿಕೆಟ್ ನೀಡಿದಾಗಲೂ ಆ ನೋವನ್ನು ತಾಳ್ಮೆಯಿಂದ ನಿಭಾಯಿಸಿದ ಕ್ಷಣ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಆ ಒಂದು ತಾಳ್ಮೆ ಇಂದು ರಾಜ್ಯಕ್ಕೆ ಒಬ್ಬ ಮಾದರಿ ಯುವ ನಾಯಕನನ್ನು ಸೃಷ್ಟಿಸಿತು. ರಾಜ್ಯದ ಎಲ್ಲ ಸಮಾಜ, ಸಮುದಾಯ, ಹರಗುರು-ಚರಮೂರ್ತಿಗಳ ಪ್ರೀತಿ, ವಿಶ್ವಾಸವನ್ನು ವಿಜಯೇಂದ್ರ ಗೆದ್ದಿರುವುದು ಅವರ ಯಶಸ್ಸಿಗೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕದ ರೂವಾರಿ ಯಡಿಯೂರಪ್ಪ ಅವರ ಮುಂದಿನ ನಾಯಕತ್ವವನ್ನು ವಿಜಯೇಂದ್ರ ಅನುಮಾನವಿಲ್ಲದೆ ಮುನ್ನಡೆಸುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಈಗ ನಮಗೆ ನಾಯಕತ್ವದ ಆತಂಕ ದೂರವಾಗಿದೆ. ಕರೊನಾ ಕಾಲದಲ್ಲಿ ಅವರ ಸೇವಾ ಮನೋಧರ್ಮ, ಸಂಕಷ್ಟ ಪರಿಸ್ಥಿತಿಯನ್ನು ಯುವ ಪಡೆ ಕಟ್ಟಿಕೊಂಡು ನಿರ್ವಹಿಸಿದ ರೀತಿ, ಈಗಾಗಲೆ ಸರ್ಕಾರದಲ್ಲಿ ಅನೇಕ ಯೋಜನೆಗಳು, ಅಭಿವೃದ್ಧಿ, ಕೈಗಾರಿಕೆ, ಕೃಷಿ, ಉದ್ಯೋಗ, ವಿದ್ಯಾಭ್ಯಾಸ, ಆರೋಗ್ಯ, ಯುವ ಕರ್ನಾಟಕದ ಬಗ್ಗೆ ಅವರ ಸಲಹೆಗಳು ನಾಯಕತ್ವ ಗುಣವನ್ನು ತೋರಿಸುತ್ತದೆ. ಸೇವಾಕಾರ್ಯದಿಂದ ಅವರು ಅಶ್ವತ್ಥ ಮರ(ಅರಳಿ ಮರ)ದ ಹಾಗೆ ದೊಡ್ಡ ವೃಕ್ಷವಾಗಿ ಬೆಳೆದು ಸಮಾಜಕ್ಕೆ ಆಸರೆ ಆಗಬೇಕೆಂಬುದು ನಮ್ಮೆಲ್ಲರ ಬಯಕೆ. ಪೂರ್ವದಿಂದ ಪಶ್ಚಿಮ-ಉತ್ತರದಿಂದ ದಕ್ಷಿಣಕ್ಕೆ ಕಲ್ಯಾಣ ಕರ್ನಾಟಕದ ಕಾಯಕಯೋಗಿಯಾಗಿ, ಕರುನಾಡಿನ ಭವಿಷ್ಯದ ನಾಯಕರಾದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು.
(ಲೇಖಕರು ರಾಮನಗರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve − 6 =
Remember me
