ಬ್ಯಾಡಗಿ:ಸ್ಥಳೀಯ ಮಾರುಕಟ್ಟೆಯಲ್ಲಿ ಗುರುವಾರದ ಟೆಂಡರ್‌ನಲ್ಲಿ ಡಬ್ಬಿ ತಳಿಯ ಮೆಣಸಿನಕಾಯಿ ಕ್ವಿಂಟಾಲ್‌ಗೆ 36,999 ರೂಪಾಯಿಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಕರೊನಾ ವೈರಸ್ ಹಾವಳಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಗದ್ದಲ, ಅತಿವೃಷ್ಟಿ ಮುಂತಾದ ಸಮಸ್ಯೆಗಳಿದ್ದರೂ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಯಾವುದೇ ಅಡ್ಡಿ-ಆತಂಕವಿಲ್ಲದೆ ಆವಕ ಏರಿಕೆಯಿಂದ ರೈತರಿಗೆ ಬಂಪರ್ ದರ ಸಿಗುತ್ತಿದೆ.
ಅಲ್ಲದೆ, ಕಳೆದ ವಾರ ಮೆಣಸಿನಕಾಯಿಗೆ 35,555 ರೂ. ದರದಲ್ಲಿ ಮಾರಾಟವಾಗಿತ್ತು. ಗುರುವಾರ ಇಲ್ಲಿನ ವಿ.ಎ. ಬಾಗೋಜಿ ದಲಾಲಿ ಅಂಗಡಿಯಲ್ಲಿ ಟೆಂಡರ್‌ಗೆ ಇಟ್ಟಿದ್ದ ಅನಂತಪುರ ಜಿಲ್ಲಾ ಅವಲಗಟ್ಟ ಗ್ರಾಮದ ಹನುಮರೆಡ್ಡಿ ಎಂಬ ರೈತರ 28 ಚೀಲ ಸುಮಾರು 9 ಕ್ವಿಂಟಾಲ್‌ನ ಮೆಣಸಿನಕಾಯಿ ಒಂದೇ ಲಾಟ್ ಅನ್ನು ಕಿಶೋರ ಆ್ಯಂಡ್ ಕಂಪನಿಯು ಕ್ವಿಂಟಾಲ್‌ಗೆ 36,999 ರೂ. ನಂತೆ ಅತಿ ಹೆಚ್ಚಿನ ದರದಲ್ಲಿ ಖರೀದಿಸಿದ್ದು, ಹಿಂದಿನ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ:ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ಗುಣಮಟ್ಟದ ಒಣಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚು ದರ ಸಿಗಲಿದೆ. ರೈತರು ನೀರು ಸಿಂಪಡಿಸದೆ, ಸ್ವಚ್ಛ ಹಾಗೂ ಒಣಕಾಯಿಗಳನ್ನು ಟೆಂಡರ್‌ಗೆ ಹಾಕಿದಲ್ಲಿ ಖರೀದಿದಾರರು ಉತ್ತಮ ದರ ನೀಡುತ್ತಾರೆ. ಗುರುವಾರ ಡಬ್ಬಿ ತಳಿ 36,999 ರೂ. ನಂತೆ ಖರೀದಿಯಾಗಿರುವುದು ರೈತರಿಗೆ ಖುಷಿ ತಂದಿದೆ. ಮಾರುಕಟ್ಟೆಯಲ್ಲಿ ಈ ದರ ಒಂದು ದಾಖಲೆ ಎಂದು ಎಪಿಎಂಸಿ ಕಾರ್ಯದರ್ಶಿಎಸ್.ಬಿ. ನ್ಯಾಮಗೌಡ್ರ ತಿಳಿಸಿದ್ದಾರೆ.
ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ, ಗಂಡನ ಕೊಲೆ ಮಾಡಿರುವ ಶಂಕೆಯಿದ್ದರೂ ಈ ಕೇಸ್​ನಲ್ಲಿ ಆಸ್ತಿ ಸಿಗುತ್ತೆ…

ಕ್ಷುಲ್ಲಕ ಜಗಳಕ್ಕೆ ಎಡಗೈ ಕಟ್​: ಬಿಜೆಪಿ ನಾಯಕನ ಸಂಬಂಧಿ ಯುವಕನಿಗೆ ಹೊಡೆದು ರೈಲ್ವೇ ಹಳಿಗೆಸೆದರು…

ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
