ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಎಂದು ಕಾಂಗ್ರೆಸ್ ಸರ್ಕಾರ ಬಿಂಬಿಸುತ್ತಿದೆ. ಆದರೆ ಬೆಲೆಗಳ ಏರಿಕೆ, ಶೂನ್ಯ ಸಾಧನೆಯೇ ಒಂದು ವರ್ಷದ ಕೊಡುಗೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಢಿಯಉನ್ನು ಉದ್ಧೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ವೈಫಲ್ಯಗಳನ್ನು ವಿವರಿಸಿದ್ಧಾರೆ. ನಿಚ್ಚಳ ಬಹುಮತ ನೀಡಿದ ಜನರು ಸಾಕಷ್ಟು ನಿರೀಕ್ಷೆಯಿಟ್ಟಿದ್ದರು. ಕಳೆದ ಒಂದು ವರ್ಷದ ಯಾವುದೇ ಒಂದು ಹೊಸ ಯೋಜನೆಗೆ ಚಾಲನೆ, ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಧೋನಿಗೆ ಹ್ಯಾಂಡ್ ಶೇಕ್​ ​ಮಾಡುವಷ್ಟು ಕನಿಷ್ಠ ಜ್ಞಾನ ಆರ್​ಸಿಬಿ ಆಟಗಾರರಿಗೆ ಇಲ್ಲ; ಕಿಡಿಕಾರಿದ ಮಾಜಿ ಕ್ರಿಕೆಟಿಗರು
ಸರ್ಕಾರದ ವೈಫಲ್ಯ, ಕಾರ್ಯವೈಖರಿ ಬಗ್ಗೆ ಟೀಕೆ-ಟಿಪ್ಪಣಿ ಜತೆಗೆ ರಚನಾತ್ಮಕ ಸಲಹೆ ನೀಡುವುದು ಪ್ರತಿಪಕ್ಷದ ಕರ್ತವ್ಯ. ಆದರೆ ಸಿಎಂ ಆದಿಯಾಗಿ ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು ಅಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿ, ಅಸಾಧ್ಯವಾದದ್ದು ಸಾಧ್ಯವಾಗಿಸಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಜನರ ಭಾವನೆ, ನಾಡಿಮಿಡಿತ, ಕುಂದು-ಕೊರತೆ ಅರಿತುಕೊಳ್ಳುವಲ್ಲಿ ಮುಗ್ಗರಿಸಿದ್ದನ್ನು ಮರೆಮಾಚುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಜತೆಗೆ ಸಂಘರ್ಷದ ಹಾದಿ ಹಿಡಿಯುವ ಹೊಸ ಪ್ರಯೋಗವನ್ನು ಸಿಎಂ, ಡಿಸಿಎಂ, ಸಚಿವರು, ಸರ್ಕಾರ ಮಾಡಿದೆ. ಬರ ಪರಿಹಾರ ನಿರ್ವಹಣೆ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸಿದೆ. ಅಭಿವೃದ್ಧಿ ಸ್ಥಗಿತ, ಕಾನೂನು ಮತ್ತು ಸುವ್ಯವಸ್ಥೆ ಕುಸಿತದಿಂದ ಬಂಡವಾಳ ಹೂಡಿಕೆದಾರರು ಹಿಂಜರಿತ. ಮಹಿಳೆಯರಿಗೆ ಅಸುರಕ್ಷತೆ ಭಯ, ರೈತರ ಬಗ್ಗೆ ಅಸಡ್ಡೆ, ಬೆಲೆಗಳ ಏರಿಕೆ ಹೀಗೆ ವೈಫಲ್ಯಗಳ ಕೊಡುಗೆ ದೊಡ್ಡದಿದೆ. ಬರ ಪರಿಹಾರ ನಿರ್ವಹಣೆಯಲ್ಲಿ ಸರ್ಕಾರದ ನಡವಳಿಕೆ ಅಕ್ಷಮ್ಯ ಅಪರಾಧವಾಗಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
