ಬೆಂಗಳೂರು:ಚುನಾವಣೆ ಇನ್ನೇನು ಹತ್ತಿರದಲ್ಲೇ ಇದ್ದು ಇದೀಗ ಸ್ಪಷ್ಟ ಬಹುಮತದ ಗುರಿ ಹೊಂದಿರುವ ಬಿಜೆಪಿ ತನ್ನ ತಯಾರಿಯನ್ನು ಚುರುಕುಗೊಳಿಸಿದೆ.
ಐದು ಹಂತಗಳಲ್ಲಿ ನಾಯಕರ ಪ್ರವಾಸ, ವಿವಿಧ ಸಮಾವೇಶಗಳು, ಪ್ರಣಾಳಿಕೆ ಸಂಗ್ರಹ ಕಾರ್ಯ, ಪ್ರಚಾರ ಹಾಗೂ ಫಲಾನುಭವಿಗಳ ಸಮ್ಮೇಳನ ಆಯೋಜನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಚಟುವಟಿಕೆಗಳಿಗೆ ಪಕ್ಷದ ಪ್ರಮುಖರಾದ ಸಚಿವರು, ಶಾಸಕರು, ರಾಜ್ಯ ಪದಾಧಿಕಾರಿಗಳನ್ನು ಸಂಚಾಲಕರು, ಉಸ್ತುವಾರಿಗಳಾಗಿ ಬಿಜೆಪಿ ಪಕ್ಷ ನೇಮಕ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ‌ ನಳಿನ್ ಕುಮಾರ್ ಕಟೀಲ್ ಈ ಆದೇಶ ಹೊರಡಿಸಿದ್ದು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ.
ವಿಜಯೇಂದ್ರಗೆ, ಬಿಜೆಪಿಯ 7 ಮೋರ್ಚಾಗಳ ಜಿಲ್ಲಾ ಸಮಾವೇಶಗಳ ಹೊಣೆಗಾರಿಕೆ ನೀಡಲಾಗಿದ್ದು ಈ ಮೋರ್ಚಾಗಳ ಜಿಲ್ಲಾ ಸಮಾವೇಶಗಳಿಗೆ ರಾಜ್ಯ ಸಂಚಾಲಕರಾಗಿ ವಿಜಯೇಂದ್ರರನ್ನು ನೇಮಕ ಮಾಡಲಾಗಿದೆ. ಒಟ್ಟು ಹತ್ತು ಜನರ ತಂಡಕ್ಕೆ ವಿಜಯೇಂದ್ರ ಸಂಚಾಲಕರಾಗಿದ್ದಾರೆ.
ರಾಜ್ಯದ ನಾಲ್ಕು ಭಾಗಗಳಲ್ಲಿ ನಾಲ್ಕು ತಂಡಗಳಾಗಿ ರಥಯಾತ್ರೆಯನ್ನು ಆಯೋಜಿಸಸಲಾಗಿದ್ದು ನಾಲ್ಕು ಕಡೆಯ ರಥಯಾತ್ರೆಗಳಿಗೂ ಸಂಚಾಲಕರ ನೇಮಕ ಮಾಡಲಾಗಿದೆ. ಎಲ್ಲ 4 ಯಾತ್ರೆಗಳಿಗೂ ಪ್ರಮುಖರು, ಸಹ ಪ್ರಮುಖರಾಗಿ ಸಚಿವ ಸಿಸಿ ಪಾಟೀಲ್ ಪರಿಷತ್ ಸದಸ್ಯ ಎನ್ ರವಿಕುಮಾರ್, ಹಾಗೂ ಗೀತಾ ವಿವೇಕಾನಂದ ನೇಮಕವಾಗಿದ್ದಾರೆ.
ಸಂಚಾಲಕರು ಮತ್ತು ಸಹ ಸಂಚಾಲಕರ ಹೆಸರುಗಳು ಹೀಗಿವೆ:ಯಾತ್ರೆ -1ಎಂ ರಾಜೇಂದ್ರ – ರಾಜ್ಯ ಉಪಾಧ್ಯಕ್ಷರುಎಸ್ ದತ್ತಾತ್ರಿ – ಮಾಜಿ ಜಿಲ್ಲಾ ಅಧ್ಯಕ್ಷರು,ಶಿವಮೊಗ್ಗಕಿಶೋರ್ – ಜಿಲ್ಲಾ ಉಪಾಧ್ಯಕ್ಷರು ಉಡುಪಿಯಾತ್ರೆ – 2ಪರಿಷತ್ ಸದಸ್ಯ ಚಲವಾದಿ ನಾರಯಣಸ್ವಾಮಿಜಿಲ್ಲಾ ಪ್ರಭಾರಿ ಸಚ್ಚಿದಾನಂದವಿಧಾನಪರಿಷತ್ ಸದಸ್ಯ – ಅ ದೇವೇಗೌಡಯಾತ್ರೆ – 3ಮಾಜಿ ಪರಿಷತ್ ಸದಸ್ಯ ಅರುಣ್ ಶಹಾಪುರಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿಮಲ್ಲಿಕಾರ್ಜುನ ಬಾಳೀಕಾಯಿ – ಯುವ ಮೋರ್ಚಾಯಾತ್ರೆ – 4ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ, ಅಮರನಾಥ್ ಪಾಟೀಲ್, ಸಿದ್ದೇಶ್ ಪಾಟೀಲ್
ಒಟ್ಟಿನಲ್ಲಿ ಇದೀಗ ಕರ್ನಾಟಕ ಸರ್ಕಾರ ನಡೆಸುತ್ತಿರುವ ಬಿಜೆಪಿ ಕೂಡ ಚುರುಕಾದ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು ಕಣ ರಂಗೇರಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
