ಶಿರಾ ಗೆಲುವು ಆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹಳೆಯ ಮೈಸೂರು ಭಾಗದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವಂತೆ ವಿಸ್ತರಿಸುವುದು ನಮ್ಮ ಗುರಿ, ಅಲ್ಲಿತನಕ ಕೈಕಟ್ಟಿ ಕೂರುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಶಿರಾ ಚುನಾವಣಾ ಪ್ರಚಾರದ ಉಸ್ತುವಾರಿಯಾಗಿ ಪಕ್ಷಕ್ಕೆ ಅಭೂತಪೂರ್ವ ಗೆಲುವು ತರುವಲ್ಲಿ ಹಗಲಿರುಳು ಶ್ರಮಿಸಿದ ವಿಜಯೇಂದ್ರ, ತಮ್ಮ ಅಭಿಪ್ರಾಯಗಳನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.
# ಶಿರಾ ಗೆಲುವನ್ನು ಯಾವ ರೀತಿ ವಿಶ್ಲೇಷಣೆ ಮಾಡುವಿರಿ?
ನಮ್ಮ ಮುಂದೆ ದೊಡ್ಡ ಸವಾಲು ಇತ್ತು. ಶಿರಾ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಭದ್ರಕೋಟೆ. ಇಲ್ಲಿ ಬಿಜೆಪಿ ಗೆಲುವು ಸಾಧ್ಯವೂ ಇಲ್ಲವೆಂಬುದು ಪ್ರತಿಪಕ್ಷಗಳ ಅಭಿಪ್ರಾಯವಾಗಿತ್ತು.ತಮ್ಮ ತಂಡದ ಕಾರ್ಯ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೊಡ್ಡ ಯಶಸ್ಸು ತೃಪ್ತಿ ತಂದಿದೆ.
# ಶಿರಾದಲ್ಲಿ ನಿಮ್ಮ ಕಾರ್ಯತಂತ್ರ ಏನಾಗಿತ್ತು?
ಇಂದಿನ ಚುನಾವಣೆ ಕಣದಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯ. ಆದ್ದರಿಂದ ನಾವು ಮೊದಲು ಮಾಡಿದ ಪ್ರಯತ್ನ ಹೆಚ್ಚಿನ ಪ್ರಮಾಣದಲ್ಲಿ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಆನಂತರ ಮಹಿಳೆ ಯರನ್ನು ಸೆಳೆದೆವು. ಅದು ನಮ್ಮ ಸವಾಲನ್ನು ಅರ್ಧದಷ್ಟು ಕಡಿಮೆ ಮಾಡಿತು.
# ಅನೇಕ ಭರವಸೆ ಕೊಟ್ಟಿದ್ದೀರಿ, ಅವೆಲ್ಲವನ್ನೂ ಹೇಗೆ ಈಡೇರಿಸುತ್ತೀರಿ?
ನಮ್ಮ ಮುಂದೆ ಮೊದಲನೇ ಕೆಲಸ ಮದಲೂರು ಕೆರೆಗೆ ನೀರು ತುಂಬುವುದು. ಸಿಎಂ ಕೂಡ ಭರವಸೆ ನೀಡಿದ್ದಾರೆ. ಕೆ.ಆರ್. ಪೇಟೆಯಲ್ಲಿಯೂ ಅನೇಕ ನೀರಾವರಿ ಯೋಜನೆಗಳ ಭರವಸೆ ನೀಡಿದ್ದೆವು. ಅವುಗಳನ್ನು ಈಗ ಕಾರ್ಯರೂಪಕ್ಕೆ ತರಲಾಗುತ್ತಿದೆ. ಅದೇ ರೀತಿ ಇಲ್ಲಿನ ಭರವಸೆ ಈಡೇರಿಸುತ್ತೇವೆ.
# ವಿಜಯೇಂದ್ರ ಅಂದರೆ ವಿಜಯ ಎಂಬ ಭಾವನೆ ಪಕ್ಷದಲ್ಲಿ ಮೂಡುತ್ತಿದೆ
ಶಿರಾದಲ್ಲಿನ ಗೆಲುವು ನನ್ನೊಬ್ಬನ ಶ್ರಮವಲ್ಲ. ನಮ್ಮ ಎಲ್ಲ ಮುಖಂಡರು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ಅದರಲ್ಲಿ ಯಶಸ್ವಿಯಾಗಿದ್ದೇವೆ. ಈ ಕ್ಷೇತ್ರಕ್ಕೆ ಸೀಮಿತವಾಗುವುದಿಲ್ಲ. ಹಳೆಯ ಮೈಸೂರು ಭಾಗದಲ್ಲಿ ಪಕ್ಷದ ನೆಲೆ ವಿಸ್ತರಣೆ ಮಾಡುತ್ತೇವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
